/newsfirstlive-kannada/media/post_attachments/wp-content/uploads/2025/03/rajath-vinay2.jpg)
ಮಚ್ಚು ಹಿಡಿದು ಮಾಡಿದ್ದ ರೀಲ್ಸು.. ಖಡಕ್ ಪೋಸು.. ಲೈಕ್ಸ್ಗಾಗಿ ಮಾಡಿದ ಶೋಕಿಯೇ ಇಬ್ಬರು ಬಿಗ್ಬಾಸ್ ಮಾಜಿ ಸ್ಪರ್ಧಿಗಳಿಗೆ ಜೈಲಿನ ಸುತ್ತಾ ಪ್ರದಕ್ಷಿಣೆ ಹಾಕುವಂತೆ ಮಾಡ್ಬಿಟ್ಟಿದೆ. ನಿನ್ನೆ ಅರೆಸ್ಟ್ ಆಗಿ ರಾತ್ರಿಯೇ ರಿಲೀಸ್ ಆದ ಈ ರೆಬೆಲ್ ಬಾಯ್ಸ್, ನೈಟೆಲ್ಲಾ ಥಿಂಕ್ ಮಾಡಿ ಬೆಳಗ್ಗೆ ಅದೇ ಗತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದ್ರು. ಆದರೆ ಇಬ್ಬರೂ ಮತ್ತೆ ಖಾಕಿ ಬಲೆಗೆ ಬಿದ್ದಿರೋದು ರೀಲ್ಸ್ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದೆ.
ಲಾಂಗ್ ಹಿಡಿದು ಲಾಕ್ ಆದ ರಜತ್ ಹಾಗೂ ವಿನಯ್!
ಇಬ್ಬರು ಆರೋಪಿಗಳನ್ನ ರಾತ್ರಿ ಬಿಟ್ಟು ಕಳಿಸಿದ ಪೊಲೀಸ್ರು
ಕೈಯಲ್ಲಿ ಲಾಂಗ್ ಹಿಡಿದು ದಿಲ್ದಾರ್ ಆಗಿ ರೀಲ್ಸ್ ಮಾಡಿ ಮತ್ತೆದೇ ಲಾಂಗ್ನಿಂದ ಲಾಕ್ ಆದ ಇದೇ ರಜತ್ ಹಾಗೂ ವಿನಯ್ ನಿನ್ನೆ ಅರೆಸ್ಟ್ ಆಗಿ ರಿಲೀಸ್ ಕೂಡ ಆದ್ರು. ರೀಲ್ಸ್‌ನಲ್ಲಿ ಬಳಸಿದ್ದು ಡಮ್ಮಿ ಮಚ್ಚು ಅಂದಿದ್ದಕ್ಕೆ ಪೊಲೀಸರು ರಾತ್ರಿಯೇ ಬಿಟ್ಟು ಕಳುಹಿಸಿದ್ರು. ಆದ್ರೆ, ಇವತ್ತು ಇದೇ ಕೇಸ್‌ಗೆ ರೋಚಕ ತಿರುವು ಸಿಕ್ಕಿದೆ.
ರೆಬೆಲ್ ಬಾಯ್ಸ್ ಬುಡಕ್ಕೆ ‘ಬೆಂಕಿ’ ಇಟ್ಟ ಒಂದು ಮಚ್ಚಿನ ರೀಲ್ಸ್..!
ಇವತ್ತು ಬೆಳಗ್ಗೆ ಮತ್ತೆ ಬಸವೇಶ್ವರ ನಗರ ಠಾಣೆ ಕಡೆ ಮುಖ ಮಾಡಿದ್ದ ರಜತ್ ಮತ್ತು ವಿನಯ್, ರೀಲ್ಸ್‌ನಲ್ಲಿ ಹಿಡಿದಿದ್ದು ಇದೇ ಅಂತ ಹೇಳಿದ್ರು. ಅಸಲಿ ವಿಷ್ಯ ಏನಂದ್ರೆ, ರೀಲ್ಸ್‌ನಲ್ಲಿ ಬಳಸಿರೋ ಲಾಂಗ್ಗೂ ಫೈಬರ್ ಲಾಂಗ್ಗೂ ವ್ಯತ್ಯಾಸ ಇರೋದು ಸ್ಪಷ್ಟವಾಗಿ ಗೊತ್ತಾಗಿದೆ.
ಸಣ್ಣ ಡೌಟ್ ಕ್ರಿಯೇಟ್ ಆಗ್ತಿದ್ದಂತೆ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ರಜತ್ ಬುಜ್ಜಿ.. ಅಯ್ಯೋ.. ಸೆಟ್ ಪ್ರಾಪರ್ಟಿಯಲ್ಲಿ ಮಿಸ್ ಆಗ್ಬಿಟ್ಟಿದೆ. ತಂದು ಒಪ್ಪಿಸ್ತೀವಿ ಅಂತ ಹೇಳಿದ್ರು.
ಬಟನ್ ಬಿಚ್ಚಿ ಇಬ್ಬರು ರೀಲ್ಸ್.. ಬಟನ್ ಹಾಕಿಸಿ ಮಹಜರ್!
ಪೊಲೀಸ್ ಠಾಣೆ ಮುಂದೆ ಕಾರಿನಲ್ಲಿ ಬಂದಿಳಿದ ರಜತ್, ಕೈಯಲ್ಲಿ ಲೈಟರ್ ಹಿಡಿದು, ಶರ್ಟ್ ಬಟನ್ ಬಿಚ್ಚಿಕೊಂಡು ಅದೇ ಗತ್ತಿನಲ್ಲಿ ಠಾಣೆಗೆ ಎಂಟ್ರಿ ಆದರು. ಆಗಲೇ ಇಬ್ಬರು ಮತ್ತೆ ಲಾಕ್ ಆಗಿತ್ತು. ಅದೇ ಸ್ವಲ್ಪ ಹೊತ್ತಿನ ಬಳಿಕ ಆಚೆ ಬಂದ ರಜತ್.. ಶರ್ಟ್‌ನ ಫುಲ್ ಬಟನ್ ಹಾಕಿದ್ದು ಕಂಡು ಬಂತು.
ಬಳಿಕ ನೇರವಾಗಿ ನಾಗರಭಾವಿಯ ಅಕ್ಷಯ್ ಸ್ಟುಡಿಯೋಗೆ ಕರೆ ತಂದು ರೀಲ್ಸ್ ಮಾಡಿದ ಜಾಗದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿಸಿದ್ರು. ರೀಲ್ಸ್ ಮಾಡಿದ ಉದ್ದೇಶ ಏನು? ಯಾಕಾಗಿ ರೀಲ್ಸ್ ಮಾಡಲಾಯ್ತು ಅನ್ನೋ ಪ್ರಶ್ನೆಗಳನ್ನ ಕೇಳಿ ಪೊಲೀಸರು ಮಾಹಿತಿ ಪಡೆದುಕೊಂಡರು. ಅಷ್ಟೇ ಅಲ್ಲ.. ಸ್ಟುಡಿಯೋದಲ್ಲಿ ಒಂದು ಗಂಟೆ ಪರಿಶೀಲನೆ ಮಾಡಿದ್ರು ಅಸಲಿ ಮಚ್ಚು ಸಿಗಲಿಲ್ಲ. ಹೀಗಾಗಿ, ಮತ್ತೆ ಇಬ್ಬರೂ ಆರೋಪಿಗಳನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮುಂದುವರೆಸಿದ್ದಾರೆ.
ಎಲ್ಲಿದೆ ಆ ಮಚ್ಚು?
ಸ್ಥಳ ಮಹಜರು ಮಾಡಿದ ಪೊಲೀಸರು, ಅಕ್ಷಯ್ ಸ್ಟುಡಿಯೋನ ಮೂಲೆ, ಮೂಲೆಯನ್ನು ಒಂದು ಗಂಟೆ ಪರಿಶೀಲನೆ ಮಾಡಿದ್ರು. ಇಷ್ಟಾದರೂ ಆ ಮಚ್ಚು ಸಿಕ್ಕಿಲ್ಲ.
ಮಚ್ಚಿನ ಬಗ್ಗೆ ವಿನಯ್ ಅವರು ಏನು ಬಾಯಿ ಬಿಟ್ಟಿಲ್ಲ. ಆದರೆ ರಜತ್ ಅವರು ಸೆಟ್ ಹಾಕಿದ್ದವರು ತಗೊಂಡು ಹೋಗಿರಬಹುದು ಎಂದು ಉತ್ತರಿಸಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ಆರೋಪಿಗಳನ್ನು ಮತ್ತೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಠಾಣೆಯಲ್ಲಿ ಮಚ್ಚು ಎಲ್ಲಿದೆ ಎಂಬುದರ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ರೀಲ್ಸ್‌ನಲ್ಲಿ ಬಳಸಿರುವ ಮಚ್ಚು ಎಲ್ಲಿದೆ ಅನ್ನೋದು ಇನ್ನೂ ನಿಗೂಢವಾಗಿದೆ.
ಇದನ್ನೂ ಓದಿ: ರಜತ್ ಶರ್ಟ್ ಗುಂಡಿ ಹಾಕಿಸಿದ ಪೊಲೀಸರು? ತುಕ್ಕು ಹಿಡಿದ ‘ಲಾಂಗ್’ ಎಲ್ಲಿ? ಪೊಲೀಸರಿಂದ ಫುಲ್ ಗ್ರಿಲ್!
ಇನ್ನು, ರಜತ್ ಪತ್ನಿ ಅಕ್ಷಿತಾ ಅವರು ನಿನ್ನೆ ಪೊಲೀಸರು ಕೇಳಿದಾಗ ಫೈಬರ್ ಮಚ್ಚು ತಂದುಕೊಟ್ಟಿದ್ರು. ಆದ್ರೆ, ಪ್ರಾಥಮಿಕ ತನಿಖೆ ಪ್ರಕಾರ ಆರೋಪಿಗಳು ನಕಲಿ ಮಚ್ಚು ನೀಡಿರೋದು ಬಯಲಾಗಿದೆ. ಅಸಲಿ ಮಚ್ಚು ಪತ್ತೆ ಮಾಡೋ ಸಲುವಾಗಿ ಮತ್ತೆ ರಜತ್ ಪತ್ನಿಗೆ ನೊಟೀಸ್ ನೀಡಲಾಗಿದೆ. ಈ ಹಿನ್ನೆಲೆ ರಜತ್ ಪತ್ನಿ ಮತ್ತೆ ಪೊಲೀಸ್ ಠಾಣೆಯ ವಿಚಾರಣೆಗೆ ಹಾಜರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ