/newsfirstlive-kannada/media/post_attachments/wp-content/uploads/2025/03/rajath-kishan-9.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ರಜತ್ ಕಿಶನ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಗ್ಬಾಸ್ ಸ್ಪರ್ಧಿ ರಜತ್ ಕಿಶನ್ ಪತ್ನಿ ಅಕ್ಷಿತಾ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
ಹೀಗಾಗಿ ರಜತ್ ಕಿಶನ್ ಅಕ್ಷಿತಾ ಅವರ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಹೀಗಾಗಿ ಖಾಸಗಿ ಹೋಟೆಲ್ವೊಂದರಲ್ಲಿ ರಜತ್ ಕಿಶನ್ ಬರ್ತ್ ಡೇ ಪಾರ್ಟಿಯನ್ನು ಆಯೋಜನೆ ಮಾಡಿದ್ದರು.
ಇದೇ ಪಾರ್ಟಿಯಲ್ಲಿ ಬಿಗ್ಬಾಸ್ ಸೀಸನ್ 11 ಹಾಗೂ 10ರ ಸ್ಪರ್ಧಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಬಿಗ್ ಬಾಸ್ ಕನ್ನಡ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಜತ್ ಕಿಶನ್ ಎಂಟ್ರಿ ಕೊಟ್ಟಿದ್ದರು. ವೈಲ್ಡ್ ಆಗಿಯೇ ಎರಡನೇ ರನ್ನರ್ ಅಪ್ ಆದರು.
ಇನ್ನೂ ರಜತ್ ಪತ್ನಿ ಅಕ್ಷಿತಾ ಸಹ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡವರು. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು - ಸೀಸನ್ 3’ ಶೋನಲ್ಲಿ ರನ್ನರ್ ಅಪ್ ಆಗಿದ್ದರು. ಇದೀಗ ಅಕ್ಷಿತಾ ಅವರ ಹುಟ್ಟು ಹಬ್ಬವನ್ನ ಪತಿ ರಜತ್ ಕಿಶನ್ ಅದ್ಧೂರಿಯಾಗಿ ಆಚರಿಸಿದ್ದಾರೆ.
ಈ ಹಿಂದೆ ಬಿಗ್ಬಾಸ್ ಮನೆಯಲ್ಲಿದ್ದ ರಜತ್ ಪತ್ನಿಗೆ ಎಷ್ಟು ತಮಾಷೆ ಮಾಡುತ್ತಿದ್ದರು ಅಂತ ನಿಮಗೆಲ್ಲ ಗೊತ್ತೇ ಇದೆ. ತಮ್ಮ ಪತ್ನಿಯನ್ನ ಸಿಐಡಿ ಎಂದು ಕರೆಯುತ್ತಿದ್ದ ರಜತ್ ಅವರು ಅದೇ ಥೀಮ್‌ನಲ್ಲಿ ಹಾಗೂ ಕೇಕ್ ಮೇಲೆ CID ಅಂತ ಬರೆಸಿದ್ದರು.
ಅಕ್ಷಿತಾ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಭವ್ಯಾ ಗೌಡ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಶಿಶಿರ್ ಶಾಸ್ತ್ರಿ, ಉಗ್ರಂ ಮಂಜು, ಅನುಷಾ ರೈ ಭಾಗಿಯಾಗಿ ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ.
ಇಷ್ಟೇ ಅಲ್ಲದೇ ಸ್ನೇಹಿತ್, ನಿವೇದಿತಾ ಗೌಡ, ಜಗಪ್ಪ, ಪ್ರಶಾಂತ್, ಸುಷ್ಮಿತಾ, ವಿನಯ್ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಸ್ಪರ್ಧಿಗಳು, ರಜತ್ - ಅಕ್ಷಿತಾ ದಂಪತಿಗೆ ಕ್ಲೋಸ್ ಆಗಿರುವ ಐಶ್ವರ್ಯಾ, ವಿನಯ್ ಭಾಗಿಯಾಗಿದ್ದರು. ಇದೇ ಬರ್ತ್ ಡೇ ಪಾರ್ಟಿಯಲ್ಲಿ ನಿವೇದಿತಾ ಗೌಡ ಅವರು ಅಕ್ಷಿತಾಗೆ ಚಾಕೊಲೇಟ್ ಬೇಬಿ ಡಾಲ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ