/newsfirstlive-kannada/media/post_attachments/wp-content/uploads/2025/04/rajath1.jpg)
ಬೆಂಗಳೂರು: ವಿನಯ್ ಕೈಯಲ್ಲಿ ನಾನೇನು ಕೊಲೆ, ದರೋಡೆ ಮಾಡ್ಸಿಲ್ಲ. ನಮ್ಮಿಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ. ವೈಮನಸ್ಸು ಇದೆ ಎಂದು ರಜತ್​ ಕಿಶನ್ ಹೇಳಿದ್ದಾರೆ. ​
/newsfirstlive-kannada/media/post_attachments/wp-content/uploads/2025/04/rajath2.jpg)
ಈ ​ಬಗ್ಗೆ ನ್ಯೂಸ್​ಫಸ್ಟ್​ನೊಂದಿಗೆ ರಜತ್​ ಕಿಶನ್​ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ರಜತ್​ ಕಿಶನ್,​ ನಮಗೆ ರೀಲ್ಸ್​ನಿಂದ ಕೇಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಬಳಿಸಿದ್ವಿ. ನಾವು ಬಳಸಿದ್ದು ಫೈಬರ್ ಮಚ್ಚು. ಬಟ್ ನನ್ನ ಕಾರಿನಲ್ಲಿ ಫೈಬರ್ ಮಚ್ಚಿತ್ತು. ಕಾರಿನಲ್ಲಿರೋ ಮಚ್ಚನ್ನ ಕೊಡಬಾರದು ಅನ್ನೋ ಕಾರಣಕ್ಕೆ ಸೆಟ್​ನಲ್ಲಿದ್ದ ಮಚ್ಚು ಕೊಟ್ಟಿದ್ದು ನಿಜ. ನಾವು ಬಳಸಿದ್ದ ಮಚ್ಚನ್ನ ನಾನೇ ಎಸೆದಿದ್ದೆ. ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದೆ. ವಿನಯ್ ಕೈಯಲ್ಲಿ ನಾನೇನು ಕೊಲೆ, ದರೋಡೆ ಮಾಡ್ಸಿಲ್ಲ. ವಿನಯ್ ನನ್ನ ಬಗ್ಗೆ ಮಾತನಾಡಿದ್ದು ಇಷ್ಟ ಆಗಿಲ್ಲ. ಸದ್ಯ ಇಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ, ವೈಮನಸ್ಸು ಇದೆ ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/03/Rajat-Vinay-release-from-jail.jpg)
ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಆಗಿರೋ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಸೋಷಿಯಲ್​ ಮೀಡಿಯಾದಲ್ಲಿ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ಈ ಸಂಬಂಧ ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ರಜತ್​ ಹಾಗೂ ವಿನಯ್​ ಗೌಡ ಅವರನ್ನು ಬಂಧಿಸಿದ್ದರು. ಇದಾದ ಬಳಿಕ ಕೋರ್ಟ್​ನ ಅನುಮತಿಯಂತೆ ಷರತ್ತುಬದ್ಧ ಜಾಮೀನಿನ ಮೇಲೆ ಆಚೆ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us