/newsfirstlive-kannada/media/post_attachments/wp-content/uploads/2024/03/Faf_Kohli_RCB.jpg)
ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲಿ ನಾಯಕತ್ವ ಇರೋ ಯಾವೊಬ್ಬ ಆಟಗಾರನನ್ನು ಖರೀದಿ ಮಾಡಲಿಲ್ಲ. ಇದು ಮೇಲ್ನೋಟಕ್ಕೆ ಕೊಹ್ಲಿಯೇ ನಾಯಕ ಅನ್ನೋ ಸುಳಿವು ನೀಡ್ತಿದೆ. ಒಂದು ವೇಳೆ ಕೊಹ್ಲಿ ಕ್ಯಾಪ್ಟನ್ ಆಗದಿದ್ರೆ, ರಜತ್ ಪಾಟಿದಾರ್ಗೆ ಧಕ್ಕಿದರೂ ಅಚ್ಚರಿ ಇಲ್ಲ.
ರಜತ್ ಪಾಟಿದಾರ್ಗೆ ನಾಯಕತ್ವ
ಕಳೆದ ಕೆಲ ವರ್ಷಳಿಂದ ಆರ್ಸಿಬಿ ತಂಡದ ಭಾಗವಾಗಿದ್ದಾರೆ ರಜತ್ ಪಾಟಿದಾರ್. ಇವರು 2025ರ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಹೊಸ ಕ್ಯಾಪ್ಟನ್ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ರಜತ್ ಮೇಲೆ ಒಲವು ಹೊಂದಿರುವ ಆರ್ಸಿಬಿ ಮ್ಯಾನೇಜ್ಮೆಂಟ್, ಪಟ್ಟ ಕಟ್ಟಲು ರೆಡಿಯಾಗಿದೆ. ಇದಕ್ಕೆ ವಿರಾಟ್ ಕೊಹ್ಲಿ ಗ್ರೀನ್ ಸಿಗ್ನಲ್ ನೀಡಬೇಕಿದೆ.
ಪವರ್ ಹಿಟ್ಟರ್ ಆಗಿರೋ ರಜತ್, ನಾಯಕನಾಗಿ ಸೈಯದ್ ಮುಷ್ತಾಕ್ ಅಲಿಯಲ್ಲಿ ಯಶಸ್ಸು ಕಂಡಿದ್ದಾರೆ. 10 ಪಂದ್ಯಗಳ 9 ಇನ್ನಿಂಗ್ಸ್‌ಗಳಿಂದ 61.14 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಕಲೆಹಾಕಿದ್ದಾರೆ. 186.04 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ರಜತ್, 32 ಬೌಂಡರಿ, 31 ಸಿಡಿಸಿದ್ದಾರೆ. ಮೊದಲ ಅವಕಾಶದಲ್ಲೇ ರನ್ನರ್ಸ್ ಆಪ್ ಸ್ಥಾನಕ್ಕೇರಿಸಿದ ಸಾಧನೆಯನ್ನು ಮಾಡಿದ್ದಾರೆ. ಈಗ ಆರ್ಸಿಬಿ ನಾಯಕತ್ವದ ಪಟ್ಟದ ರೇಸ್ನಲ್ಲಿ ಮುಂಚೂಣಿಯಾಗಿ ನಿಲ್ಲುವಂತೆ ಮಾಡಿದೆ.
31 ವರ್ಷದ ರಜತ್ ಪಾಟಿದಾರ್, ದೇಶಿ ಕ್ರಿಕೆಟ್ ಹಾಗೂ ಆರ್ಸಿಬಿ ಪರವೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡ್ತಿದ್ದಾರೆ. ಇದಲ್ಲಕ್ಕಿಂತ ಮಿಗಿಲಾಗಿ ಆರ್ಸಿಬಿ ಪರ ಮಿಡಲ್ ಆರ್ಡರ್ನ ಬಲವಾಗಿದ್ದಾರೆ. ರಜತ್ ಪಾಟಿದಾರ್ ಮೇಲೆ ಭರವಸೆ ಹೊಂದಿರುವ ಮ್ಯಾನೇಜ್ಮೆಂಟ್, ನಾಯಕತ್ವದ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ:2025ರ ಐಪಿಎಲ್: ರಿಂಕು ಸಿಂಗ್ಗೆ ಬಿಗ್ ಶಾಕ್ ಕೊಟ್ಟ ಕೆಕೆಆರ್; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್