ನಾನು ನಟನಾಗಲು ಅವರಿಗೆ 10 ಸಾವಿರ ನೀಡಿದೆ, ಮೋಸ ಹೋದೆ; ರಾಜ್​ಕುಮಾರ್​

author-image
AS Harshith
Updated On
ನಾನು ನಟನಾಗಲು ಅವರಿಗೆ 10 ಸಾವಿರ ನೀಡಿದೆ, ಮೋಸ ಹೋದೆ; ರಾಜ್​ಕುಮಾರ್​
Advertisment
  • ನನ್ನ ತಾಯಿ ಸಾಲ ಮಾಡಿ ಕೊಟ್ಟ ಹಣ
  • ಆ ಘಟನೆ ಸಿನಿಮಾ ದೃಶ್ಯದಂತೆ ಕಣ್ಣು ಕಟ್ಟುತ್ತಿದೆ ಎಂದ ನಟ
  • 11.35 ಕೋಟಿ ರೂಪಾಯಿ ಬಾಚಿದ ‘ಮಿಸ್ಟರ್​ ಆ್ಯಂಡ್​​ ಮಿಸೆಸ್​​ ಮಹಿ’

ಸಿನಿಮಾ ಹುಚ್ಚು ಮೈಗತ್ತಿಸಿಕೊಂಡವರಿಗೆ ನಟನಾಗಬೇಕು ಎಂಬ ಮಹಾ ಕನಸಿರುತ್ತದೆ. ಅದರಂತೆ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಸಿಕ್ಕ ಸಿಕ್ಕ ಅವಕಾಶವನ್ನು ಕೈಬಿಡದೆ ದೊಡ್ಡ ಪರದೆಯ ಮೂಲಕ ಮಿಂಚಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಅದರಂತೆಯೇ ​ ನಟರೊಬ್ಬರು ತಮ್ಮ ಬಾಲ್ಯದ ಕನಸನ್ನು ಬಿಚ್ಚಿಟ್ಟಿದ್ದಲ್ಲದೆ, ನಟನಾಗಲು ಹೋಗಿ ಮೋಸ ಹೋದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಬಾಲಿವುಡ್​ ನಟ ರಾಜ್​ಕುಮಾರ್​ ರಾವ್​ ಮತ್ತು ಜಾನ್ವಿ ಕಪೂರ್​ ‘ಮಿಸ್ಟರ್​ ಆ್ಯಂಡ್​​ ಮಿಸೆಸ್​​ ಮಹಿ’ ಎಂಬ ಸಿನಿಮಾ ರಿಲೀಸ್​ ಆಗಿದೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆಂದೇ ಕಪಿಲ್​ ಶರ್ಮಾ ಶೋ ಈ ಜೋಡಿ ಬಂದಿದ್ದರು. ಕಾರ್ಯಕ್ರಮದ ವೇಳೆ ನಟ ರಾಜ್​ಕುಮಾರ್​ ರಾವ್ ತಾನು ಎದುರಿಸಿದ​ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

publive-image

10 ಸಾವಿರ ಕೊಟ್ರೆ ನಟನಾಗುತ್ತೀಯಾ!

ನಾನು ಚಿತ್ರರಂಗ ಬರಲು ಹೋರಾಡುತ್ತಿದ್ದೆ. ಆವಾಗ ಕಂಪನಿಯೊಂದು ನನ್ನನ್ನು ಸಂಪರ್ಕಿಸಿ 10 ಸಾವಿರ ರೂಪಾಯಿ ಕೊಟ್ಟರೆ ನಟನಾಗಿ ಪರಿಚಯಿಸುತ್ತೇವೆ ಎಂದು ಹೇಳಿತು. ನಾನು ಅವರಿಗೆ ಹಣವನ್ನು ನೀಡಿದೆ. ಆದರೆ ಮರುದಿನ ಆ ಕಂಪನಿ ಕಣ್ಮರೆಯಾಯಿತು. ನನಗೆ ಆ ಘಟನೆ ಸಿನಿಮಾ ದೃಶ್ಯದಂತೆ ಬರುತ್ತಿದೆ ಎಂದು ಹೇಳಿದ್ದಾರೆ.

ನನಗೆ ನಟಿಸುವ ಆಸೆ ಮಾತ್ರವಿತ್ತು

ನಾನು ಗುರುಗ್ರಾಮದಿಂದ ದೆಹಲಿಗೆ ಸೈಕಲ್​ ತುಳಿಯುತ್ತಿದ್ದೆ. ನಾನು ಪತ್ರಿಕೆಯಲ್ಲಿ ಜಾಹೀರಾತು ನೋಡುತ್ತಿದ್ದೆ. ಅದರಲ್ಲಿ ಖಾಸಗಿ ಚಾನೆಲ್​ವೊಂದು ಕಾರ್ಯಕ್ರಮ ಮಾಡುತ್ತಿದೆ ಎಂದು ಬರೆಯಲಾಗಿತ್ತು. ಅದಕ್ಕಾಗಿ ನಟರು ಬೇಕು ಎಂದು ಬರೆಯಲಾಗಿತ್ತು. ಆ ಸಮಯದಲ್ಲಿ ನನಗೆ ಟಿವಿ ಮತ್ತು ಸಿನಿಮಾ ನಡುವಿನ ವ್ಯತ್ಯಾಸ ಅರ್ಥವಾಗಿರಲಿಲ್ಲ. ನನಗೆ ನಟಿಸುವ ಆಸೆ ಮಾತ್ರವಿತ್ತು. ನಾನು ಕಂಪನಿಗೆ ಕರೆ ಮಾಡಿದಾಗ ಅವರು ನನ್ನನ್ನು ಭೇಟಿಯಾಗಲು ಹೇಳಿದರು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ: VIDEO: ಪಾಸ್ತಾಗೆ ಅಜ್ಜಿಯ ಚಿತಾಭಸ್ಮವನ್ನು ಸೇರಿಸಿ ತಿಂದ ಮಹಿಳೆ! ಆಮೇಲೆ ಏನಾಯ್ತು ಗೊತ್ತಾ?

ನನ್ನ ತಾಯಿ ಸಾಲ ಮಾಡಿ ಹಣ ಕೊಟ್ಟಿದ್ದರು

ನನ್ನ ಕನಸು ನನಸಾಗಿಸಲು ನನ್ನ ತಾಯಿ ಸಾಲ ಮಾಡಿದ್ದರು. ನಾನು ನನ್ನನ್ನ ಸಂಪರ್ಕಿಸಿದ ಕಚೇರಿಗೆ ಬಂದಾಗ ಭೇಟಿ ಮಾಡಿದ ವ್ಯಕ್ತಿಯ ಫೋಟೋವನ್ನು ಎಲ್ಲೆಡೆ ಅಂಟಿಸಲಾಗಿತ್ತು. ಬಳಿಕ ಅವರು 10 ಸಾವಿರ ನೀಡಬೇಕು ಪಾತ್ರವನ್ನು ನೀಡುತ್ತೇವೆ ಎಂದು ಹೇಳಿದ್ದರು. ನನಗೆ ಸಂತೋಷವಾಯಿತು. ದೊಡ್ಡ ಸಾಧನೆ ಮಾಡಿದಂತೆ ಅನಿಸಿತು. ನಾನು ಶಾರುಖ್​ ಖಾನ್​ ಅಭಿಮಾನಿ, ಅವರನ್ನು ಅನುಸರಿಸುತ್ತೇನೆ. ಟಿವಿಯಿಂದ ಚಿತ್ರರಂಗಕ್ಕೆ ಹೋಗಬೇಕು ಎಂದು ಯೋಚಿಸಿದ್ದೆ. ಆದರೆ 3 ದಿನಗಳ ಬಳಿಕ ಆ ಕಚೇರಿಗೆ ಬೀಗ ಹಾಕಿರೋದನ್ನು ನೋಡಿದೆ. ಅವರು ಅಲ್ಲಿಂದ ಕಣ್ಮರೆಯಾಗಿದ್ದಾರೆ ಎಂದು ಜನರು ಹೇಳಿದರು.

ಮಿಸ್ಟರ್​ ಆ್ಯಂಡ್​​ ಮಿಸೆಸ್​​ ಮಹಿ

ರಾಜ್​ಕುಮಾರ್​ ರಾವ್ ಮತ್ತು ಜಾನ್ವಿ ನಟನೆಯ ‘ಮಿಸ್ಟರ್​ ಆ್ಯಂಡ್​​ ಮಿಸೆಸ್​​ ಮಹಿ’ ಸಿನಿಮಾ 11.35 ಕೋಟಿ ರೂಪಾಯಿ ಗಳಿಸಿದೆ. ಇಬ್ಬರು ಇದರಲ್ಲಿ ಗಂಡ-ಹೆಂಡತಿ ಪಾತ್ರವನ್ನು ನಿರ್ವಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment