/newsfirstlive-kannada/media/post_attachments/wp-content/uploads/2025/03/RAJAT.jpg)
ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್​ಗಳ ಅಮೋಘವಾದ ಗೆಲುವು ಪಡೆದಿದೆ. ಆರ್​ಸಿಬಿ ನೀಡಿದ್ದ 197 ರನ್​ಗಳ ಟಾರ್ಗೆಟ್ ತಲುಪಲಾಗದೇ ಚೆನ್ನೈ ಹೀನಾಯವಾಗಿ ಸೋತಿದೆ. 2008ರ ಬಳಿಕ ಚೆನ್ನೈ ವಿರುದ್ಧ ಆರ್​ಸಿಬಿ ಗೆಲವು ಪಡೆದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ಇನ್ನು, ಪಂದ್ಯ ಮುಗಿದ ಬಳಿಕ ಆರ್​ಸಿಬಿ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದರು. ಇದೇ ವೇಳೆ ಮೈದಾನದಲ್ಲಿ ಮಹೇಂದ್ರ ಸಿಂಗ್ ಧೋನಿಯನ್ನು ವಿರಾಟ್ ಕೊಹ್ಲಿ ಹಗ್ ಮಾಡಿಕೊಂಡರು. ಪರಸ್ಪರ ಅಪ್ಪುಗೆಯ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಇದೇ ವೇಳೆ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್​ ಕೂಡ ಅಭಿಮಾನಿಗಳ ಹೃದಯ ಗೆದ್ದರು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಪಾಟೀದಾರ್​, ಧೋನಿ ಬಳಿ ಬರುತ್ತಿದ್ದಂತೆಯೇ, ತಲೆ ಮೇಲಿದ್ದ ಕ್ಯಾಪ್​ ತೆಗೆದು ಧೋನಿ ಕೈಕುಲುಕಿದ್ದಾರೆ. ರಜತ್ ಪಾಟೀದಾರ್, ಹಿರಿಯ ಆಟಗಾರ ಧೋನಿಗೆ ನೀಡಿದ ಗೌರವ ಕಂಡು ಸಿಎಸ್​ಕೆ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ರಜತ್ ಪಾಟೀದಾರ್​​ ಅವರ ಈ ಗೌರವದ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು ನಿನ್ನೆಯ ಪಂದ್ಯದಲ್ಲಿ ಧೋನಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 16 ಬಾಲ್​​ನಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿಯೊಂದಿಗೆ 30 ರನ್​ಗಳಿಸಿ ಗಮನ ಸೆಳೆದರು. ಧೋನಿಯ ಆಟದ ಹೊರತಾಗಿಯೂ, ಸಿಎಸ್​​ಕೆ ತಂಡ ಆರ್​ಸಿಬಿ ಎದುರು 50 ರನ್​ಗಳಿಂದ ಸೋತಿತು.
Rajat Patidar ♥️ removing cap before meeting #MSDhoni 💛 is respect he earned.#CSKvRCB#CSKvsRCBpic.twitter.com/MmAOwxQBuZ
— Shailesh Bindua (@ShaileshBindua) March 29, 2025
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us