ರಾಜ್ಯದ 4 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ದಿನಾಂಕ​ ಘೋಷಣೆ; ಬಿಜೆಪಿ ಎಷ್ಟು ಗೆಲ್ಲಬಹುದು?

author-image
Bheemappa
Updated On
ರಾಜ್ಯದ 4 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ದಿನಾಂಕ​ ಘೋಷಣೆ; ಬಿಜೆಪಿ ಎಷ್ಟು ಗೆಲ್ಲಬಹುದು?
Advertisment
  • ಯಾವ ದಿನಾಂಕದಿಂದ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದು?
  • ಫೆಬ್ರವರಿ 27 ಸಂಜೆ 5 ಗಂಟೆ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ
  • ರಾಜ್ಯಸಭಾ ಸ್ಥಾನಗಳಿಗೆ ಮತದಾನ ಮಾಡುವ ದಿನಾಂಕ ಯಾವುದು..?

ನವದೆಹಲಿ: ಫೆಬ್ರವರಿ 27ರಂದು ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳು ಸೇರಿದಂತೆ 15 ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಘೋಷಣೆ

ರಾಜ್ಯದ ಹಾಲಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್​ನ ನಾಸೀರ್ ಹುಸೇನ್, ಎಲ್‌ ಹನುಮಂತಯ್ಯ, ಜಿ.ಸಿ ಚಂದ್ರಶೇಖರ್ ಅವರ ಅವಧಿ ಇದೇ ಏಪ್ರಿಲ್​ನಲ್ಲಿ ಪೂರ್ಣಗೊಳ್ಳಲಿದೆ. ಹೀಗಾಗಿ ಕರ್ನಾಟಕದಿಂದ 4 ರಾಜ್ಯಸಭಾ ಸ್ಥಾನಗಳು ಸೇರಿದಂತೆ ದೇಶದ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ಆಯೋಗ ಎಲೆಕ್ಷನ್ ಘೋಷಣೆ ಮಾಡಿದೆ ಎಂದು ತಿಳಿದು ಬಂದಿದೆ.

publive-image

ಇನ್ನು ಫೆಬ್ರವರಿ 8ರಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು ಫೆಬ್ರವರಿ 15ರಂದು ಕೊನೆ ದಿನವಾಗಿದೆ. ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕ ಫೆ.27 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತದಾನ ಮುಗಿದ ಬಳಿಕ ಸಂಜೆ 5 ಗಂಟೆ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ಅದೇ ದಿನ ಮತ ಎಣಿಕೆ ಮುಗಿದ ಮೇಲೆ ಚುನಾವಣೆ ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯಸಭಾ ಸದಸ್ಯರ ಅವಧಿ 6 ವರ್ಷಗಳಾಗಿದ್ದು ವಿವಿಧ ರಾಜ್ಯಗಳಲ್ಲಿ ಕೇಂದ್ರ ಸಚಿವರ ರಾಜ್ಯಸಭಾ ಸ್ಥಾನದ ಅವಧಿ ಕೂಡ ಪೂರ್ಣವಾಗಲಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೇಂದ್ರ ಸಚಿವ ಅಶ್ವಿನ್ ವೈಷ್ಣವ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಮನಸುಖ್ ಮಾಂಡವೀಯಾ ಅವರ ಅವಧಿ ಪೂರ್ಣಗೊಂಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನಾಯಾಸವಾಗಿ 3 ರಾಜ್ಯಸಭಾ ಸ್ಥಾನ ಗೆಲ್ಲಬಹುದು. ರಾಜ್ಯದಲ್ಲಿ 65 ಶಾಸಕರನ್ನು ಹೊಂದಿದ ಬಿಜೆಪಿ 1 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಒಂದು ಸ್ಥಾನ ಗೆಲ್ಲಲು 45 ಶಾಸಕರ ಬೆಂಬಲ ಅಗತ್ಯವಿದೆ. 45 ಶಾಸಕರ ಮೊದಲ ಪ್ರಾಶಸ್ತ್ಯದ ಮತ ಪಡೆದರೆ, ಬಿಜೆಪಿಯಿಂದ ಓರ್ವ ಸದಸ್ಯ ಆಯ್ಕೆಯಾಗುವುದು ಖಚಿತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment