/newsfirstlive-kannada/media/post_attachments/wp-content/uploads/2025/04/rajnath-singh-and-modi2.jpg)
ಉಗ್ರರ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್, ಸೇನೆ ಮತ್ತು ಇತರ ಭದ್ರತಾ ಸಿಬ್ಬಂದಿ ಭಯೋತ್ಪಾದನೆಯನ್ನ ಬೇರು ಸಹಿತ ಕಿತ್ತುಹಾಕುವ ಸಲುವಾಗಿ ಶೋಧ ಕಾರ್ಯ ನಡೆಸುತ್ತಿವೆ. ವಿವಿಧ ಕಡೆಗಳಲ್ಲಿ ತನಿಖೆಯನ್ನ ಚರುಕುಗೊಳಿಸಿವೆ. NIA ಕೂಡ ವಿಚಾರಣೆ ಪ್ರಾರಂಭಿಸಿದೆ. ಈ ಮಧ್ಯೆ ರಕ್ಷಣಾ ಸಚಿವರು ಸೇನಾ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ‘ಭಾರತದಲ್ಲೇ ಇರಲು ಬಿಡಿ ಪ್ಲೀಸ್’.. ಪಾಕಿಸ್ತಾನಿ ಸೀಮಾ ಹೈದರ್ಗೆ ಗಡಿಪಾರು ಭೀತಿ!
ಭಾರತ-ಪಾಕಿಸ್ತಾನದ ನಡುವೆ ಯುದ್ಧ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಅನಿಲ್ ಚೌಹಾಣ್ ಜೊತೆ ರಾಜನಾಥ್ ಸಿಂಗ್, ತಮ್ಮ ದೆಹಲಿ ನಿವಾಸದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಅನಿಲ್ ಚೌಹಾಣ್ ಜೊತೆ ಮೂರು ಸೇನೆಗಳ ಸಾಮರ್ಥ್ಯದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನದ ವಿರುದ್ಧ ಸೇನೆ ಯಾವ ರೀತಿ ಸಿದ್ಧವಾಗಿದೆ ಅನ್ನೋ ಸಂಪೂರ್ಣ ಮಾಹಿತಿಯನ್ನ ಪಡೆದಿದ್ದಾರಂತೆ.
ಸೇನೆಗೆ ಕೇಂದ್ರ ಸರ್ಕಾರದಿಂದ ಯಾವ ಸಹಾಯ ಬೇಕು ಕೇಳಿ ನಾವು ಮಾಡಲು ಸಿದ್ಧರಿದ್ದೇವೆ ಅನ್ನೋ ಧೈರ್ಯ ನೀಡಿದ್ದಾರಂತೆ. ಪಾಕ್ ಸೇನಾ ಮುಖ್ಯಸ್ಥ ಪಾಕಿಸ್ತಾನವನ್ನ ತೊರೆದಿರೋ ಬಗ್ಗೆನೂ ಚರ್ಚೆ ನಡೆದಿದ್ದು, ಇದರ ನಡುವೆ ಕುತಂತ್ರಿ ಚೀನಾ ಬೆಂಬಲ ಘೋಷಿಸಿದ ಬಗ್ಗೆ ಚರ್ಚೆ ಆಗಿದೆ ಎನ್ನಲಾಗ್ತಿದೆ.
ಹೌದು, ಪಾಕಿಸ್ತಾನಕ್ಕೆ ಭಾರತ ಕೊಟ್ಟ ಶಾಕ್ ಟ್ರೀಟ್ಮೆಂಟ್ ವರ್ಕ್ ಆಗೋದಕ್ಕೆ ಸ್ಟಾರ್ಟ್ ಆಗಿ ಕೆಲ ದಿನಗಳೇ ಕಳೆದಿವೆ. ಚಡ್ಡಿ ಒಳಗೆ ಉಳ ಬಿಟ್ಕೊಂಡಂತೆ ಒದ್ದಾಡ್ತಿರೋ ಪಾಕಿಸ್ತಾನಕ್ಕೆ ಯಾರು ಭಿಕ್ಷೆ ಹಾಕ್ತಾರೋ ಅಂತಾ ಸಿಕ್ಕ ಸಿಕ್ಕ ದೇಶಗಳತ್ರ ಹೋಗಿ ತಟ್ಟೆ ಹಿಡಿದು ಬೇಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆ ಭಿಕ್ಷೆ ಬೇಡಿ ನಿಂತ ಪಾಕ್ಗೆ ಚೀನಾ ಸಾಥ್ ನೀಡ್ತೀನಿ ಅಂತಾ ಘೋಷಣೆ ಮಾಡಿದೆ. ಹೀಗೆ ಆಗುತ್ತೆ ಅಂತಾ ತಿಳಿದು ರಾಜನಾಥ್ ಸಿಂಗ್ ಸಭೆ ನಡೆಸಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ಸಿಡಿಎಸ್ ಅನಿಲ್ ಚೌಹಾಣ್ ಜೊತೆ ಮಹತ್ವದ ಚರ್ಚೆ ನಡೆಸಿದ ರಾಜನಾಥ್ ಸಿಂಗ್, ಬಳಿಕ ಪ್ರಧಾನಿ ನರೇಂದ್ರ ಮೋದಿರನ್ನ ಭೇಟಿಯಾದ್ರು. ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಬಂದ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಜೊತೆ ನಡೆದ ಚರ್ಚೆಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ರು.
ಏಷ್ಯಾ ವಾಲಿಬಾಲ್ ಚಾಂಪಿಯನ್ ಶಿಪ್‌ನಿಂದ ಭಾರತ ಹೊರಕ್ಕೆ
ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಧ್ಯ ಏಷ್ಯಾದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ಭಾಗವಹಿಸುವುದನ್ನ ರದ್ದುಗೊಳಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ಘಟನೆಯ ನಂತರ ತಮ್ಮ ಸರ್ಕಾರ ಪಂದ್ಯಾವಳಿಗಾಗಿ ನೀಡಲಾದ ಎನ್‌ಒಸಿಯನ್ನು ರದ್ದುಗೊಳಿಸಿದೆ ಎಂದು ಭಾರತೀಯ ವಾಲಿಬಾಲ್ ಅಧಿಕಾರಿಗಳು ಪ್ರಾದೇಶಿಕ ಸಂಸ್ಥೆಗೆ ತಿಳಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ. ಒಟ್ನಲ್ಲಿ ಭಾರತವನ್ನ ಕೆಣಕಿರೋ ಪಾಕ್ ಒಂದರ ನಂತರ ಒಂದರಂತೆ ಪಟ್ಟು ತಿಂತಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ