ರಜನಿಕಾಂತ್​​, ಸೂರ್ಯ ಮಧ್ಯೆ ಬಿಗ್​ ವಾರ್​​.. ಒಂದೇ ದಿನ ತೆರೆ ಮೇಲೆ ಇಬ್ಬರು ಮುಖಾಮುಖಿ

author-image
Bheemappa
Updated On
ರಜನಿಕಾಂತ್​​, ಸೂರ್ಯ ಮಧ್ಯೆ ಬಿಗ್​ ವಾರ್​​.. ಒಂದೇ ದಿನ ತೆರೆ ಮೇಲೆ ಇಬ್ಬರು ಮುಖಾಮುಖಿ
Advertisment
  • 33 ವರ್ಷಗಳ ಬಳಿಕ ಒಂದೇ ತೆರೆ ಮೇಲೆ ಬಚ್ಚನ್-ರಜನಿಕಾಂತ್
  • ವೆಟ್ಟಯ್ಯನ್ ಸಿನಿಮಾ ನಿರ್ದೇಶನ ಮಾಡಿದ ಡೈರೆಕ್ಟರ್ ಯಾರು?
  • ವೆಟ್ಟಯ್ಯನ್, ಕಂಗುವ ಯಾವ ತಿಂಗಳಲ್ಲಿ ಬಿಡುಗಡೆ ಆಗಲಿವೆ..?

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್​ ಬಿಗ್ ಬೀ ಅಮಿತಾಬ್ ಬಚ್ಚನ್ 33 ವರ್ಷಗಳ ಬಳಿಕ ಮತ್ತೆ ವೆಟ್ಟಯ್ಯನ್ ಮೂವಿ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಕಥೆ ಏನಿರಬಹುದೆಂದು ಅಭಿಮಾನಿಗಳು ಕಾತುರದಿಂದ ಇದ್ದಾರೆ. ವೆಟ್ಟಯ್ಯನ್ ಮೂವಿ ಅಪ್​ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್​ ಕಾಯುತ್ತಿರುವ ಬೆನ್ನಲ್ಲೇ ಬಿಗ್​ ಅಪ್​ಡೇಟ್​ ಒಂದು ಹೊರ ಬಿದ್ದಿದೆ.

publive-image

ರಜನಿಕಾಂತ್ ಮೇನ್ ರೋಲ್​ನಲ್ಲಿ ಕಾಣಿಸಿರೋ ವೆಟ್ಟಯ್ಯನ್ ಸಿನಿಮಾವನ್ನು ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ ಇದರಲ್ಲಿ ಬಿಗ್ ಬೀ ಅಮಿತಾಬ್ ಬಚ್ಚನ್ ಕೂಡ ಅಭಿನಯ ಮಾಡಿದ್ದಾರೆ. ಬಳ್ಳಿ ತೆರೆ ಮೇಲೆ ಈ ಇಬ್ಬರು ಬರೋಬ್ಬರಿ 33 ವರ್ಷಗಳ ಬಳಿಕ ಮತ್ತೆ ಒಟ್ಟಾಗಿ ರಂಜಿಸಲು ಬರುತ್ತಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ಲೈಕಾ ಪ್ರೊಡಕ್ಷನ್ಸ್, ವೆಟ್ಟಯ್ಯನ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.

ಇದನ್ನೂ ಓದಿ:ಹೊಸ ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ಇಬ್ಬರ ಭೇಟಿ ಹಿಂದಿನ ಕಾರಣವೇನು?

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಶೇರ್ ಮಾಡಿರುವ ಲೈಕಾ ಪ್ರೊಡಕ್ಷನ್ಸ್, ರಜನಿಕಾಂತ್ ಪೊಲೀಸ್​ ಡ್ರೆಸ್​ನಲ್ಲಿ ಇರುವ ಫೋಟೋ ಕೂಡ ಪೋಸ್ಟ್ ಮಾಡಿದೆ. ವೆಟ್ಟಯ್ಯನ್ ಸಿನಿಮಾ ವಿಶ್ವದ್ಯಾಂತ ಅಕ್ಟೋಬರ್​ 10 ರಂದು ಬೆಳ್ಳಿ ಪರದೆ ಮೇಲೆ ಬರಲಿದೆ. ಸೂಪರ್​ ಸ್ಟಾರ್​ ಸೂಪರ್ ಕಾಪ್​ ಆಗಿ ಮೂವಿಯಲ್ಲಿ ಕಾಣಿಸಲಿದ್ದಾರೆ. ಸಿನಿಮಾವು ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ.


">August 19, 2024

ಇನ್ನು ಇದೇ ದಿನಾಂಕದಂದು ತಮಿಳು ನಟ ಸೂರ್ಯ ಅಭಿನಯದ ಕಂಗುವ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸಖತ್ ಪೈಪೋಟಿಗೆ ಬೀಳಲಿವೆ ಎಂದು ಹೇಳಲಾಗುತ್ತಿದೆ. ಕಂಗುವ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment