ಸಿನಿಮಾದಿಂದ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ರಾಕೇಶ್ ಪೂಜಾರಿ; ಅಸಲಿಗೆ ಏನಾಯ್ತು?

author-image
Bheemappa
Updated On
ಸಿನಿಮಾದಿಂದ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ರಾಕೇಶ್ ಪೂಜಾರಿ; ಅಸಲಿಗೆ ಏನಾಯ್ತು?
Advertisment
  • ತಾಯಿ, ಸಹೋದರಿ ಇದ್ದು ಮನೆಗೆ ರಾಕೇಶ್ ಆಧಾರಸ್ತಂಭ ಆಗಿದ್ರು
  • ಮದುವೆ ಸಮಾರಂಭದಲ್ಲಿ ಕುಸಿದು ಬಿದ್ದಿದ್ದ ನಟ ರಾಕೇಶ್ ಪೂಜಾರಿ
  • ರಾಕೇಶ್ ನಿಧನದ ಸುದ್ದಿ ತಿಳಿದು ಕಾಮಿಡಿ ಕಲಾವಿದರ ತಂಡ ಕಂಬನಿ

ಉಡುಪಿ: ಕಾಮಿಡಿ ಕಿಲಾಡಿಗಳು ಸೀಸನ್- 3ರಲ್ಲಿ ಅದ್ಭುತ ಅಭಿನಯದಿಂದ ಮನರಂಜನೆ ನೀಡಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಘಾತದಿಂದ ನಿಧನರಾಗಿದ್ದಾರೆ. ಸ್ಯಾಂಡಲ್​ವುಡ್​ನ ಬಿಡುಗಡೆ ಆಗದ ಬಹು ನಿರೀಕ್ಷಿತ ಸಿನಿಮಾವೊಂದರಲ್ಲಿ ಮುಖ್ಯ ಪಾತ್ರದಲ್ಲಿ ರಾಕೇಶ್ ಪೂಜಾರಿ ಅಭಿನಯ ಮಾಡಿದ್ದರು.

ಕನ್ನಡದ ದೊಡ್ಡ ಬಜೆಟ್​ನಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾವೊಂದರ ಶೂಟಿಂಗ್ ಅನ್ನು ರಾಕೇಶ್ ಪೂಜಾರಿ ಪೂರ್ಣಗೊಳಿಸಿದ್ದರು. ಹೀಗಾಗಿ  ಸಿನಿಮಾದಿಂದಲೇ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದರು. ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಈ ಹೊಸ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು.

ತಮಗೆ ಅನಾರೋಗ್ಯ ಕಾಡುತ್ತಿರುವ ಬಗ್ಗೆ ನಿರ್ಲಕ್ಷ್ಯ ಮಾಡಿದ್ದ ರಾಕೇಶ್ ನಿದ್ರೆ, ಊಟ ಸರಿಯಾಗಿ ಇಲ್ಲದಿದ್ದಕ್ಕೆ ಹೀಗಾಗುತ್ತಿದೆ ಎಂದುಕೊಂಡಿದ್ದರು. ನಿನ್ನೆ ಕಾರ್ಕಳದಲ್ಲಿ ಮದುವೆ ಸಮಾರಂಭವೊಂದರಲ್ಲಿ ಕುಸಿದು ಬಿದ್ದಿದ್ದರು. ಆಗ ತಕ್ಷಣ ಸ್ಥಳೀಯರು ಎಲ್ಲ ಸೇರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿದೆ ಎಂದು ದೃಢ ಪಡಿಸಲಾಗಿತ್ತು.

ಇದನ್ನೂ ಓದಿ:ಕನ್ನಡ ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ದುರಂತ ಅಂತ್ಯ; ಕಾರಣವೇನು?

publive-image

ಸಿನಿಮಾಗಳಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದ  33 ವರ್ಷದ ರಾಕೇಶ್​ಗೆ ತಾಯಿ ಹಾಗೂ ಸಹೋದರಿಯ ಇದ್ದು ಮನೆಗೆ ಆಧಾರಸ್ತಂಭ ಆಗಿದ್ದರು. ಇಡೀ ಮನೆಯ ಜವಾಬ್ದಾರಿ ರಾಕೇಶ್ ಮೇಲಿತ್ತು. ಸದ್ಯ ರಾಕೇಶ್ ಸಾವಿನ ಸುದ್ದಿ ತಿಳಿದು ಕಾಮಿಡಿ ಕಲಾವಿದರ ತಂಡ ಕಂಬನಿ ಮಿಡಿಯುತ್ತಿದೆ.

ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ನಾಟಕದಲ್ಲಿ ಅಭಿನಯಿಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment