ಹನಿಮೂನ್‌ಗೆ ಒನ್ ವೇ ಟಿಕೆಟ್‌; ಮೇಘಾಲಯದಲ್ಲಿ ‘ಬಾ ನಲ್ಲ ಮಧುಚಂದ್ರಕೆ’ ಹೈಡ್ರಾಮಾ ಹೇಗಿತ್ತು?

author-image
admin
Updated On
ಮಂಗಳಸೂತ್ರ ಬಿಚ್ಚಿಟ್ಟಿದ್ದ ಸೋನಮ್‌.. ಮೇಘಾಲಯ ಹನಿಮೂನ್ ಕೇಸ್‌ಗೆ ಹೊಸ ಟ್ವಿಸ್ಟ್‌!
Advertisment
  • ರಾಜು ರಘುವಂಶಿಯೇ ನನ್ನನ್ನು ಫಾರೆಸ್ಟ್‌ಗೆ ಕರೆದುಕೊಂಡು ಹೋದರು
  • ಮಗ, ಸೊಸೆಯನ್ನ ಹನಿಮೂನ್‌ಗೆ ಕಳಿಸಲು ಮನೆಯವರಿಗೆ ಇಷ್ಟ ಇರಲಿಲ್ಲ
  • ಮಧ್ಯಪ್ರದೇಶದಿಂದ ನಾಲ್ಕು ಮಂದಿ ಹಂತಕರನ್ನ ಕರೆಸಿ ಕಥೆ ಮುಗಿಸಿದ್ರಾ?

ಕನ್ನಡದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿರೋರಿಗೆ ಕ್ಲೈಮ್ಯಾಕ್ಸ್ ಏನು ಅನ್ನೋದು ಗೊತ್ತಿರುತ್ತೆ. ವಿವೇಕ್ ಪಾತ್ರದಲ್ಲಿ ಅಭಿನಯಿಸಿದ್ದ ಕೆ. ಶಿವರಾಮ್ ಹೀರೋ ಅಲ್ಲ ವಿಲನ್ ಆಗಿದ್ದರು. ವಿವೇಕ್, ಪ್ರೀತಿಯನ್ನ ನಂಬಿಸಿ ಶಿಮ್ಲಾಗೆ ಕರೆದುಕೊಂಡು ಹೋಗಿರ್ತಾನೆ. ಪ್ರೀತಿಯನ್ನ ಎತ್ತರವಾದ ಜಾಗಕ್ಕೆ ಕರೆದುಕೊಂಡು ಹೋಗಿ ತಳ್ಳಿ ಸಾಯಿಸುತ್ತಾನೆ.

ಬಾ ನಲ್ಲೆ ಮಧುಚಂದ್ರಕೆ ಸಿನಿಮಾದಲ್ಲಿ ಶಿವರಾಮ್ ಅವರು ಬೇಕಾದಷ್ಟು ನಾಟಕ ಮಾಡಿದ್ರು. ಶಿಮ್ಲಾಗೆ ಹೋಗುವಾಗ 2 ಟಿಕೆಟ್ ರಿಸರ್ವ್ ಮಾಡಿಸಿದ್ದ ಶಿವರಾಮ್, ವಾಪಸ್ ಬರೋವಾಗ ಒಂದೇ ಟಿಕೆಟ್ ಬುಕ್ ಮಾಡಿದ್ದರು. ಇದೊಂದು ತಪ್ಪು ಬಾ ನಲ್ಲೆ ಮಧುಚಂದ್ರಕೆ ಸಿನಿಮಾದಲ್ಲಿ ಶಿವರಾಮ್ ಪೊಲೀಸರ ಕೈಗೆ ಸಿಕ್ಕಿ ಬೀಳೋದಕ್ಕೆ ಕಾರಣವಾಗಿದೆ.

publive-image

ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲೇ ಮೇಘಾಲಯದಲ್ಲಿ ಬಾ ನಲ್ಲ ಮಧುಚಂದ್ರಕ್ಕೆ ಕ್ರೈಂ ಸ್ಟೋರಿ ಬೆಳಕಿಗೆ ಬಂದಿದೆ. ಇಲ್ಲಿ ವಿಲನ್ ಹೀರೋ ಅಲ್ಲ ಹೀರೋಯಿನ್. ರಾಜು ರಘುವಂಶಿ ಅನ್ನು ಮದುವೆಯಾಗಿದ್ದ ಸೋನಮ್‌ ತಮ್ಮ ಹನಿಮೂನ್‌ಗೆ ಒನ್ ವೇ ಟಿಕೆಟ್ ಬುಕ್ ಮಾಡಿದ್ದಳು. ಗಂಡನ ಕೊ*ಲೆಗೆ ಮೊದಲೇ ಪ್ಲಾನ್ ಮಾಡಿದ್ದರಿಂದ ಮೇಘಾಲಯದಿಂದ ವಾಪಸ್ ಬರುವ ಟಿಕೆಟ್ ಬುಕ್ ಮಾಡಿರಲೇ ಇಲ್ಲ.

ಹನಿಮೂನ್‌ಗೆ ಬಂದಿದ್ದ ರಾಜು ರಘುವಂಶಿ ಶವ ಪತ್ತೆಯಾದ ಮೇಲೆ ಮೇಘಾಲಯ ಪೊಲೀಸರಿಗೆ ಹೆಂಡತಿ ಸೋನಮ್‌ ಮೇಲೆ ಅನುಮಾನ ಇತ್ತು. ಸೋನಮ್ ಕೂಡ ಪೊಲೀಸರು, ರಾಜು ರಘುವಂಶಿ ಕುಟುಂಬದ ದಿಕ್ಕು ತಪ್ಪಿಸಲು ಸಾಕಷ್ಟು ಡ್ರಾಮಾ ಮಾಡಿದ್ದಾರೆ.

publive-image

ಪತಿ ರಾಜ ರಘುವಂಶಿ ಅವರನ್ನ ನಂಬಿಸಲು ಸೋನಮ್‌, ಗಂಡನ ತಾಯಿ ಉಮಾ ಜೊತೆ ಹೆಚ್ಚು ಮಾತುಕತೆ ನಡೆಸಿದ್ದಾರೆ. ಅತ್ತೆ ಜೊತೆ ಆತ್ಮೀಯವಾಗಿ ಸೋನಮ್‌ ಮಾತನಾಡುತ್ತಾ ಇದ್ದಿದ್ದು, ರಾಜು ರಘುವಂಶಿಯೇ ನನ್ನನ್ನು ಫಾರೆಸ್ಟ್‌ಗೆ ಕರೆದುಕೊಂಡು ಹೋದರು ಎಂದು ಅತ್ತೆಗೆ ಹೇಳಿದ್ದಾಳೆ. ಆದರೆ ಇದೆಲ್ಲಾ ನಾಟಕ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ಬಾ ನಲ್ಲ ಮಧುಚಂದ್ರಕೆ.. ಮೇಘಾಲಯ ಹನಿಮೂನ್ ಹ*ತ್ಯೆ ಕೇಸ್‌ನ ಇಂಚಿಂಚೂ ಮಾಹಿತಿ ಬಹಿರಂಗ 

‘ಹನಿಮೂನ್ ಹಂತಕಿ’ ಹೆಜ್ಜೆ!
ಮೇ 10: ರಾಜಾ ರಘುವಂಶಿ-ಸೋನಮ್ ಮದುವೆ
ಮೇ 22: ಮೇಘಾಲಯಕ್ಕೆ ಹನಿಮೂನ್ ಪ್ರವಾಸ (ಸಿಂಗಲ್ ರಿಟರ್ನ್ ಟಿಕೆಟ್​​ ಬುಕ್ಕಿಂಗ್)
ಜೂನ್ 2: ರಾಜಾ ರಘುವಂಶಿ ಮೃತದೇಹ ಪತ್ತೆ
ಜೂನ್ 9: ಉತ್ತರ ಪ್ರದೇಶದಲ್ಲಿ ಸೋನಮ್ ಅರೆಸ್ಟ್
ಜೂನ್ 9: ಮಧ್ಯಪ್ರದೇಶದಲ್ಲಿ ಸುಪಾರಿ ಕಿಲ್ಲರ್ಸ್ ಸೆರೆ

ರಾಜು ರಘುವಂಶಿ ಕುಟುಂಬಕ್ಕೆ ಮಗ, ಸೊಸೆಯನ್ನ ಹನಿಮೂನ್‌ಗೆ ಕಳಿಸಲು ಇಷ್ಟ ಇರಲಿಲ್ಲ. ಆದರೆ ಸೋನಮ್ ಈಗಾಗಲೇ ಮೇಘಾಲಯಕ್ಕೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾಳೆ ಎಂದು ರಾಜು ರಘುವಂಶಿ ಹೇಳಿದ್ದಾನೆ. ಇದರಿಂದ ರಾಜು ರಘುವಂಶಿ- ಸೋನಮ್‌ರನ್ನು ಹನಿಮೂನ್‌ಗೆ ಕಳಿಸಿದ್ದಾರೆ.

ಮೇ 22ರಂದು ಮೇಘಾಲಯದಲ್ಲಿ ಹೋಮ್ ಸ್ಟೇ ಹೊರಗಡೆ ಚಾಟಿಂಗ್ ಮಾಡುತ್ತಿದ್ದ ಸೋನಮ್ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಡ ರಾಜು ರಘುವಂಶಿ ಬೈಕ್ ಮೇಲೆ ಕುಳಿತಿದ್ದರೂ ಪತ್ನಿ ಸೋನಮ್ ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದು, ಲೋಕೇಷನ್ ಕೂಡ ಶೇರ್ ಮಾಡಿರುವ ಶಂಕೆ ಇದೆ.

publive-image

ಸೋನಮ್‌ ಫೋನ್ ಟ್ರ್ಯಾಕ್ ಮಾಡಿದಾಗ ಪೊಲೀಸರಿಗೆ ಸೋನಮ್ ಗಂಟೆಗಟ್ಟಲೆ ರಾಜು ಕುಶ್ವಾಹಾ ಜೊತೆ ಮಾತನಾಡಿರೋದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಿಂದ ನಾಲ್ಕು ಮಂದಿ ಹಂತಕರನ್ನ ಮೇಘಾಲಯಕ್ಕೆ ಕರೆಸಿ ನಂತರ ಎಸ್ಕೇಪ್ ಆಗಿದ್ದಾರೆ. ನಾಪತ್ತೆಯಾಗಿದ್ದ ಪತ್ನಿಯೇ‌ ಈ ಘಟನೆಯ ಮಾಸ್ಟರ್ ಮೈಂಡ್ ಆಗಿದ್ದು ಕೊನೆಗೆ ಪ್ಲಾನ್ ಎಲ್ಲಾ ಫೇಲ್ ಆದ ಮೇಲೆ ಪೊಲೀಸರಿಗೆ ಶರಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment