Advertisment

Vettaiyan review: ಪಕ್ಕಾ ಮಾಸ್ & ಕ್ಲಾಸ್.. ರಜನಿಕಾಂತ್ ವೆಟ್ಟಯ್ಯನ್ ಸಿನಿಮಾ ಹೇಗಿದೆ ಗೊತ್ತಾ?

author-image
admin
Updated On
Vettaiyan review: ಪಕ್ಕಾ ಮಾಸ್ & ಕ್ಲಾಸ್.. ರಜನಿಕಾಂತ್ ವೆಟ್ಟಯ್ಯನ್ ಸಿನಿಮಾ ಹೇಗಿದೆ ಗೊತ್ತಾ?
Advertisment
  • ಕ್ಲೈಮ್ಯಾಕ್ಸ್‌ನಲ್ಲಿ ಒಂದು ಒಳ್ಳೆ ಮೆಸೇಜ್ ಜೊತೆಗೆ ಎನ್‌ಕೌಂಟರ್‌!
  • 30 ವರ್ಷದ ಬಳಿಕ ಮತ್ತೆ ಮೋಡಿ ಮಾಡಿದ ರಜನಿ, ಬಚ್ಚನ್
  • ಜೈ ಭೀಮ್ ‘ಜ್ಞಾನವೇಲ್’ ಈ ಸಿನಿಮಾದ ರಿಯಲ್ ಹೀರೋ!

ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ವೆಟ್ಟಯ್ಯನ್ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಫಸ್ಟ್ ಶೋ ನೋಡಿದ ಅಭಿಮಾನಿಗಳಿಂದ ಸೂಪರ್ ಸ್ಟಾರ್ ವೆಟ್ಟಯ್ಯನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ವೆಟ್ಟಯ್ಯನ್ ಸಿನಿಮಾದ ಹೈಲೈಟ್ ಅಂದ್ರೆ ಜ್ಞಾನವೇಲ್ ಅವರ ಅಮೋಘ ನಿರ್ದೇಶನ. ಜೈ ಭೀಮ್ ಖ್ಯಾತಿಯ ಜ್ಞಾನವೇಲ್ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿದ್ದಾರೆ. ರಜನಿಕಾಂತ್ ಅವರಿಗಾಗಿ ಜ್ಞಾನವೇಲ್ ಬಹಳಷ್ಟು ಶ್ರಮವಹಿಸಿರೋದು ಚಿತ್ರದಲ್ಲಿ ಕಂಡು ಬರುತ್ತದೆ.

Advertisment

ಇದನ್ನೂ ಓದಿ: ನಟ ದರ್ಶನ್ ಹೊಸ ಸಿಗ್ನಲ್‌.. ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು? 

ಜೈ ಭೀಮ್ ಚಿತ್ರದಲ್ಲಿ ಜ್ಞಾನವೇಲ್ ಅವರು ಇಡೀ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದರು. ಅದೇ ರೀತಿ ವೆಟ್ಟಯ್ಯನ್ ಚಿತ್ರದಲ್ಲೂ ಕೂಡ ಬಿಗ್ ಸ್ಟಾರ್‌ಗಳ ಮೂಲಕ ಅದ್ಭುತ ಸಂದೇಶವನ್ನು ನೀಡಿದ್ದಾರೆ. ರಜನಿಕಾಂತ್‌ ಅಭಿಮಾನಿಗಳಿಗೆ ಬಹಳ ಇಷ್ಟವಾದ ಸಿನಿಮಾ ತೆಗೆದು ಜ್ಞಾನವೇಲ್ ಅವರು ಸಕ್ಸಸ್ ಆಗಿದ್ದಾರೆ.

publive-image

ವೆಟ್ಟಯ್ಯನ್ ಕಥೆ ಏನು?
ವೆಟ್ಟಯ್ಯನ್ ಅಂದ್ರೆ ಬೇಟೆಗಾರ. ಸಿನಿಮಾದ ಮೊದಲಾರ್ಧ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ಚಿತ್ರಕಥೆಯನ್ನು ರೋಚಕವಾಗಿ ಹೆಣೆಯಲಾಗಿದೆ. ದೊಡ್ಡ, ದೊಡ್ಡ ಉದ್ದಿಮೆದಾರರು ಅಮಾಯಕರನ್ನು ಬಳಸಿಕೊಳ್ಳೋದು. ನಕಲಿ ಎನ್‌ಕೌಂಟರ್‌ಗಳಲ್ಲಿ ತಮ್ಮದಲ್ಲದ ತಪ್ಪಿಗೆ ಆ ಅಮಾಯಕರು ಬಲಿಯಾಗುತ್ತಾರೆ. ಇದರ ಬಗ್ಗೆ ವೆಟ್ಟಯ್ಯನ್‌ನಲ್ಲಿ ಬೆಳಕು ಮೂಡಿಸಲಾಗಿದೆ.

Advertisment

publive-image

ಮುಂದಿನ ಭಾಗದಲ್ಲಿ ಎಜುಕೇಷನ್ ಮಾಫಿಯಾದ ಬಗ್ಗೆ ವೆಟ್ಟಯ್ಯನ್ ಸಿನಿಮಾದ ಕಥೆ ಮೂಡಿ ಬಂದಿದೆ. ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಈ ಚಿತ್ರದಲ್ಲಿ ಯಥವತ್ತಾಗಿ ತೋರಿಸಲಾಗಿದೆ. ಶಿಕ್ಷಣ ಅನ್ನೋದು ಮಾಫಿಯಾ ಆಗಿರೋದರ ಬಗ್ಗೆ ಸಿನಿಮಾ ಚಿತ್ರೀಕರಿಸಲಾಗಿದೆ.

publive-image

ರಜಿನಿ-ಬಚ್ಚನ್ ಜೋಡಿ!
ವೆಟ್ಟಯ್ಯನ್ ಸಿನಿಮಾದಲ್ಲಿ 30 ವರ್ಷದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಒಟ್ಟಿಗೆ ಅಭಿನಯಿಸಿದ್ದಾರೆ. ಈ ಎರಡು ಪಾತ್ರದ ಸಿದ್ಧಾಂತ ವಿರುದ್ಧವಾಗಿ ಇದ್ದರೂ ಕೊನೆಯಲ್ಲಿ ಇಬ್ಬರು ಒಂದಾಗುವುದು ಅದ್ಭುತವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಪೊಲೀಸರು ಬೇಟೆಗಾರರಾಗಿರಬಾರದು ಆರಕ್ಷಕರಾಗಿರಬೇಕು ಅನ್ನೋ ಸಂದೇಶವನ್ನ ವೆಟ್ಟಯ್ಯನ್ ಸಿನಿಮಾದಲ್ಲಿ ಇಡೀ ಸಮಾಜಕ್ಕೆ ನೀಡಲಾಗಿದೆ. ವೆಟ್ಟಯ್ಯನ್ ಸಿನಿಮಾ ಕ್ಲಾಸ್ ಮತ್ತು ಮಾಸ್ ಆಗಿದೆ ಅಂತಾನೇ ಹೇಳಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment