newsfirstkannada.com

ನನ್ನ ತಂದೆ ಬಿಜೆಪಿ ಏಜೆಂಟ್​​ ಅಲ್ಲ ಎಂದಿದ್ದ ಐಶ್ವರ್ಯಾ.. ಮಗಳ ಆಕ್ರೋಶದ ಬಗ್ಗೆ ರಜನಿಕಾಂತ್​ ಏನಂದ್ರು?

Share :

Published January 29, 2024 at 5:24pm

    ತನ್ನ ತಂದೆ ಸಂಘಿ ಅಲ್ಲ ಎಂದಿದ್ದ ನಟ ರಜನಿಕಾಂತ್​​ ಮಗಳು

    ಮಗಳು ಐಶ್ವರ್ಯಾ ಹೇಳಿಕೆ ಬಗ್ಗೆ ರಜನಿಕಾಂತ್​ ಹೇಳಿದ್ದೇನು..?

    ನನ್ನ ಮಗಳು ಸಂಘಿ ಪದವನ್ನು​ ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದ್ರು!

ಚೆನ್ನೈ: ನನ್ನ ತಂದೆ ಸಂಘಿ ಅಲ್ಲ ಎಂಬ ಮಗಳ ಹೇಳಿಕೆಯನ್ನು ಸೂಪರ್​ ಸ್ಟಾರ್​ ರಜನಿಕಾಂತ್​​ ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಚೆನ್ನೈ ಇಂಟರ್​ ನ್ಯಾಷನಲ್​ ಏರ್ಪೋರ್ಟ್​​ನಲ್ಲಿ ಮಾತಾಡಿದ ನಟ ರಜನಿಕಾಂತ್, ನನ್ನ ಮಗಳು ಹೇಳಿದ್ದರಲ್ಲಿ ತಪ್ಪೇನಿದೆ? ನಾನು ಸಂಘಿ ಅಲ್ಲ. ನನ್ನ ಮಗಳು ಸಂಘಿ ಪದವನ್ನು​ ಕೆಟ್ಟ ಅರ್ಥದಲ್ಲಿ ಬಳಸಿಲ್ಲ ಎಂದರು.

ಇತ್ತೀಚೆಗೆ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ ಸೂಪರ್ ಸ್ಟಾರ್ ರಜನಿಕಾಂತ್​​ ಭಾಗಿಯಾಗಿದ್ದರು. ಅಯೋಧ್ಯೆ ಭೇಟಿ ನೀಡಿದ ಬಳಿಕ ಮಾತಾಡಿದ ನಟ ರಜನಿಕಾಂತ್​​, 500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ ಎಂದಿದ್ದರು. ರಜನಿಕಾಂತ್​​ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸ್ಟಾರ್​ ಡೈರೆಕ್ಟರ್​​ ಪಾ ರಂಜಿತ್, ರಾಮ ಮಂದಿರಕ್ಕೆ ಹೋಗುವುದು ಅವರ ವೈಯಕ್ತಿಕ ಆಯ್ಕೆ. ಅವರು 500 ವರ್ಷಗಳ ಹಿಂದಿನ ಸಮಸ್ಯೆ ಎಂದು ಹೇಳಿದ್ದರ ಹಿಂದಿನ ರಾಜಕೀಯವನ್ನು ಪ್ರಶ್ನೆ ಮಾಡಬೇಕಿದೆ’ ಎಂದಿದ್ದರು.

ಇನ್ನು, ಪಾ ರಂಜಿತ್ ಹೇಳಿಕೆ ಬೆನ್ನಲ್ಲೇ ಹಲವರು ರಜನಿಕಾಂತ್ ವಿರುದ್ಧ ತಿರುಗಿ ಬಿದ್ದಿದ್ದರು. ಜತೆಗೆ ರಜನಿಕಾಂತ್​​ ಅವರನ್ನು ಆರ್​​ಎಸ್​​ಎಸ್​​ ಏಜೆಂಟ್​​, ಸುಪ್ತ ಸಂಘಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಈಗ ಟೀಕಿಸಿದವರಿಗೆ ರಜನಿಕಾಂತ್​ ಮಗಳು ಖಡಕ್​ ಉತ್ತರ ನೀಡಿದ್ದರು.

ಏನಿದು ವಿವಾದ..?

ತಾನು ನಿರ್ದೇಶಿಸಿದ ಲಾಲ್​​ ಸಲಾಮ್​​​ ಸಿನಿಮಾ ಆಡಿಯೋ ಲಾಂಚ್​​ನಲ್ಲಿ ಮಾತಾಡಿದ ಐಶ್ವರ್ಯಾ ರಜನಿಕಾಂತ್​​, ನನ್ನ ತಂದೆಯನ್ನು ಕೆಲವರು ‘ಸಂಘಿ’ ಎಂದು ಕರೆಯುತ್ತಿದ್ದಾರೆ. ಈ ಮಾತುಗಳನ್ನು ಕೇಳಿದಾಗ ನನಗೆ ಕೋಪ ಬರುತ್ತದೆ. ನನ್ನ ತಂದೆ ಸಂಘಿ ಅಲ್ಲ, ಅವರಿಗೂ ಬಿಜೆಪಿ ಸಿದ್ಧಾಂತಕ್ಕೂ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ನನ್ನ ತಂದೆ ಸಂಘಿ ಆಗಿದ್ದರೆ ಲಾಲ್​ ಸಲಾಮ್​​ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ನಾನು ಹೀಗೆ ಹೇಳಲು ಕಾರಣವಿದ್ದು, ಇದು ನಿಮಗೆ ಸಿನಿಮಾ ಮಾಡಿದಾಗ ಗೊತ್ತಾಗಲಿದೆ. ಲಾಲ್​ ಸಲಾಮ್​​ ಸಿನಿಮಾ ಮಾಡಲು ಧೈರ್ಯ ಬೇಕು, ಅದು ನನ್ನ ತಂದೆಗೆ ಮಾತ್ರ ಇರೋದು ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ತಂದೆ ಬಿಜೆಪಿ ಏಜೆಂಟ್​​ ಅಲ್ಲ ಎಂದಿದ್ದ ಐಶ್ವರ್ಯಾ.. ಮಗಳ ಆಕ್ರೋಶದ ಬಗ್ಗೆ ರಜನಿಕಾಂತ್​ ಏನಂದ್ರು?

https://newsfirstlive.com/wp-content/uploads/2024/01/Rajinikanth.jpg

Load More