ಕನ್ನಡ ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ದುರಂತ ಅಂತ್ಯ; ಕಾರಣವೇನು?

author-image
Veena Gangani
Updated On
ರಾಕೇಶ್ ಮಿಸ್ ಯೂ.. ಕಾಮಿಡಿ ಕಿಲಾಡಿ ಸ್ಟಾರ್​ ನಿಧನಕ್ಕೆ ನಟಿ ರಕ್ಷಿತಾ ಭಾವುಕ; ಏನಂದ್ರು?
Advertisment
  • ಕಾಮಿಡಿ ಕಿಲಾಡಿಗಳು ಮೂಲಕ‌ ಜನಮನ ಗೆದಿದ್ದ ರಾಕೇಶ್ ಪೂಜಾರಿ
  • 'ಕಾಮಿಡಿ ಕಿಲಾಡಿಗಳು ಸೀಸನ್ -3' ವಿನ್ನರ್​ ಆಗಿದ್ದ ರಾಕೇಶ್ ಪೂಜಾರಿ
  • ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದ ನಟ

'ಕಾಮಿಡಿ ಕಿಲಾಡಿಗಳು ಸೀಸನ್ -3' ವಿನ್ನರ್​ ಆಗಿದ್ದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ‌ ಜನಮನ ಗೆದಿದ್ದರು ರಾಕೇಶ್ ಪೂಜಾರಿ.

publive-image

ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ಶಿವರಾಜ್ ಕೆ ಆರ್ ಪೇಟೆ ಸಂತಾಪ ಸೂಚಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ.

ಇದನ್ನೂ ಓದಿ:Breaking: ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ

publive-image

ಸ್ನೇಹಿತನ ಮದುವೆ ಹಿನ್ನೆಲೆಯಲ್ಲಿ ಮೆಹಂದಿ ಕಾರ್ಯಕ್ರಮವೊಂದರಲ್ಲಿ ನಟ ರಾಕೇಶ್​ ಅವರು ಭಾಗಿಯಾಗಿದ್ದರು. ಇದೇ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಕಾಲ ಕಳೆದಿದ್ದರು.

publive-image

ಆದ್ರೆ, ನಿನ್ನೆ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮದಲ್ಲಿ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

publive-image

ರಾಕೇಶ್ ಪೂಜಾರಿ ಅವರು ಉಡುಪಿ ನಿವಾಸಿಯಾಗಿದ್ದರು. ನಟ ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment