/newsfirstlive-kannada/media/post_attachments/wp-content/uploads/2025/04/rajath-jkishan.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಸ್ಪರ್ಧಿ ರಜತ್ ಕಿಶನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದಕ್ಕೆ ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದರು.
ಇದನ್ನೂ ಓದಿ: ಸೀರೆ ಜಾಗಕ್ಕೆ ಪ್ಯಾಂಟ್ ಶರ್ಟ್.. ಶ್ರಾವಣಿ ಸುಬ್ರಹ್ಮಣ್ಯ ಕಾಂತಮ್ಮತ್ತೆಯ ರೆಬೆಲ್ ಲುಕ್ಗೆ ವೀಕ್ಷಕರು ಫಿದಾ
ಆದ್ರೆ, ಇದೀಗ ರಜತ್ ಕಿಶನ್ ಹಾಗೂ ಅಕ್ಷಿತಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಅದೇ ಖುಷಿಯಲ್ಲಿ ಈ ಜೋಡಿ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಬಿಗ್ಬಾಸ್ 11ರ ಮೂಕಕ ಸಖತ್ ಫೇಮಸ್ ಆಗಿದ್ದು ರಜತ್ ಕಿಶನ್, ಬಿಗ್ಬಾಸ್ ಸ್ಪರ್ಧಿಗಳಿಗೆ ತಮಾಷೆ ಮಾಡುತ್ತಾ, ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದರು.
ಸದ್ಯ ಬಿಗ್ಬಾಸ್ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲೂ ಸ್ಪರ್ಧಿಸಿದ ರಜತ್ ಕಿಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಜತ್ ಕಿಶನ್ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
View this post on Instagram
ರಜತ್ ಕಿಶನ್ ಹಾಗೂ ಅಕ್ಷಿತಾ ದಂಪತಿ ರಾತ್ರಿ ರಸ್ತೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವದ ಸೆಲೆಬ್ರೇಟ್ ಮಾಡಿದ್ದಾರೆ. ಇದೇ ಫೋಟೋಗಳನ್ನು ಅಕ್ಷಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ