newsfirstkannada.com

PHOTO: ರಜನಿ, ಚಿರಂಜೀವಿ, ಅಮಿತಾಬ್ ಬಚ್ಚನ್.. ರಾಮನೂರಿನಲ್ಲಿ ಸೆಲೆಬ್ರಿಟಿಗಳ ದಂಡು; ಯಾರ್ ಯಾರ್ ಇದ್ದಾರೆ?

Share :

Published January 22, 2024 at 11:46am

Update January 22, 2024 at 11:57am

  ರಜನಿಕಾಂತ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್

  ಮೆಗಾಸ್ಟಾರ್ ಚಿರಂಜೀವಿ, ಪುತ್ರ ರಾಮಚರಣ್ ತೇಜಾ, ಆಲಿಯಾ ಭಟ್

  ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥನ್

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರದ ಉದ್ಘಾಟನೆ ಅದ್ಧೂರಿಯಾಗಿ ನೆರವೇರುತ್ತಿದೆ. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಧಾರ್ಮಿಕ ಕಾರ್ಯಗಳು, ರಾಮನಾಮ ಜಪ ಮುಗಿಲು ಮುಟ್ಟಿದೆ. ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಗಣ್ಯಾತಿಗಣ್ಯರ ಆಗಮನವಾಗಿದೆ.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನದ ಮೇರೆಗೆ ಬಾಲಿವುಡ್‌ ಬಿಗ್‌ಬಿ ಕುಟುಂಬ ಅಯೋಧ್ಯೆಗೆ ಆಗಮಿಸಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ವಿಐಪಿ ಸಾಲಿನಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಅಯೋಧ್ಯೆಗೆ ಆಗಮಿಸಿದ್ದು ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ, ಪುತ್ರ ರಾಮಚರಣ್ ತೇಜಾ ಅವರು ಅಯೋಧ್ಯೆಗೆ ಆಗಮಿಸಿದ್ದಾರೆ.

ಬಾಲಿವುಡ್ ತಾರೆಯರಾದ ಕರ್ತಿನಾ ಕೈಫ್, ಕಂಗನಾ ರನೌತ್, ಆಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಅನುಪಮ್‌ ಖೇರ್ ಕೂಡ ಅಯೋಧ್ಯೆ ಆಗಮಿಸಿದ್ದಾರೆ.

ಇನ್ನು, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಇಸ್ರೋ ಮುಖ್ಯಸ್ಥ ಎಸ್‌. ಸೋಮನಾಥನ್ ಕೂಡ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ರಜನಿ, ಚಿರಂಜೀವಿ, ಅಮಿತಾಬ್ ಬಚ್ಚನ್.. ರಾಮನೂರಿನಲ್ಲಿ ಸೆಲೆಬ್ರಿಟಿಗಳ ದಂಡು; ಯಾರ್ ಯಾರ್ ಇದ್ದಾರೆ?

https://newsfirstlive.com/wp-content/uploads/2024/01/Rajani-Chiranjeevi.jpg

Load More