/newsfirstlive-kannada/media/post_attachments/wp-content/uploads/2024/11/bbk1146.jpg)
ಕನ್ನಡದ ಬಿಗ್ಬಾಸ್ ಸೀಸನ್ 11 8ನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗಿದೆ. ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ಗಳ ಎಂಟ್ರಿಯಾಗಿದೆ.
ಇದನ್ನೂ ಓದಿ:BBK11: ಬಿಗ್ಬಾಸ್ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ; ಯಾರವರು?
/newsfirstlive-kannada/media/post_attachments/wp-content/uploads/2024/11/bbk1148.jpg)
ಯಾರು ಈ ಶೋಭಾ ಶೆಟ್ಟಿ?
ಕನ್ನಡದ ಬಿಗ್ಬಾಸ್ ಸೀಸನ್ 11ಕ್ಕೆ ಶೋಭಾ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ. ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಕನ್ನಡ ಸೀರಿಯಲ್ನಲ್ಲಿ ಮಿಂಚಿದ್ದ ಶೋಭಾ ಅವರು ತೆಲುಗಿನ ಸೀರಿಯಲ್ನಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅಲ್ಲದೇ ಬಿಗ್ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್ಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಆದರೆ ಈಗ ಕನ್ನಡದ ಬಿಗ್ಬಾಸ್ಗೆ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಯಾರು ಈ ರಜತ್ ಬುಜ್ಜಿ?
2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಟ ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ರಜತ್ ಕೆಲವು ದಿನಗಳ ಹಿಂದೆ ದರ್ಶನ್-ರೇಣುಕಾಸ್ವಾಮಿ ಘಟನೆ ಬಗ್ಗೆ ಧ್ವನಿ ಎತ್ತಿದ್ದರು. ಅದಾದ ಮೇಲೆ ವರುಣ್- ವರ್ಷ ಕಾವೇರಿ ಕಾಂಟ್ರವರ್ಸಿಗೂ ರಿಯಾಕ್ಟ್ ಮಾಡಿದ್ದರು. ಇದೀಗ ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ.
ಇನ್ನೂ ಈ ಇಬ್ಬರು ವೇದಿಕೆಗೆ ಬಂದ ಕೂಡಲೇ ಕಿಚ್ಚ ಸುದೀಪ್, ಯಾರು ನಿಮಗೆ ಟಫ್ ಅನಿಸುವ ಕಂಟೆಸ್ಟೆಂಟ್ ಅಂತ ಹೇಳಿದ್ದಾರೆ. ಅದಕ್ಕೆ ಶೋಭಾ ಶೆಟ್ಟಿ ಅವರು ಯಾರು ಇಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಮತ್ತೆ ರಜತ್ ಬುಜ್ಜಿ ಅವರು ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಅರ್ಧ ಪುಕ್ಲು, ಇನ್ನೂ ಅರ್ಧ ತಿಕ್ಲೂ, ಅವರಿಗೆ ಇವರು ಕಂಡ್ರೆ ಆಗೋದಿಲ್ಲ, ಇವರಿಗೆ ಅವರು ಕಂಡ್ರೆ ಆಗೋದಿಲ್ಲ, ಇವರು ಯಾರು ಉದ್ಧಾರ ಆಗೋದಿಲ್ಲ ಸರ್ ಅಂತ ಕಿಚ್ಚ ಸುದೀಪ್ ಮುಂದೇಯೇ ಹೇಳಿದ್ದಾರೆ. ಆಗ ಕಿಚ್ಚ ಇವರು ನಿಜವಾದ ಬಿಗ್ಬಾಸ್ ಕಂಟೆಸ್ಟೆಂಟ್ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ