/newsfirstlive-kannada/media/post_attachments/wp-content/uploads/2025/02/rajat_patidar_KOHLI.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಅವರನ್ನ ನೇಮಕ ಮಾಡಲಾಗಿದೆ. ಈ ಬಾರಿ ನಡೆದ ಮೆಗಾ ಆ್ಯಕ್ಷನ್ನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಇದ್ದ ನಾಯಕ ಸ್ಥಾನಕ್ಕೆ ಇದೀಗ ರಜತ್ ಪಾಟೀದಾರ್ ಅವರನ್ನು ನೇಮಕ ಮಾಡಲಾಗಿದೆ.
2025ರ 18ನೇ ಆವೃತ್ತಿಯ ಐಪಿಎಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕೆ ಇಳಿಯುತ್ತಿದೆ. ಕ್ಯಾಪ್ಟನ್ ಯಾರು ಆಗ್ತಾರೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿಯ ಮೆಂಟರ್ ದಿನೇಶ್ ಕಾರ್ತಿಕ್ ಅವರು ಮಾತನಾಡಿದ್ದರು. ಭಾರತೀಯನೇ ಆರ್ಸಿಬಿ ತಂಡದ ನಾಯಕ ಆಗಲಿದ್ದಾರೆ. ಆದರೆ ಯಾರು ಎಂದು ಹೆಸರನ್ನು ಹೇಳದೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಆದರೆ ಇದೀಗ ನಾಯಕನ ಹೆಸರು ಘೋಷಣೆ ಮಾಡಿ ಎಲ್ಲದಕ್ಕೂ ತೆರೆ ಎಳೆಯಲಾಗಿದೆ.
ಇದನ್ನೂ ಓದಿ:ಮದುವೆಗೂ ಮುನ್ನ ಕೊಂಡ ತುಳಿದ ಧನಂಜಯ್; ಡಾಲಿಯ ಈ ಭಕ್ತಿ ಹಿಂದಿದೆ ವಿಶೇಷತೆ..?
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಂದಿನ ತಿಂಗಳು ಆರಂಭವಾಗಲಿದೆ. ಎಲ್ಲ ಫ್ರಾಂಚೈಸಿಗಳು ಈಗಾಗಲೇ ತಯಾರಿಯಲ್ಲಿ ತೊಡಗಿಕೊಂಡಿದ್ದು ನಾಯಕನ ಸ್ಥಾನದ ಆಯ್ಕೆಗಳು ಅಂತಿಮ ಘಟ್ಟದಲ್ಲಿ ಇಟ್ಟಿವೆ. ಇದರಲ್ಲಿ ಇದೀಗ ಬೆಂಗಳೂರು ಟೀಮ್ ನಾಯಕನ ಹೆಸರನ್ನು ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ರಜತ್ ಪಾಟೀದಾರ್ ಎಂದು ಅನೌನ್ಸ್ ಮಾಡಿದ್ದು ಇನ್ನೂ ಐಪಿಎಲ್ನ ಕೆಲ ಟೀಮ್ಗಳಿಗೆ ನಾಯಕನ ಹೆಸರು ಘೋಷಣೆ ಮಾಡಬೇಕಿದೆ. ಲಕ್ನೋ ಸೂಪರ್ ಜೇಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಯಾರೆಂದು ಘೋಷಣೆ ಮಾಡುವುದು ಇನ್ನೂ ಬಾಕಿ ಇದೆ.
2025ರ ಆರ್ಸಿಬಿ ಟೀಮ್ನಲ್ಲಿ ಯಾರು ಯಾರು ಇದ್ದಾರೆ?
ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಯಶ್ ದಯಾಳ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್ವುಡ್, ಫಿಲ್ ಸಾಲ್ಟ್ , ಜಿತೇಶ್ ಶರ್ಮಾ (ವಿಕೇಟ್ ಕೀಪರ್), ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್ಸ್ಟೋನ್, ರಾಸಿಖ್ ದಾರ್, ಜಾಕೋಬ್ ಬೆಥೆಲ್, ಸುಯಶ್ ಶರ್ಮಾ, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಲುಂಗಿಸಾನಿ ಎನ್ಗಿಡಿ, ಸ್ವಪ್ನಿಲ್ ಸಿಂಗ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಸ್ವಸ್ತಿಕ ಚಿಕಾರ, ಮನೋಜ್ ಭಾಂಡ,
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ