/newsfirstlive-kannada/media/post_attachments/wp-content/uploads/2025/05/Rajat_Patidar-1.jpg)
ತವರಿನಲ್ಲಿ ನಡೆದಂತಹ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಎರಡೇ 2 ರನ್ಗಳಿಂದ ರೋಚಕ ಗೆಲುವು ಪಡೆದಿದೆ. ಕೊನೆ ಬಾಲ್ ಯಾರ್ಕರ್ ಹಾಕಿದ್ದೇ ತಡ ಇಡೀ ಸ್ಟೇಡಿಯಂ ಎಲ್ಲ ಸಂಭ್ರಮದಲ್ಲಿ ಮುಳುಗಿತ್ತು. ಇಂತಹ ರಣರೋಚಕ ಪಂದ್ಯ ಮುಗಿದ ನಂತರ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಗೆಲುವಿನ ಕ್ರೆಡಿಟ್ ಡೆತ್ ಓವರ್ ಸ್ಪೆಷಲಿಸ್ಟ್ಗೆ ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು, ಇದೊಂದು ತುಂಬಾ ಕಷ್ಟವಾದ, ರೋಮಾಂಚನವಾದ ಪಂದ್ಯವಾಗಿತ್ತು. ಬಲಿಷ್ಠ ಬ್ಯಾಟಿಂಗ್ ಮೂಡಿ ಬಂದಿದ್ದರಿಂದ ಧೈರ್ಯದಿಂದ ಬೌಲಿಂಗ್ ಮಾಡಿದ ಡೆತ್ ಓವರ್ ಸ್ಪೆಷಲಿಸ್ಟ್ಗೆ ಈ ಅಮೂಲ್ಯವಾದ ಕ್ರೆಡಿಟ್ ಸಲ್ಲಬೇಕು. ಆರ್ಸಿಬಿಯ ಮುಖ್ಯವಾದ ಬೌಲರ್ ಆಗಿರುವ ಡೆತ್ ಓವರ್ ಸ್ಪೆಷಲಿಸ್ಟ್ ಕೊನೆ ಓವರ್ನಲ್ಲಿ ನಮ್ಮ ಪರ ಕ್ಲಿಯರ್ ಕಟ್ ಫಲಿತಾಂಶ ಬರುವಂತೆ ಮಾಡಿದರು. ಹೀಗಾಗಿ ಈ ಎಲ್ಲ ಕ್ರೆಡಿಟ್ ಯಶ್ ದಯಾಳ್ಗೆ ಸಲ್ಲಬೇಕು ಎಂದು ರಜತ್ ಹೇಳಿದ್ದಾರೆ.
ಇದನ್ನೂ ಓದಿ:ಬ್ಯಾಟ್ ಮುರಿದಿದ್ದಕ್ಕೆ ಕ್ಯಾಚ್ ಔಟ್ ಆದ್ರಾ RCB ಯಂಗ್ ಪ್ಲೇಯರ್ ಜಾಕೋಬ್ ಬೆಥೆಲ್..?
ಕಳೆದ ವರ್ಷವೂ ಯಶ್ ದಯಾಳ್ ಇದೇ ತಂಡದ ವಿರುದ್ಧ ರೋಚಕವಾಗಿ ಬೌಲಿಂಗ್ ಮಾಡಿ ಆರ್ಸಿಬಿಗೆ ನೆರವಾಗಿದ್ದರು. ಅದರಂತೆ ಈ ಬಾರಿಯು ನಮಗೆ ದೊಡ್ಡ ಗೆಲುವು ತಂದುಕೊಟ್ಟಿದ್ದಾರೆ. ಕೊನೆಯಲ್ಲಿ ಬೌಲಿಂಗ್ ಕೊಡುವಾಗ ಸುಯಾಶ್ ಮೇಲೂ ನಮಗೆ ವಿಶ್ವಾಸವಿತ್ತು. ಪಂದ್ಯ ಯಾರು ಗೆಲ್ಲುತ್ತಾರೆ ಹೇಳುವುದು ಕಷ್ಟವಾಗಿತ್ತು. ಫಲಿತಾಂಶ ಫಿಫ್ಟಿ ಫಿಫ್ಟಿ ಇತ್ತು. ಆದರೆ ಇಲ್ಲಿವರೆಗೆ ತಂಡದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿರುವ ಯಶ್ ದಯಾಳ್ಗೆ ಬೆಂಬಲ ನೀಡಿದೆ. ಅದರಲ್ಲಿ ಯಶ್ ಗೆಲುವು ಪಡೆದಿದ್ದಾರೆ ಎಂದು ಹೇಳಿದರು.
ರೊಮಾರಿಯೋ ಶೆಫರ್ಡ್ ಬ್ಯಾಟಿಂಗ್ ನೋಡಿ ಸಖತ್ ಎಂದರೆ ಸಖತ್ ಖುಷಿ ಪಟ್ಟೆ. ಶೆಫರ್ಡ್ ಅವರ ಲಾಂಗ್ ಸಿಕ್ಸರ್ಗಳನ್ನು ಎಂಜಾಯ್ ಮಾಡಿದೆ. ಲುಂಗಿ ಲುಂಗಿ ಎನ್‌ಗಿಡಿ ತುಂಬಾ ಅನುಭವಿ ಬೌಲರ್ ಆಗಿದ್ದು ಅವರ ಮೇಲೆಯೂ ವಿಶ್ವಾಸ ವಿದೆ. ಇವರ ನೆರವು ಕೂಡ ತಂಡಕ್ಕೆ ಇದೆ. ಮುಂದಿನ ಮೂರು ಪಂದ್ಯಗಳು ತುಂಬಾ ಕಠಿಣವಾಗಿವೆ. ಅದರಲ್ಲಿ ದೊಡ್ಡ ಯಶಸ್ಸು ಕಾಣಲು ನಾವು ಬಯಸುತ್ತೇವೆ ಎಂದು ಆರ್ಸಿಬಿ ಕ್ಯಾಪ್ಟನ್ ರಜತ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ