ಫೆ.14ಕ್ಕೆ ರಾಜು ಜೇಮ್ಸ್ ಬಾಂಡ್ ಎಂಟ್ರಿ.. ಪ್ರೀ ರಿಲೀಸ್ ಇವೆಂಟ್‌ಗೆ ರಮ್ಯಾ, ಡಾ.ಜಿ ಪರಮೇಶ್ವರ್ ಸಾಥ್‌!

author-image
admin
Updated On
ಫೆ.14ಕ್ಕೆ ರಾಜು ಜೇಮ್ಸ್ ಬಾಂಡ್ ಎಂಟ್ರಿ.. ಪ್ರೀ ರಿಲೀಸ್ ಇವೆಂಟ್‌ಗೆ ರಮ್ಯಾ, ಡಾ.ಜಿ ಪರಮೇಶ್ವರ್ ಸಾಥ್‌!
Advertisment
  • ‘ಫಸ್ಟ್ Rank ರಾಜು’ ಖ್ಯಾತಿಯ ಗುರುನಂದನ್, ಮೃದುಲ ಜೋಡಿ
  • ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್ ಅಭಿನಯ
  • ನಾಳೆಯೇ ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರೀ ರಿಲೀಸ್ ಇವೆಂಟ್‌!

ಬೆಂಗಳೂರು: ಗುರುನಂದನ್ ಅಭಿನಯದ ಬಹು ನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಬಿಡುಗಡೆಗೆ ಸಜ್ಜಾಗಿದೆ. ನಗುವೇ ಪ್ರಧಾನವಾಗಿರುವ ಈ ಚಿತ್ರ ಇದೇ ಫೆಬ್ರವರಿ 14 ರಂದು ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

ರಾಜು ಜೇಮ್ಸ್ ಬಾಂಡ್ ಬಿಡುಗಡೆಯ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇದೇ ಫೆಬ್ರವರಿ 11ರಂದು ಅಂದ್ರೆ ನಾಳೆಯೇ ನಡೆಯಲಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಸ್ಯಾಂಡಲ್‌ವುಡ್ ನಟಿ ರಮ್ಯಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

publive-image

ರಾಜು ಜೇಮ್ಸ್ ಬಾಂಡ್ ಚಿತ್ರವನ್ನು ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು (ಕೆನಡಾ) ನಿರ್ಮಿಸಿದ್ದಾರೆ. ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ‘ಫಸ್ಟ್ Rank ರಾಜು’ ಖ್ಯಾತಿಯ ಗುರುನಂದನ್ ನಾಯಕನಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ತ್ರಿವಿಕ್ರಮ್ ಜೊತೆ ಸಿನಿಮಾ ಆಫರ್​.. ಈ ಬಗ್ಗೆ ಮೋಕ್ಷಿತಾ ಪೈ ಏನಂದ್ರು? 

ಗುರುನಂದನ್ ಈ ಚಿತ್ರದ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಮೃದುಲ ಅಭಿನಯಿಸಿದ್ದಾರೆ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಅತ್ಯಂತ ನಿರೀಕ್ಷಿತ ಸಿನಿಮಾ ರಾಜು ಜೇಮ್ಸ್ ಬಾಂಡ್ ಚಿತ್ರದ ಪ್ರೀ ರಿಲೀಸ್ ಇವೆಂಟ್‌ಗೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ನಟಿ ರಮ್ಯಾ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಪ್ರೇಮಿಗಳ ದಿನ ಫೆಬ್ರವರಿ 14 ರಂದು ರಾಜು ಜೇಮ್ಸ್ ಬಾಂಡ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment