/newsfirstlive-kannada/media/post_attachments/wp-content/uploads/2024/11/Rajat-Patidar.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಸದ್ಯ ನಡೆಯುತ್ತಿರೋ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರ್ಸಿಬಿ ಈಗಾಗಲೇ ರಜತ್ ಪಾಟಿದಾರ್ ಅವರನ್ನು ಬರೋಬ್ಬರಿ 11 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದೆ. ಹೀಗಾಗಿ ಇವರನ್ನೇ ಆರ್ಸಿಬಿ ಕ್ಯಾಪ್ಟನ್ ಮಾಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಕೊಹ್ಲಿ ಕ್ಯಾಪ್ಟನ್ ಆಗದಿದ್ರೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರೋ ರಜತ್ಗೆ ಕ್ಯಾಪ್ಟನ್ಸಿ ನೀಡುವುದು ಉತ್ತಮ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
Rajat establishes his Raj at SMAT. 🔥#PlayBold#SyedMushtaqAliT20pic.twitter.com/JEiR3zy8YZ
— Royal Challengers Bengaluru (@RCBTweets)
Rajat establishes his Raj at SMAT. 🔥#PlayBold#SyedMushtaqAliT20pic.twitter.com/JEiR3zy8YZ
— Royal Challengers Bengaluru (@RCBTweets) November 28, 2024
">November 28, 2024
ಇದರ ಮಧ್ಯೆಯೇ ಮಧ್ಯಪ್ರದೇಶ ತಂಡದ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶದ ಪರ ಮಿಂಚಿದ್ದಾರೆ ರಜತ್. ಪಂಜಾಬ್ ತಂಡದ ವಿರುದ್ಧ ಕೇವಲ 37 ಬಾಲ್ನಲ್ಲಿ ಬರೋಬ್ಬರಿ 67 ರನ್ ಚಚ್ಚಿದ್ದಾರೆ. ಈ ಪೈಕಿ 5 ಭರ್ಜರಿ ಸಿಕ್ಸರ್ ಮತ್ತು ಬ್ಯಾಕ್ ಟು ಬ್ಯಾಕ್ 4 ಫೋರ್ ಸಿಡಿಸಿದ್ದಾರೆ. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 167ಕ್ಕೂ ಹೆಚ್ಚಿತ್ತು. ಈ ಮೂಲಕ ತನ್ನನ್ನು ರೀಟೈನ್ ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಆರ್ಸಿಬಿ ಕ್ಯಾಪ್ಟನ್ ಆಗೋದು ಪಕ್ಕಾ!
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ಕಪ್ ಗೆದ್ದರೆ ರಜತ್ ಆರ್ಸಿಬಿ ಕ್ಯಾಪ್ಟನ್ ಆಗೋದು ಪಕ್ಕಾ. ಆರ್ಸಿಬಿ ತಂಡದ ನಾಯಕತ್ವದ ರೇಸ್ನಲ್ಲಿ ರಜತ್ ಹೆಸರು ಕೇಳಿ ಬರೋದರಲ್ಲಿ ಡೌಟೇ ಇಲ್ಲ.
ಮಧ್ಯಪ್ರದೇಶ್ ಟಿ20 ತಂಡ ಹೀಗಿದೆ!
ರಜತ್ ಪಾಟಿದಾರ್ (ಕ್ಯಾಪ್ಟನ್), ಅರ್ಪಿತ್ ಗೌಡ್, ಹರ್‌ಪ್ರೀತ್ ಸಿಂಗ್, ಸುಭ್ರಾಂಶು ಸೇನಾಪತಿ, ವೆಂಕಟೇಶ ಅಯ್ಯರ್, ಆವೇಶ್ ಖಾನ್, ಕುಮಾರ್ ಕಾರ್ತಿಕೇಯ, ಕುಲ್ವಂತ್ ಖೆಜ್ರೋಲಿಯಾ, ರಾಹುಲ್ ಬಾಥಮ್, ಅಭಿಷೇಕ್ ಪಾಠಕ್, ಪಂಕಜ್ ಶರ್ಮಾ, ಶಿವಂ ಶುಕ್ಲಾ, ಕಮಲ್ ತ್ರಿಪಾಠಿ, ತ್ರಿಪುರೇಶ್ ಸಿಂಗ್, ವಿಕಾಸ್ ಶರ್ಮಾ.
ಇದನ್ನೂ ಓದಿ:27 ಕೋಟಿಗೆ ಸೇಲಾದ ಪಂತ್ಗೆ ಸರ್ಕಾರದಿಂದ ಬಿಗ್ ಶಾಕ್; ಕೈಗೆ ಸಿಗೋ ಹಣ ಇಷ್ಟೇನಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ