newsfirstkannada.com

Darshan: ಜಾಲೆಂಜಿಂಗ್ ಸ್ಟಾರ್​ ಕೈ ತುಂಬಾ ರಾಖಿ.. ದರ್ಶನ್​ ಜೊತೆ ರಕ್ಷಾ ಬಂಧನ ಆಚರಿಸಿದ ಸೆಲಬ್ರಿಟಿಗಳು ಯಾರು?

Share :

Published August 30, 2023 at 3:50pm

    ಇವತ್ತು ನಾಡಿನಲ್ಲೆಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ, ಸಡಗರ

    ಸಹೋದರನಿಗೆ ರಾಖಿ ಕಟ್ಟಿ ಶುಭ ಹಾರೈಸಿದ ಸಹೋದರಿಯರು

    ಚಾಲೆಂಜಿಂಗ್ ದರ್ಶನ್​ಗೆ ರಾಖಿ ಕಟ್ಟಿದ ಪಂಚತಂತ್ರ ನಟಿ ಸೋನಲ್

ಇವತ್ತು ದೇಶದೆಲ್ಲೆಡೆ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಹೋದರನಿಗೆ ರಾಖಿ ಕಟ್ಟುವ ಮೂಲಕ ಸಹೋದರಿಯರು ಶುಭ ಹಾರೈಸುತ್ತಿದ್ದಾರೆ. ಇದು ಸಹೋದರ-ಸಹೋದರಿಯ ನಡುವಿನ ಪ್ರೀತಿ, ಅನುಬಂಧ ನೂರಾರು ಕಾಲ ಇರುವಂತೆ ಗಟ್ಟಿಗೊಳಿಸುತ್ತದೆ. ರಕ್ಷಾ ಬಂಧನವನ್ನ ಸೆಲಬ್ರೆಟಿಗಳು ವಿಶೇಷವಾಗಿಯೇ ಆಚರಣೆ ಮಾಡುತ್ತಾರೆ. ಅದರಂತೆ ಇವತ್ತು ಅಭಿಮಾನಿಗಳು ಸೇರಿದಂತೆ ಕೆಲ ಸೆಲೆಬ್ರಿಟಿಗಳು ಸ್ಯಾಂಡಲ್​ವುಡ್​ ನಟ ದರ್ಶನ್​ ಅವರಿಗೆ ಕೈ ತುಂಬಾ ರಾಖಿಗಳನ್ನು ಕಟ್ಟಿದ್ದಾರೆ.

ನಟ ದರ್ಶನ್ ಪ್ರತಿ ವರ್ಷನೂ ರಕ್ಷಾ ಬಂಧನ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷ ದರ್ಶನ್ ಅವರಿಗೆ ಪಂಚತಂತ್ರ ಸಿನಿಮಾ ಖ್ಯಾತಿಯ ನಟಿ ಸೋನಲ್ ಮೊಂಟೆರಿಯೋ ರಾಖಿ ಕಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಮಿಡಿ ‌ಕಿಲಾಡಿ ಖ್ಯಾತಿಯ ನಟಿ ನಯನಾ ಅವರು ಕೂಡ ದರ್ಶನ್​ಗೆ ರಾಖಿ ಕಟ್ಟಿ ಸಂತಸಗೊಂಡರು. ರಾಖಿ ಕಟ್ಟಿದ ತಕ್ಷಣ ದರ್ಶನ್​ಗೆ ಸ್ವೀಟ್​ ತಿನಿಸಿದರು. ಇದಕ್ಕೆ ಪ್ರತಿಯಾಗಿ ದರ್ಶನ್​ ಕೂಡ ಇಬ್ಬರಿಗೂ ಸಿಹಿ ತಿನಿಸಿದರು. ಸದ್ಯ ಈ ಸಂತಸದ ಕ್ಷಣಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ತಮ್ಮ ನೆಚ್ಚಿನ ನಟ ದರ್ಶನ್​ಗೆ ರಾಖಿ ಕಟ್ಟೋದು ಎಂದರೆ ಮಹಿಳಾ ಫ್ಯಾನ್ಸ್​ಗೂ ಎಲ್ಲಿಲ್ಲದ ಸಂಭ್ರಮ. ಇವತ್ತು ಯುವತಿಯರು ದರ್ಶನ್ ಮನೆ ಬಳಿ ತೆರಳಿ ತಮ್ಮ ನೆಚ್ಚಿನ ನಟನಿಗೆ ರಾಖಿ ಕಟ್ಟಿ ಫುಲ್ ಖುಷ್ ಆಗಿದ್ದಾರೆ. ಜಾಲೆಂಜಿಂಗ್ ಸ್ಟಾರ್​ ಅವರ ಜೊತೆಗೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರ ಮೂಲಕ ತಮ್ಮ ರಕ್ಷಾ ಬಂಧನ ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Darshan: ಜಾಲೆಂಜಿಂಗ್ ಸ್ಟಾರ್​ ಕೈ ತುಂಬಾ ರಾಖಿ.. ದರ್ಶನ್​ ಜೊತೆ ರಕ್ಷಾ ಬಂಧನ ಆಚರಿಸಿದ ಸೆಲಬ್ರಿಟಿಗಳು ಯಾರು?

https://newsfirstlive.com/wp-content/uploads/2023/08/DARSHAN_RAKHI.jpg

Load More