/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-3.jpg)
ಒಂದೇ ಒಂದು ರೀಲ್ಸ್ ಎಷ್ಟೆಲ್ಲಾ ಕಂಟಕ ತರುತ್ತೆ ಅನ್ನೋದಕ್ಕೆ ಇವರಿಬ್ಬರೇ ಬೆಸ್ಟ್​ ಎಕ್ಸಾಂಪಲ್​. ರೀಲ್ಸ್‌ಗಾಗಿ ತುಕ್ಕು ಹಿಡಿದ ಮಚ್ಚು ಹಿಡಿದು ಸೋಷಿಯಲ್​ ಮೀಡಿಯಾದಲ್ಲಿ ಬಿಲ್ಡಪ್​ ಕೊಟ್ಟ ಬಿಗ್​ಬಾಸ್​ನ ಮಾಜಿ ಸ್ಪರ್ಧಿಗಳಿಬ್ಬರು ಈಗ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಮಾಡಿದ ರೀಲ್ಸ್​ ಭಾರೀ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಬುಜ್ಜಿ ಹಾಗೂ ವಿನಯ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲ ಸಾಕ್ಷಿ ನಾಶ ಆರೋಪದಡಿ ಇಬ್ಬರು ಸರಿಯಾಗಿ ಲಾಕ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-2.jpg)
ನಿನ್ನೆ ವಿಚಾರಣೆಗೆ ಹಾಜರಾದ ಇಬ್ಬರನ್ನು ಬಸವೇಶ್ವರ ನಗರ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆ ತಂದು ರೀಲ್ಸ್ ಮಾಡಿದ ಜಾಗದಲ್ಲಿ ಸ್ಥಳ ಮಹಜರು ಮಾಡಿಸಿದ್ರು. ರೀಲ್ಸ್ ಮಾಡಿದ ಉದ್ದೇಶ ಏನು? ಯಾಕಾಗಿ ರೀಲ್ಸ್ ಮಾಡಲಾಯ್ತು ಅನ್ನೋ ಪ್ರಶ್ನೆಗಳನ್ನ ಕೇಳಿ ಮಾಹಿತಿ ಪಡೆದುಕೊಂಡ್ರು. ಅದ್ರೆ ರೀಲ್ಸ್​ನಲ್ಲಿ ಬಳಸಿದ ಮಚ್ಚು ಎಲ್ಲಿದೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಅಕ್ಷಯ್ ಸ್ಟುಡಿಯೋದಲ್ಲೂ ಒಂದೂವರೆಗಂಟೆ ಪರಿಶೀಲನೆ ನಡೆಸಿದ ಪೊಲೀಸಲು ಬರಿಗೈಲೇ ವಾಪಸ್​ ಆಗಿದ್ದಾರೆ.
ಇದನ್ನೂ ಓದಿ: ರಜತ್, ವಿನಯ್ ಹಿಡಿದಿದ್ದ ಆ ‘ಮಚ್ಚು’ ಎಲ್ಲಿ? ಸ್ಟುಡಿಯೋದಲ್ಲಿ ಫುಲ್ ತಲಾಶ್! ಕೊನೆಗೆ ಆಗಿದ್ದೇನು? ಹೊಸ ಟ್ವಿಸ್ಟ್!
14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು​
ನಿನ್ನೆ ಬೆಳಗ್ಗೆಯಿಂದ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ರು. ಇದಕ್ಕೂ ಮುನ್ನ ಇಬ್ಬರಿಗೂ ಕೆಸಿ ಜನರಲ್​ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್​ ಚೆಕಪ್​ ಮಾಡಿಸಿದ್ರು. ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಕೋರಮಂಗಲದ ಜಡ್ಜ್​ ನಿವಾಸಕ್ಕೆ ಹಾಜರು ಪಡಿಸಿದ್ರು. ಈ ವೇಳೆ ಮಚ್ಚು ರಿಕವರಿ ಮಾಡಬೇಕಾಗಿದ್ದು ಇಬ್ಬರನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಜಡ್ಜ್​ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ರು. ಇದೇ ವೇಳೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿರುವ ಕಾರಣ, ಇವತ್ತು ಓಪನ್​ ಕೋರ್ಟ್​ಗೆ ಹಾಜರು ಪಡಿಸುವಂತೆ ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-4.jpg)
ಜೈಲಿಗೆ ಕರೆದೊಯ್ಯುವ ದೃಶ್ಯ ಕಂಡು ರಜತ್​ ಪತ್ನಿ ಕಣ್ಣೀರು
24ನೇ ಎಸಿಜೆಎಂ ನ್ಯಾಯಾಧೀಶರ ಆದೇಶದಂತೆ ಪೊಲೀಸರು ರಜತ್​ ಮತ್ತು ವಿನಯ್​ ಇಬ್ಬರನ್ನು ರಾತ್ರಿಯೇ ಪರಪ್ಪನ ಆಗ್ರಹಾರಕ್ಕೆ ಶಿಫ್ಟ್​ ಮಾಡಿದ್ರು. ಈ ವೇಳೆ ಜಡ್ಜ್​ ನಿವಾಸದ ಬಳಿ ಬಂದಿದ್ದ ರಜತ್​ ಪತ್ನಿ ಅಕ್ಷಿತಾ ಗಂಡನನ್ನು ಜೈಲಿಗೆ ಕರೆದೊಯ್ಯುವುದನ್ನು ನೋಡಿ ಕಣ್ಣೀರಿಟ್ಟರು.
ರೀಲ್ಸ್​ಗಾಗಿ ಮಚ್ಚು ಹಿಡಿದು ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಲು ಹೋದವರು, ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇವತ್ತು ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇತ್ತ ಅಸಲಿ ಮಚ್ಚು ಪತ್ತೆ ಮಾಡೋ ಸಲುವಾಗಿ ಪೊಲೀಸರು ರಜತ್ ಪತ್ನಿ ಅಕ್ಷಿತಾಗೆ ನೊಟೀಸ್ ನೀಡಿದ್ದಾರೆ. ತುಕ್ಕು ಹಿಡಿದ ಮಚ್ಚು ಇವತ್ತು ಸಿಕ್ಕರೆ ರೀಲ್ಸ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಗಲಿದೆ. ಈ ಮಧ್ಯೆ ಕೋರ್ಟ್ ಇಬ್ಬರಿಗೂ ಜಾಮೀನಿನ ಭಾಗ್ಯ ಕರುಣಿಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us