/newsfirstlive-kannada/media/post_attachments/wp-content/uploads/2025/06/cm-siddu.jpg)
ಚಿಕ್ಕೋಡಿ: ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಗರಂ ಆಗಿದ್ದಾರೆ.
ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ
ಹೌದು, ಶಾಸಕ ರಾಜು ಕಾಗೆ ಅವರೇ ತಮ್ಮದೇ ಸರ್ಕಾರದ ಲೋಪ ದೋಷ ಎತ್ತಿ ಹಿಡಿದಿದ್ದಾರೆ. ಎರಡು ವರ್ಷವಾದರೂ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತಾಡಿದ ಅವರು, ಸರ್ಕಾರದಿಂದ ಅನುದಾನ ಬಂದ್ರು ವರ್ಕ್ ಆರ್ಡರ್ ಬಂದಿಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ನನಗೆ ಅಸಮಾಧಾನ ಆಗಿದೆ. ನನ್ನ ಮನಸ್ಸಿಗೆ ನೋವಾಗಿದೆ. ನಾನು ರಾಜೀನಾಮೆ ಕೊಡ್ತೀನಿ. 2 ದಿನದಲ್ಲಿ ಸಿಎಂಗೆ ರಾಜೀನಾಮೆ ಕೊಟ್ರು ಆಶ್ಚರ್ಯ ಇಲ್ಲ ಅಂತ ಚಿಕ್ಕೋಡಿಯಲ್ಲಿ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ