/newsfirstlive-kannada/media/post_attachments/wp-content/uploads/2024/01/Rajat-Patidar.jpg)
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​​ನಲ್ಲಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​​​ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಚೆನ್ನೈ ವಿರುದ್ಧ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಆರ್​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಈ ಮಧ್ಯೆ ಆರ್​​​ಸಿಬಿ ಫ್ಯೂಚರ್​ ಕ್ಯಾಪ್ಟನ್​ ರಜತ್​ ಪಾಟಿದಾರ್​ ಹೊಸ ದಾಖಲೆ ಬರೆದಿದ್ದಾರೆ.
ಮೊದಲರ್ಧ ಸೀಸನ್​​ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ರಜತ್​ ಪಾಟಿದಾರ್​​​​ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಕಳೆದ ಐದು ಪಂದ್ಯಗಳಲ್ಲೂ ಪಾಟಿದಾರ್​ ಬ್ಯಾಕ್​ ಟು ಬ್ಯಾಕ್​ 5 ಅರ್ಧಶತಕ ಸಿಡಿಸಿದ್ದಾರೆ. ಇವರ ಸ್ಟ್ರೈಕ್​ ರೇಟ್​ 200ಕ್ಕೂ ಹೆಚ್ಚು ಇದೆ. ಆರ್​​ಸಿಬಿ ಗೆಲುವಿನಲ್ಲಿ ರಜತ್​ ಪಾಟಿದಾರ್​ ಪ್ರಮುಖ ಪಾತ್ರವಹಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/Kohli_Rajat.jpg)
ಪಾಟಿದಾರ್​ ಈ ಸೀಸನ್​​ನಲ್ಲಿ ಆಡಿರೋ 11 ಇನ್ನಿಂಗ್ಸ್​​ನಲ್ಲಿ 178 ಬಾಲ್​ನಲ್ಲಿ ಬರೋಬ್ಬರಿ 320 ರನ್​ ಚಚ್ಚಿದ್ದಾರೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 180 ಇತ್ತು. ಬರೋಬ್ಬರಿ 27 ಸಿಕ್ಸ್​​ ಮತ್ತು 17 ಫೋರ್​ ಸಿಡಿಸಿದ್ದಾರೆ ರಜತ್​​.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us