/newsfirstlive-kannada/media/post_attachments/wp-content/uploads/2025/03/rajath.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಮುಗಿಯುತ್ತಿದ್ದಂತೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಶುರುವಾಯ್ತು. ಹೊಚ್ಚ ಹೊಸ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ವೀಕ್ಷಕರು ಒಳ್ಳೆಯ ರೆಸ್ಪಾನ್ಸ್ ನೀಡುತ್ತಿದ್ದಾರೆ.
ಇದನ್ನೂ ಓದಿ: ಮಗನಿಗೆ ಅಪ್ಪನ ಹೆಸರಿಟ್ಟ ಅಭಿಷೇಕ್ ಅಂಬರೀಶ್.. ರೆಬೆಲ್ ಸ್ಟಾರ್ ಮೊಮ್ಮಗನ ಹೆಸರೇನು ಗೊತ್ತಾ?
ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳು ನೇರವಾಗಿ ಬಾಯ್ಸ್ ಹಾಗೂ ಗರ್ಲ್ಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ. ಅದರಲ್ಲೂ ಬಿಗ್ಬಾಸ್ ಮನೆಯಲ್ಲಿದ್ದಾಗ ಸದಾ ಗಲಾಟೆ ಮಾಡಿಕೊಳ್ಳುತ್ತಿದ್ದ, ಒಬ್ಬರಿಗೊಬ್ಬರು ಕಾಲು ಎಳೆಯುತ್ತಿದ್ದ ಚೈತ್ರಾ ಕುಂದಾಪು ಹಾಗೂ ರಜತ್ ಕಿಶನ್ ಮತ್ತೆ ಒಂದಾಗಿದ್ದಾರೆ.
ಹೌದು, ಬಾಯ್ಸ್ ಹಾಗೂ ಗರ್ಲ್ಸ್ ಶೋ ಶುರುವಾಗಿ ಎರಡು ತಂಡಗಳ ಮಧ್ಯೆ ಡ್ಯಾನ್ಸ್, ಯುದ್ಧ, ಸಂಗೀತ ಸಮರ ಹೀಗೆ ಸಾಕಷ್ಟು ವಿಚಾರ ನಡೆದಿದೆ. ಆದ್ರೆ, ಬಾಯ್ಸ್ ಹಾಗೂ ಗರ್ಲ್ಸ್ ವೇದಿಕೆ ಮೇಲೆ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳ ಡ್ಯಾನ್ಸ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಹೌದು, ಈ ವಾರ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೋಲ್ಡ್ ಸುರೇಶ್ ಹಾಗೂ ಗೌತಮಿ ಜಾಧವ್ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಆಗ ನಿರೂಪಕಿ ಅನುಪಮ ಗೌಡ ಈ ಹಿಂದೆ ಬಿಗ್ಬಾಸ್ ಮನೆಯಲ್ಲಿ ಗೌತಮಿ ಹಾಗೂ ರಜತ್ ಅವರು ನಟಿ ತಾರಾ ಅವರ ಮುಂದೆ ತುಂಟ ತುಂಟ ಸಾಂಗ್ಗೆ ಡ್ಯಾನ್ಸ್ ಮಾಡಿದ್ದರು. ಇದೀಗ ಮತ್ತೆ ಅದೇ ಸಾಂಗ್ ಅನ್ನು ಬಾಯ್ಸ್ ಹಾಗೂ ಗರ್ಲ್ಸ್ ವೇದಿಕೆ ಮೇಲೆ ರೀ ಕ್ರಿಯೇಟ್ ಮಾಡುವಂತೆ ಹೇಳಿದ್ದಾರೆ.
View this post on Instagram
ಇದಾದ ಬಳಿಕ ರಜತ್ ಅವರ ಬಾಸ್ ಅಂದ್ರೆ ಚೈತ್ರಾ ಕುಂದಾಪುರ ಜೊತೆಗೆ ಇದೇ ತುಂಟ ತುಂಟ ಸಾಂಗ್ಗೆ ಡ್ಯಾನ್ಸ್ ಮಾಡುವಂತೆ ನಿರೂಪಕಿ ಅನುಪಮಾ ಗೌಡ ಹೇಳಿದ್ದಾರೆ. ಆಗ ಹಾಡು ಶುರುವಾಗುತ್ತಿದ್ದಂತೆ ರೊಚ್ಚಿಗೆದ್ದ ರಜತ್ ಏಕಾಏಕಿ ಚೈತ್ರಾ ಅವರ ಕೈಯನ್ನು ಹಿಡಿದು ಏಳೆದಿದ್ದಾರೆ. ಅಲ್ಲದೇ ಅವರನ್ನು ಎತ್ತಿಕೊಂಡು ತಿರುಗಿಸಿದ್ದಾರೆ. ಇದನ್ನೇ ನೋಡಿದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸದ್ಯ ಅಷ್ಟು ಎತ್ತಿಕೊಂಡು ಹೊರಳಾಡಿಸಿದ್ರೂ ಚೈತ್ರಾ ಅವರಿಗೆ ಏನೂ ಆಗಿಲ್ಲ. ಇದಾದ ಬಳಿಕ ಚೈತ್ರಾ ಕುಂದಾಪುರ ಅವರು ಸುಸ್ತಾಗಿ ಕುಳಿತು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ