RCB ಕ್ಯಾಪ್ಟನ್ ರಜತ್ ಪಾಟೀದಾರ್​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..!

author-image
Ganesh
Updated On
RCBಗೆ ಮತ್ತೆ ಕೈಕೊಟ್ಟ ಟಾಸ್​.. ಪ್ಲೇಯಿಂಗ್-11ರಲ್ಲಿ ಬಲಿಷ್ಠ ಬೆಂಗಳೂರು ತಂಡ ಹೇಗಿದೆ?
Advertisment
  • ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ನಡೆದಿರುವ ತಪ್ಪು
  • ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ಪಂದ್ಯ ನಡೆದಿತ್ತು
  • ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್​ಗಳ ಜಯ

ಮುಂಬೈ ಇಂಡಿಯನ್ಸ್​ ವಿರುದ್ಧ ರೋಚಕ ಗೆಲುವು ದಾಖಲಿಸಿದ ಬೆನ್ನಲ್ಲೇ ಆರ್​​ಸಿಬಿ ನಾಯಕ ರಜತ್​ ಪಾಟೀದಾರ್​ಗೆ ಸಂಕಷ್ಟ ಎದುರಾಗಿದೆ. ಸ್ಲೋ ಓವರ್​ ರೇಟ್​ನ ಕಾರಣಕ್ಕೆ ಆರ್​​ಸಿಬಿ ನಾಯಕನಿಗೆ ದಂಡದ ಬರೆ ಬಿದ್ದಿದೆ. ನಿಗದಿತ ಸಮಯಕ್ಕೆ ಬೌಲಿಂಗ್​ ಮುಗಿಸದ ಹಿನ್ನೆಲೆಯಲ್ಲಿ ಮ್ಯಾಚ್​ ರೆಫರಿ 12 ಲಕ್ಷ ದಂಡವನ್ನ ವಿಧಿಸಿದ್ದಾರೆ.

ಮುಂಬೈ ಮತ್ತು ಬೆಂಗಳೂರು ತಂಡಗಳು ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಿದ್ದವು. ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ, ಐದು ವಿಕೆಟ್ ಕಳೆದುಕೊಂಡು 221ರನ್​​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಮುಂಬೈ ಇಂಡಿಯನ್ಸ್, 9 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿ ಸೋಲಿಗೆ ಶರಣಾಯ್ತು.

ಇದನ್ನೂ ಓದಿ: ಆರ್​ಸಿಬಿ ಮುಂದಿನ ಪಂದ್ಯ ಯಾವಾಗ..? ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!

publive-image

ಆ ಮೂಲಕ ಆರ್​ಸಿಬಿ ಈ ಸೀಸನ್​ನಲ್ಲಿ ಇಲ್ಲಿಯವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನ ಆಡಿ, ಮೂರು ಮ್ಯಾಚ್​ನಲ್ಲಿ ಗೆದ್ದುಕೊಂಡಿದೆ. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು, ನಾಳೆ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಮುಂಬೈ ಇಂಡಿಯನ್ಸ್​​ ವಿರುದ್ಧ ಗೆಲುವಿನ ಬಳಿಕ ಆರ್​ಸಿಬಿ ಆಟಗಾರರು ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ಮುಂಬೈನಿಂದ ಹೊರಟ ಆರ್​ಸಿಬಿ ಪ್ಲೇಯರ್ಸ್​​ ನಿನ್ನೆ ಸಂಜೆ ವೇಳೆಗೆ ಬೆಂಗಳೂರು ತಲುಪಿದ್ದಾರೆ. ಇಂದು ಸಂಜೆ ಆರ್​​ಸಿಬಿ ಆಟಗಾರರು ಅಭ್ಯಾಸ ನಡೆಸಲಿದ್ದಾರೆ.

ಇದನ್ನೂ ಓದಿ: 9 ಸಿಕ್ಸರ್​, 7 ಬೌಂಡರಿ.. ಕೇವಲ 39 ಎಸೆತದಲ್ಲಿ ಸ್ಫೋಟಕ ಶತಕ.. ಐಪಿಎಲ್​​ನಲ್ಲಿ ಹೊಸ ದಾಖಲೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment