newsfirstkannada.com

ರಾಜೀವ್​ ಗಾಂಧಿ ಹತ್ಯೆಯ ಅಪರಾಧಿ ಸಂತನ್ ಚೆನ್ನೈನ​ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ನಿಧನ

Share :

Published February 28, 2024 at 1:27pm

    ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದ ಅಪರಾಧಿ ಸಂತನ್​​

    1991ರಲ್ಲಿ ನಡೆದ ರಾಜೀವ್​ ಗಾಂಧಿ ಹತ್ಯೆ ಕೇಸ್​ನಲ್ಲಿ ಅರೆಸ್ಟ್​

    ಎಲ್​ಟಿಟಿಇ ಸದಸ್ಯನಾಗಿ ಹತ್ಯೆಯ ಪಿತೂರಿಗೆ ಕಾರಣನಾಗಿದ್ದ ಸಂತನ್

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆಯ ಕೇಸ್​ನಲ್ಲಿ ಅಪರಾಧಿಯಾಗಿ ಬಿಡುಗಡೆಯಾದ ಸಂತನ್​ ನಿನ್ನೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆ 7:50ಕ್ಕೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

1991ರಲ್ಲಿ ನಡೆದ ರಾಜೀವ್​ ಗಾಂಧಿ ಹತ್ಯೆ ಕೇಸ್​ನಲ್ಲಿ ಬಂಧನವಾದ 7 ಅಪರಾಧಿಗಳಲ್ಲಿ ಸಂತನ್​ ಕೂಡ ಒಬ್ಬರು. ಇವರನ್ನು ಟಿ ಸತೇಂದ್ರರಾಜ ಎಂದು ಕರೆಯುತ್ತಿದ್ದರು. ಮೂಲತಃ ಶ್ರೀಲಂಕಾದ ಪ್ರಜೆಯಾಗಿರುವ ಇವರು ಅನಾರೋಗ್ಯದ ಕಾರಣ ಚೆನ್ನೈನಲ್ಲಿದ್ದರು. ಇಲ್ಲಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಬೆಳಗ್ಗೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಡೀನ್​ ಡಾ.ವಿ ಥೆರನಿರಾಜನ್​ ತಿಳಿಸಿದ್ದಾರೆ.

ಯಕೃತ್​​ ವೈಫಲ್ಯದಿಂದ ಸಾವು

ಸಂತನ್​ ಯಕೃತ್​​ ವೈಫಲ್ಯ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ನಿನ್ನೆ ಸಂಜೆ 4 ಗಂಟೆಗೆ ಹೃದಯ ಸ್ತಂಭನಕ್ಕೆ ಒಳಗಾದರು. ಬೆಳಗ್ಗೆ 7:30ಕ್ಕೆ ನಿಧನರಾದರು ಎಂದು ಡಾ.ವಿ ಥೆರನಿರಾಜನ್ ಹೇಳಿದ್ದಾರೆ.

ಸಂತನ್​ ಮಾಜಿ ಪ್ರಧಾನಿಯ ಹತ್ಯೆಯಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಬಂದವರಲ್ಲಿ ಇವರು ಒಬ್ಬರಾಗಿದ್ದರು. ಸಂತನ್​ ಜೊತೆಗೆ ಮುರುಗನ್​ ಮತ್ತು ಪೆರಿವಾಲನ್​ ಕೂಡ ಹೊರಬಂದಿದ್ದಾರೆ. 1999ರಲ್ಲಿ ಇವರಿಗೆ ಸುಪ್ರೀಂ ಕೋರ್ಟ್​ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ಅನುಭವಿಸಿದ ಸಂತನ್​ 2022ರಲ್ಲಿ ಜೈಲಿನಿಂದ ಹೊರಬಂದರು.

ಭಾರತೀಯ ನಿಯಮಾವಳಿ ಪ್ರಕಾರ ಸಂತಾನ್​ ವಿದೇಶಿ ಪ್ರಜೆಯಾಗಿದ್ದು, ಇವರನ್ನು ತಿರುಚ್ಚಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಆದರೆ ಶ್ರೀಲಂಕಾಗೆ ತೆರಳಲು ತಾತ್ಕಾಲಿಕ ಪ್ರಯಾಣ ದಾಖಲೆಯನ್ನು ಸರ್ಕಾರ ಮದ್ರಾಸ್​ ಹೈಕೋರ್ಟ್​​ಗೆ ತಿಳಿಸಿತ್ತು. ಆದರೆ ಅನಾರೋಗ್ಯದ ಕಾರಣ ಎಲ್​ಟಿಟಿಇಯ ಸದಸ್ಯರಾಗಿ ರಾಜೀವ್​ ಗಾಂಧಿ ಹತ್ಯೆಯ ಪಿತೂರಿಗೆ ಸಹಾಯ ಮಾಡಿದ ಸಂತನ್​ ನಿನ್ನೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜೀವ್​ ಗಾಂಧಿ ಹತ್ಯೆಯ ಅಪರಾಧಿ ಸಂತನ್ ಚೆನ್ನೈನ​ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ನಿಧನ

https://newsfirstlive.com/wp-content/uploads/2024/02/santhan.jpg

Load More