ಒಂದೇ ಸಿನಿಮಾದಲ್ಲಿ ರಜನಿಕಾಂತ್, ಬಿಗ್ ಬಿ ಅಮಿತಾಬ್ ಬಚ್ಚನ್
ಲೈಕಾ ಪ್ರೊಡಕ್ಷನ್ನಲ್ಲಿ ನಿರ್ಮಾಣ ಮಾಡಲಾದ ವೆಟ್ಟೈಯಾನ್ ಮೂವಿ
ವೆಟ್ಟಯ್ಯನ್ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಯಾರು..?
ಸೂಪರ್ ಸ್ಟಾರ್ ರಜನಿಕಾಂತ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಅವರ ಬಹುನಿರೀಕ್ಷಿತ, ಬಾರೀ ಬಜೆಟ್ ಮೂವಿಯಾದ ವೆಟ್ಟೈಯಾನ್ ಕುರಿತು ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ವೆಟ್ಟೈಯಾನ್ ಇದೇ ತಿಂಗಳು ಅ.10 ರಂದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸುತ್ತಿದ್ದು ಈ ಮೂವಿಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಟಿ.ಜೆ.ಜ್ಞಾನವೇಲ್ ನಿರ್ದೇಶನದಲ್ಲಿ ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ವೆಟ್ಟೈಯಾನ್ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಅಂದರೆ ಈ ಸಿನಿಮಾದಲ್ಲಿ ಹಿಂಸಾಚಾರ ಹಾಗೂ ರಕ್ತಪಾತ ಹೆಚ್ಚಾಗಿ ಇರುವುದರಿಂದ ಈ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ರಜನಿಕಾಂತ್ ಅವರು ಇತ್ತೀಚೆಗೆ ನಟಿಸಿದ ದರ್ಬಾರ್, ಲಾಲ್ ಸಲಾಂ, 2.0 ಸಿನಿಮಾಗಳಿಗೆ ಇದೇ ಸರ್ಟಿಫಿಕೇಟ್ ಸಿಕ್ಕಿತ್ತು. ಇನ್ನೊಂದು ವಿಶೇಷ ಮಾಹಿತಿ ಎಂದರೆ ಈ ಸಿನಿಮಾದ ಟ್ರೈಲರ್ ಅನ್ನು ಇಂದೇ ಗಾಂಧಿ ಜಯಂತಿಯಂದು ರಿಲೀಸ್ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ಹೇಳಿದೆ.
ಇದನ್ನೂ ಓದಿ: ರಜನಿಕಾಂತ್, ಸೂರ್ಯ ಮಧ್ಯೆ ಬಿಗ್ ವಾರ್.. ಒಂದೇ ದಿನ ತೆರೆ ಮೇಲೆ ಇಬ್ಬರು ಮುಖಾಮುಖಿ
ವೆಟ್ಟೈಯಾನ್ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು ಟಿ.ಜೆ.ಜ್ಞಾನವೇಲ್ ನಿರ್ದೇಶನ ಮಾಡಿದ್ದಾರೆ. 33 ವರ್ಷಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಾಗಿ ಅಭಿನಯ ಮಾಡುತ್ತಿದ್ದಾರೆ. ಫಹಾದ್ ಫಾಸಿಲ್ ಕೂಡ ಈ ಮೂವಿಯಲ್ಲಿದ್ದಾರೆ. ಅಲ್ಲದೇ ತೆರೆ ಮೇಲೆ ಈ ಬಿಗ್ ಸೆಲೆಬ್ರೆಟಿಗಳನ್ನು ನೋಡಲು ಫ್ಯಾನ್ಸ್ ಕೂಡ ಕಾತುರದಿಂದ ಇದ್ದಾರೆ. ಇನ್ನು ಸಿನಿಮಾ ಕಥೆ ಏನಿರಬಹುದೆಂದು ಕಾತುರದಿಂದ ಇದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?
ರಜನಿಕಾಂತ್ ಆರೋಗ್ಯ ಹೇಗಿದೆ..?
ರಜನಿಕಾಂತ್ ಅವರಿಗೆ ಸೆ.30ರ ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ರಜನಿಕಾಂತ್ ಅವರ ಹೃದಯ ಪರೀಕ್ಷೆ ಸೇರಿ ಕೆಲ ಆರೋಗ್ಯ ಪರೀಕ್ಷೆಗಳನ್ನ ಮಾಡಲಾಗಿದೆ. ಈ ಕುರಿತು ಹೃದಯರೋಗ ತಜ್ಞ ಸಾಯಿ ಸತೀಶ್ ಆರೋಗ್ಯ ಚೆನ್ನಾಗಿದೆ. ಗಾಬರಿ ಬೇಡ ಎಂದಿದ್ದಾರೆ. ರಜನಿಕಾಂತ್ ಅವರನ್ನು ಬೇರೆ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಎರಡು ದಿನದಲ್ಲಿ ಅವರು ಮನೆಗೆ ಹೋಗಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ