newsfirstkannada.com

‘ಅಭಿವೃದ್ಧಿಗೆ ನನ್ನ ಮತ’ ಎಂದ ಸೋಮಶೇಖರ್; ರಾಜ್ಯಸಭಾ ಎಲೆಕ್ಷನ್​​ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಚೆಕ್​ಮೇಟ್ ಇಟ್ರಾ..?

Share :

Published February 27, 2024 at 11:32am

  ಇಂದು ರಾಜ್ಯಸಭಾ ಚುನಾವಣೆಯ ಮತದಾನ

  ಶಾಸಕ ಎಸ್. ​ಟಿ. ಸೋಮಶೇಖರ್ ಅಚ್ಚರಿಯ ಹೇಳಿಕೆ

  ನನಗೆ ಯಾರು ಪ್ರಾಮಿಸ್ ಮಾಡ್ತಾರೆ ಅವರಿಗೆ ಮತಕೊಡ್ತೀನಿ

ಬೆಂಗಳೂರು: ಇಂದು ರಾಜ್ಯಸಭಾ ಚುನಾವಣ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಬಿಜೆಪಿ ಯಶವಂತಪುರ ಶಾಸಕ ಎಸ್. ​ಟಿ. ಸೋಮಶೇಖರ್ ಮಾತನಾಡಿದ್ದು, ಅವರು ನೀಡಿದ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ಎಸ್ ಟಿ ಸೋಮಶೇಖರ್ ಮಾತನಾಡುತ್ತಾ ‘ಅನುದಾನ ನೀಡುವಂತವರಿಗೆ ಆತ್ಮಸಾಕ್ಷಿಯಿಂದ ಮತ ಹಾಕ್ತೀನಿ. 11 ವರ್ಷದಿಂದ ಎಲ್ಲರಿಗೂ ಹಾಕಿದ್ದೀನಿ. ರಾಜ್ಯಸಭೆಗೆ ಆಯ್ಕೆ ಆದವರು ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ನೇರ ನೇರ ಹೇಳ್ತಿನಿ ಆತ್ಮಸಾಕ್ಷಿ ಮತ ಹಾಕ್ತೀನಿ’ ಎಂದು ಹೇಳಿದ್ದಾರೆ.

‘ಕಳೆದ ಸಾರಿ ನಿರ್ಮಲಾ ಸೀತಾರಾಮನ್ ಗೆ ಹಾಕಿದ್ದೆ. ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಅಪಾಯಿಟ್ಮೆಂಟ್ ಕೊಡಲೇ ಇಲ್ಲ. ನನಗೆ ಯಾರು ಪ್ರಾಮಿಸ್ ಮಾಡ್ತಾರೆ ಅವರಿಗೆ ಮತಕೊಡ್ತೀನಿ. ನೆಪ ಹೇಳ್ತಿಲ್ಲಾ, ಐದಾರು ಸರಿ ವೋಟ್ ಹೇಳಿದಾಗೆ ಹಾಕಿದ್ದೀನಿ. ವೋಟ್ ಹಾಕಿಸೋ ಮೊದಲು ಪ್ರಾಮಿಸ್ ಮಾಡ್ತಾರೆ. 5 ಕೋಟಿ ಅನುದಾನ ಬರುತ್ತೆ ನಮಗೆ ಕೊಡ್ತಾರಾ?’ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಬಳಿಕ ಮಾತು ಮುಂದುವರಿಸಿದ ಅವರು, ’ಆತ್ಮಸಾಕ್ಷಿಯಾಗಿ ಅಲ್ಲಿ ಹೋದಂತ ಸಂದರ್ಭದಲ್ಲಿ ಹಾಕ್ತೀನಿ. ನನ್ನ ಕ್ಷೇತ್ರ ಅಭಿವೃದ್ಧಿ ಆಗಿಲ್ಲಾ ಅಂತ ಹೇಳಿಲ್ಲ. ಪಕ್ಷ ಏನ್ ಹೇಳುತ್ತೊ ಮಾಡಿದ್ದೆ. ಕುಮಾರಸ್ವಾಮಿ ಅವರು ಏನ್ ಸಾಚಾನಾ ಅವಕಾಶವಾದಿ ಅಲ್ವಾ?. ಇವರನ್ನ ಸಿಎಂ ಮಾಡಲಿಲ್ವಾ? ಸಿಎಂ ಆದ್ಮೇಲೆ ಒಂದು ಆದ್ಮೇಲೆ ಒಂದು..?’ ಎಂದು ಹೇಳಿದ್ದಾರೆ.

ಸದ್ಯ ಎಸ್​.ಟಿ ಸೋಮಶೇಖರ್​ ಮಾತು ಬಿಜೆಪಿ ಪಕ್ಷದ ನಾಯಕರಿಗೆ ಅಚ್ಚರಿ ಮೂಡಿಸಿದೆ. ಚುನಾವಣೆಯ ಸಮಯದಲ್ಲಿ ಇವರ ಆತ್ಮಸಾಕ್ಷಿಯ ಮಾತು ಮಾತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಭಿವೃದ್ಧಿಗೆ ನನ್ನ ಮತ’ ಎಂದ ಸೋಮಶೇಖರ್; ರಾಜ್ಯಸಭಾ ಎಲೆಕ್ಷನ್​​ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಚೆಕ್​ಮೇಟ್ ಇಟ್ರಾ..?

https://newsfirstlive.com/wp-content/uploads/2023/07/ST-Somashekar.jpg

Load More