/newsfirstlive-kannada/media/post_attachments/wp-content/uploads/2025/02/rajat_patidar_KOHLI.jpg)
ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದದಲ್ಲಿರುವ ಆಟಗಾರರ ಹೆಸರನ್ನು ಘೋಷಣೆ ಮಾಡಿದೆ. ವಿಶೇಷ ಅಂದ್ರೆ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಇದ್ದಾರೆ.
ಬಿಸಿಸಿಐ A+ ಕ್ಯಾಟಗರಿಯಲ್ಲಿ ನಾಲ್ವರು ಆಟಗಾರರು ಇದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಬಿಸಿಸಿಐನ ಈ ಒಪ್ಪಂದದಲ್ಲಿ ಒಟ್ಟು 34 ಆಟಗಾರರು ಒಳಗೊಂಡಿದ್ದಾರೆ. A+ ವಿಭಾಗದಲ್ಲಿ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂಪಾಯಿ ಸಂಭಾವನೆ ಪಡೆದರೆ, ವಿಭಾಗದಲ್ಲಿ 5 ಕೋಟಿ ರೂಪಾಯಿ ಹಾಗೂ B ವಿಭಾಗದಲ್ಲಿ 3 ಕೋಟಿ, C ವಿಭಾಗದಲ್ಲಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.
34 ಆಟಗಾರರಲ್ಲಿ 20 ಆಟಗಾರರು ಸಿ ಕ್ಯಾಟಗರಿ ಒಪ್ಪಂದದಲ್ಲಿ ಇದ್ದಾರೆ. ಅದರಲ್ಲಿ ರಜತ್ ಪಾಟೀದಾರ್ ಕೂಡ ಇದ್ದಾರೆ. ಅವರಿಗೆ ಬಿಸಿಸಿಐ ವಾರ್ಷಿಕ ಒಂದು ಕೋಟಿ ಸಂಭಾವನೆ ನೀಡಲಿದೆ. ಇನ್ನು ಕಳೆದ ಬಾರಿಯೂ ರಜತ್ ಪಾಟೀದಾರ್, ಸಿ ಕ್ಯಾಟಗರಿಯಲ್ಲಿದ್ದರು. 2024ರ ಒಪ್ಪಂದಿಂದ ಕೈಬಿಡಲಾಗಿದ್ದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಲಕ್ ಬದಲಾಗಿದೆ. ಇಬ್ಬರನ್ನೂ ಬಿಸಿಸಿಐ ತನ್ನ ಒಪ್ಪಂದದಲ್ಲಿ ಮತ್ತೆ ಸೇರಿಸಿಕೊಂಡಿದೆ.
ಇದನ್ನೂ ಓದಿ: ಬಿಸಿಸಿಐನ ವಾರ್ಷಿಕ ಒಪ್ಪಂದದಲ್ಲಿ ಆರ್ಸಿಬಿ ಕ್ಯಾಪ್ಟನ್.. ಎಷ್ಟು ಕೋಟಿ ಸಂಭಾವನೆ ನೀಡುತ್ತೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್