newsfirstkannada.com

×

ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್​.. ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್​​ನಲ್ಲಿ ಚಿಕಿತ್ಸೆ! ಅಂಥದ್ದೇನಾಯ್ತು?

Share :

Published October 1, 2024 at 7:04am

Update October 3, 2024 at 8:47pm

    ಸೂಪರ್​ ಸ್ಟಾರ್​​ ರಜನಿಕಾಂತ್​ಗೆ ಅಪೋಲೋದಲ್ಲಿ ಚಿಕಿತ್ಸೆ

    ಸದ್ಯ ಅವರ ಆರೋಗ್ಯ ಸ್ಥಿತಿ ಹೇಗಿದೆ? ಏನಾಯ್ತು ಅವರಿಗೆ?

    ವೆಟ್ಟೈಯನ್​​​ ಸಿನಿಮಾದ ಬಿಡುಗಡೆ ಸಮಯದಲ್ಲಿ ಇದೇನಾಯ್ತು?

ಸೂಪರ್​ ಸ್ಟಾರ್​​ ರಜನಿಕಾಂತ್​​​ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಸುದ್ದಿ ಮೂಲಗಳು ತಿಳಿಸಿವೆ.

ರಜನಿಕಾಂತ್​ಗೆ ಏನಾಯ್ತು?

ನೆಲ್ಸನ್​​ ದಿಲೀಪ್​​ಕುಮಾರ್​ ಅವರ ‘ಜೈಲರ್’​ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದರು. ಸದ್ಯ ವೆಟ್ಟೈಯನ್ ಸಿನಿಮಾದ ಬಿಡುಗಡೆಯ ಹಂತದಲ್ಲಿದ್ದಾರೆ. ಸದ್ಯ ರಜನಿಕಾಂತ್​ಗೆ ಹೊಟ್ಟೆ ನೋವು ಕಾಡಿದೆ. ಅದರಿಂದ ಬಳಲುತ್ತಿದ್ದ ನಟ ಆಸ್ಪತ್ರೆ ಸೇರಿದ್ದಾರೆ. ಇಂಟರ್ವೆನ್ಷನಲ್​​ ಕಾರ್ಡಿಯಾಲಜಿಸ್ಟ್​​ ಡಾ ಸಾಯಿ ಸತೀಶ್​ ಅವರ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಜನಿಕಾಂತ್​ಗೆ ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ಅಭಿಮಾನಿಗಳ ತಲೈವಾ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ವೆಟ್ಟೈಯನ್ ಸಿನಿಮಾ 

ಆಸ್ಪತ್ರೆಗೂ ದಾಖಲಾಗುವುದಕ್ಕೂ ಮುನ್ನ ರಜನಿಕಾಂತ್​​​ ಮುಂಬರುವ ವೆಟ್ಟೈಯನ್​​​ ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆಯೇ ಇದು ಆ್ಯಕ್ಷನ್​​​ ಪ್ಯಾಕ್ಡ್​​​ ಮನರಂಜನೆಯ ಸಿನಿಮಾವಾಗಿದ್ದು, ಅಕ್ಟೋಬರ್​​ 10ರಂದು ಥಿಯೇಟರ್​​ಗಳಿಗೆ ಬರಲಿದೆ. ಈ ಸಿನಿಮಾವನ್ನು ಟಿಜೆ ಜ್ಞಾನವೇಲ್​​ ನಿರ್ದೇಶಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಗೆ ದಾಖಲಾದ ನಟ ರಜನಿಕಾಂತ್​.. ಕಾರ್ಡಿಯಾಕ್​ ಕ್ಯಾಥ್​ ಲ್ಯಾಬ್​​ನಲ್ಲಿ ಚಿಕಿತ್ಸೆ! ಅಂಥದ್ದೇನಾಯ್ತು?

https://newsfirstlive.com/wp-content/uploads/2024/10/Rajanikanth-1.jpg

Load More