/newsfirstlive-kannada/media/post_attachments/wp-content/uploads/2025/05/rajath-kishan4.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಜತ್ ಕಿಶನ್ ದಂಪತಿ ಸಖತ್ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ: ಕನ್ನಡ ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ದುರಂತ ಅಂತ್ಯ; ಕಾರಣವೇನು?
ಹೌದು, ಬಿಗ್ಬಾಸ್ ಮೂಲಕವೇ ಅತಿ ಹೆಚ್ಚು ಫೇಮಸ್ ಆಗಿದ್ದ ರಜತ್ ಕಿಶನ್ ಇದೀಗ ತಮ್ಮ ಅತ್ತೆ ಹಾಗೂ ಮಾವನ ಮದುವೆ ವಾರ್ಷಿಕೋತ್ಸವವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ.
ಹೌದು, ರಜತ್ ಕಿಶನ್ ಹಾಗೂ ಪತ್ನಿ ಅಕ್ಷಿತಾ ಅವರ ತಂದೆ ತಾಯಿ ಮದುವೆಯಾಗಿ ಮೊನ್ನೆಗೆ 30 ವರ್ಷ ಕಂಪ್ಲೀಟ್ ಆಗಿದೆ.
ಹೀಗಾಗಿ ರಜತ್ ಕಿಶನ್ ಹಾಗೂ ಪತ್ನಿ ಅಕ್ಷಿತಾ ಅವರು ಬಹಳ ಅದ್ಧೂರಿಯಾಗಿ ಪೋಷಕರ ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ.
ಇನ್ನೂ, ವಿಶೇಷ ಎಂದರೆ ಖುದ್ದಾಗಿ ಅಕ್ಷಿತಾ ಅವರೇ 3 ದಿನಗಳಿಂದ ತಯಾರಿ ನಡೆಸಿ, ಡೆಕೋರೇಷನ್ ಮಾಡಿ, ಸ್ಟಾರ್ಸ್ಗಳಿಗೆ ಫೋನ್ ಮಾಡಿ ಆನಿವರ್ಸರಿಗೆ ಆಹ್ವಾನ ನೀಡಿದ್ದಾರಂತೆ.
ಅಕ್ಷಿತಾ ಅವರ ಪೋಷಕರ ವೆಡ್ಡಿಂಗ್ ಆನಿವರ್ಸರಿಗೆ ಸ್ಯಾಂಡಲ್ವುಡ್ ನಟ ಶ್ರೀನಗರ ಕಿಟ್ಟಿ, ನಟ ಶಶಿಕುಮಾರ್, ಆದಿತ್ಯ, ಅಜಿತ್ ಜಯರಾಜ್ ಹಾಗೂ ಪತ್ನಿ ಇಂಪನಾ ಜಯರಾಜ್ ಸೇರಿದಂತೆ ಬಿಗ್ಬಾಸ್ ಸ್ಪರ್ಧಿಗಳು ಕೂಡ ಆಗಮಿಸಿ ಖುಷಿಪಟ್ಟಿದ್ದಾರೆ.
ಇನ್ನೂ, ರಜತ್ ಕಿಶನ್ ಅವರ ವೆಡ್ಡಿಂಗ್ ಆನಿವರ್ಸರಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ