ಕೊಹ್ಲಿಗೂ ಅಲ್ಲ, ಕೃನಾಲ್​ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?

author-image
Ganesh
Updated On
ಕೊಹ್ಲಿಗೂ ಅಲ್ಲ, ಕೃನಾಲ್​ಗೂ ಅಲ್ಲ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
Advertisment
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಭರ್ಜರಿ ಗೆಲುವು
  • 6 ವಿಕೆಟ್​ಗಳ ಗೆಲುವು ಪಡೆದ ಬೆಂಗಳೂರು ತಂಡ
  • ಗೆದ್ದ ಬೆನ್ನಲ್ಲೇ ಕ್ಯಾಪ್ಟನ್ ರಜತ್ ಪಾಟೀದಾರ್ ಏನಂದ್ರು..?

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು 6 ವಿಕೆಟ್​ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಟಾಸ್​ ಗೆದ್ದ ಆರ್​ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​ಸಿಬಿ ಬೌಲರ್ಸ್​, ಚಮಕ್ ಕೊಟ್ಟರು. ನಿಗಧಿತ ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 162 ರನ್​​ಗಳಿಸಿತ್ತು. ಆರ್​ಸಿಬಿ ಪರ ಭವಿ ಮೂರು ವಿಕೆಟ್ ಪಡೆದರು. ಇನ್ನು ಹೇಜಲ್​ವುಡ್ 2, ಯಶ್ ದಯಾಳ್, ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು 163 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಆರ್​ಸಿಬಿ, ಕೇವಲ 4 ವಿಕೆಟ್​ ಕಳೆದುಕೊಂಡು 18.3 ಓವರ್​ನಲ್ಲಿ ಗುರಿ ಮುಟ್ಟಿತು. ಆರ್​ಸಿಬಿ ಪರ ವಿರಾಟ್ ಕೊಹ್ಲಿ 47 ಬಾಲ್​ನಲ್ಲಿ 51 ರನ್​ಗಳಿಸಿದರು. ಇನ್ನು, ಸ್ಫೋಟಕ ಬ್ಯಾಟಿಂಗ್ ನಡೆಸಿದ ಕೃನಾಲ್ ಪಾಂಡ್ಯ 47 ಬಾಲ್​ನಲ್ಲಿ 73 ರನ್​​ ಚಚ್ಚಿದರು.

ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಸಿಡಿಲಬ್ಬರದ ಅರ್ಧಶತಕ​.. ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ RCB, ಟಾಪ್​ಗೆ ಹೋದ ಬೆಂಗಳೂರು

ಪಂದ್ಯ ಮುಗಿದ ಬೆನ್ನಲ್ಲೇ ಮಾತನಾಡಿದ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದರ್, ಇದು ಒಟ್ಟಾರೆ ತಂಡದ ಪ್ರದರ್ಶನವಾಗಿತ್ತು. ಬೌಲರ್‌ಗಳು ತಮ್ಮ ಪ್ಲಾನ್ ಇಂಪ್ಲಿಮೆಂಟ್ ಮಾಡಿದ ರೀತಿ ನೋಡಲು ತುಂಬಾ ಚೆನ್ನಾಗಿತ್ತು. ಮೊದಲೇ ಹೇಳಿದಂತೆ ನಾವು ಎಲ್ಲಿಗೆ ಹೋದರೂ ಚೆನ್ನಾಗಿ ಆಡಲು ಬಯಸುತ್ತೇವೆ. ಚೇಸಿಂಗ್ ವಿಕೆಟ್, ಬೌಲಿಂಗ್ ಮತ್ತು ಸ್ಕೋರ್ ಬಗ್ಗೆ ಸಾಕಷ್ಟು ಸ್ಪಷ್ಟತೆ ನೀಡುತ್ತದೆ. ಅದಕ್ಕೆ ತಕ್ಕ ರೀತಿಯಲ್ಲೇ ನಾವು ಪ್ಲಾನ್ ಮಾಡಬಹುದು. ನಿನ್ನೆಯ ಟಾರ್ಗೆಟ್​, ಸಾಧಿಸಬಹುದಾದ ಟಾರ್ಗೆಟ್​ ಆಗಿತ್ತು. ಇದು ಒಟ್ಟಾರೆ ತಂಡದ ಪ್ರದರ್ಶನವಾಗಿತ್ತು ಅನ್ನೋ ಮೂಲಕ ಗೆಲುವಿನ ಕ್ರೆಡಿಟ್ ಇಡೀ ತಂಡಕ್ಕೆ ನೀಡಿದರು. ಬೌಲರ್‌ಗಳು ಉತ್ತಮ ಕೆಲಸ ಮಾಡಿದರು. ಬೌಲರ್​​ಗಳಿಗೆ ಕ್ರೆಡಿಟ್ ಸೇರಬೇಕು. ಚೇಸಿಂಗ್ ಬಗ್ಗೆ ಸ್ಪಷ್ಟತೆ ಇತ್ತು. ಆರ್‌ಸಿಬಿ ಮುನ್ನಡೆಸುತ್ತಿರೋದು ಅದ್ಭುತವೆನಿಸುತ್ತದೆ. ಅನೇಕರು ಉತ್ತಮ ಆಟಗಾರರಿದ್ದಾರೆ. ಅವರಿಂದ ನನಗೆ ಕಲಿಯಲು ಒಳ್ಳೆಯ ಅವಕಾಶ ಎಂದರು.

ಇದನ್ನೂ ಓದಿ:ಕಾಂತಾರ ಸ್ಟೈಲ್​​ನಲ್ಲೇ KL ರಾಹುಲ್​​ರ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ.. VIDEO

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment