newsfirstkannada.com

ರೋಚಕಘಟ್ಟ ತಲುಪಿದ ರಾಜ್ಯಸಭೆ ಎಲೆಕ್ಷನ್; ಮೂರು ಪಕ್ಷಗಳಿಗೂ ಅಡ್ಡ ಮತದಾನದ ಆತಂಕ..

Share :

Published February 26, 2024 at 7:37am

    ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್​ ಗೇಮ್​​ ಚೇಂಜ್​

    ರೆಸಾರ್ಟ್​​ ಪಾಲಿಟಿಕ್ಸ್​​ ಮೊರೆ ಹೋಗಲು ಮುಂದಾದ ಕಾಂಗ್ರೆಸ್

    ಕೊನೆ ಕ್ಷಣದಲ್ಲಿ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ

ರಾಜ್ಯಸಭೆ ಚುನಾವಣೆಗೆ ಇವತ್ತೊಂದೆ ದಿನ ಬಾಕಿ. ಕಾಂಗ್ರೆಸ್​ ಪಾಲಿಗೆ ಪ್ರತಿಷ್ಠೆ ಕಣವಾಗಿದ್ರೆ, ದೋಸ್ತಿ ಸಾಮರ್ಥ್ಯ ಸಾಬೀತಿಗೆ ಕಮಲ-ದಳಕ್ಕೂ ಸವಾಲಾಗಿದೆ.. ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್​ ಗೇಮ್​​ ಚೇಂಜ್​ ಆಗಿದ್ದು, ರಾಜಕೀಯ ಮೇಲಾಟ ಶುರುವಾಗಿದೆ.

ಮೇಲ್ಮನೆ ಗೆಲುವಿಗಾಗಿ ರಾಜಕೀಯ ಮೇಲಾಟ ಶುರುವಾಗಿದೆ. 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್​​ ರಣತಂತ್ರಕ್ಕೆ ಇಳಿದಿದೆ. ಇತ್ತ, ಕೈಪಡೆಗೆ ಇಕ್ಕಟ್ಟಿಗೆ ತಳ್ಳಲು ದೋಸ್ತಿಗಳು ಸಂಪರ್ಕ ಕ್ರಾಂತಿಗೆ ಚಾಲನೆ ಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್​ನ ಜೋಡೆತ್ತುಗಳು, ರೆಸಾರ್ಟ್​​ ಪಾಲಿಟಿಕ್ಸ್​​ ಮೊರೆ ಹೋಗಲು ಮುಂದಾಗಿದ್ದಾರೆ.

ಮೇಲ್ಮನೆಯ ಗೆಲುವಿಗಾಗಿ ಮೂರು ಪಕ್ಷಗಳ ಮೇಲಾಟ!

ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಕೈಪಡೆ ಸುಸ್ಥಿತಿಯಲ್ಲಿದ್ರೂ ಸಹ ಕೊನೆ ಕ್ಷಣದಲ್ಲಾಗುವ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ. 3 ಪಕ್ಷಗಳಲ್ಲೂ ಅಡ್ಡ ಮತದಾನದ ಆತಂಕದ ಕಾರ್ಮೋಡ ಕವಿದಿದ್ದು, ಶಾಸಕರ ಮೇಲೆ ಸಂಶಯದ ಕಣ್ಣುಗಳು ನೆಟ್ಟಿವೆ. ಅದೇ ರೀತಿ ಮತದಾನಕ್ಕೆ ಗೈರಾಗುವ ಅಥವಾ ಗೈರು ಮಾಡಿಸುವ ಹೊಸ ಲೆಕ್ಕಾಚಾರವೂ ಶುರುವಾಗಿದೆ.

ಬದಲಾದ ನಂಬರ್ ಗೇಮ್

  • ವಿಧಾನಸಭೆಯ 224 ಸದಸ್ಯರಿಗೂ ಮತದಾನದ ಹಕ್ಕಿದೆ
  • ರಾಜಾ ವೆಂಕಟ್ಟಪ್ಪ ನಾಯಕ ನಿಧನದಿಂದ ತಗ್ಗಿದ ಕೈ ಬಲ
  • ಗೆಲುವು ಸಾಧಿಸಲು ಪ್ರತಿ ಅಭ್ಯರ್ಥಿಗೆ 45 ಮತಗಳ ಅಗತ್ಯ
  • ಕಾಂಗ್ರೆಸ್‌ನ ಮೂರು ಅಭ್ಯರ್ಥಿಗಳು ಗೆಲ್ಲಲು 135 ಮತ
  • ಸದ್ಯ 134 ಶಾಸಕರಿದ್ದು ಹೆಚ್ಚುವರಿ ಮತಗಳ ಅಗತ್ಯ ಇದೆ
  • ಗೌರಿಬಿದನೂರು ಕ್ಷೇತ್ರ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ
  • ಮೇಲುಕೋಟೆ ಕೈ ಬೆಂಬಲಿತ ಶಾಸಕ ದರ್ಶನ್ ಪುಟ್ಟಣ್ಣಯ್ಯ
  • ಹರಪನಹಳ್ಳಿಯ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ
  • ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ ನೆಚ್ಚಿಕೊಂಡ ಕೈ

ಇದೇ ವೇಳೆ ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕಿಳಿದಿರುವ ಶಾಸಕ ಕುಪೇಂದ್ರ ರೆಡ್ಡಿ ಕೂಡ ಈ ಶಾಸಕರ ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ಕೆಲವು ಶಾಸಕರಿಗೂ ಸಹಕಾರ ಕೋರಿದ್ದಾರೆ. ಬಿಜೆಪಿಯಿಂದ ದೊರೆಯಬಹುದಾದ ಹೆಚ್ಚುವರಿ 20 ಮತದ ಜತೆಗೆ ಇನ್ನೂ 7 ಮತಗಳಿಗೆ ಕುಪೇಂದ್ರ ರೆಡ್ಡಿ ಸಾಕಷ್ಟು ಬೆವರು ಹರಿಸಿದ್ದಾರೆ. ದೋಸ್ತಿಗಳು ಆತ್ಮಸಾಕ್ಷಿ ಮತದ ಅಸ್ತ್ರ ಪ್ರಯೋಗಿಸಿದ್ದು, ಕಾಂಗ್ರೆಸ್​​ ಆತಂಕ ಹೆಚ್ಚಿಸಿದೆ.

ಯಾವ ಶಾಸಕರ ನಡೆ? ಯಾರತ್ತ ಎಂಬ ಕುತೂಹಲ?

ಬಿಜೆಪಿ ಶಾಸಕ ಎಸ್​​.ಟಿ ಸೋಮೇಶಖರ್​​​, ಶಿವರಾಂ ಹೆಬ್ಬಾರ್​​​ ನಡೆ ಕುತೂಹಲಕ್ಕೆ ಕಾರಣ ಆಗಿದೆ. ಇತ್ತ, ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಆಡ್ತಿರುವ ಒಗಟು ಒಗಟಾಗಿನ ಮಾತು ದಳಕ್ಕೆ ಗುಮಾನಿ ಇದೆ. ಇನ್ನು, ಕಾಂಗ್ರೆಸ್​​​ಗೆ 2-3 ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯ ಆತಂಕ ಕಾಡ್ತಿದೆ. ಈ ಎಲ್ಲ ಆತಂಕಗಳ ನಡುವೆ ವಿಧಾನ ಮಂಡಲ ಅಧಿವೇಶನ ಬುಧವಾರಕ್ಕೂ ವಿಸ್ತರಣೆಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಚಕಘಟ್ಟ ತಲುಪಿದ ರಾಜ್ಯಸಭೆ ಎಲೆಕ್ಷನ್; ಮೂರು ಪಕ್ಷಗಳಿಗೂ ಅಡ್ಡ ಮತದಾನದ ಆತಂಕ..

https://newsfirstlive.com/wp-content/uploads/2024/02/SIDDU_HDK.jpg

Load More