Advertisment

ಇನ್ಮುಂದೆ ಆ್ಯಕ್ಸಿಡೆಂಟ್​​ ಆದ್ರೆ ಹೆದರೋ ಅಗತ್ಯ ಇಲ್ಲ; ವಾಹನ ಸವಾರರು ಓದಲೇಬೇಕಾದ ಸ್ಟೋರಿ!

author-image
Ganesh Nachikethu
ಇನ್ಮುಂದೆ ಆ್ಯಕ್ಸಿಡೆಂಟ್​​ ಆದ್ರೆ ಹೆದರೋ ಅಗತ್ಯ ಇಲ್ಲ; ವಾಹನ ಸವಾರರು ಓದಲೇಬೇಕಾದ ಸ್ಟೋರಿ!
Advertisment
  • ಅಪಘಾತಕ್ಕೀಡಾದವರ ನೆರವಿಗೆ ಬಂತು ಹೊಸ ಆ್ಯಪ್​​
  • ಇನ್ಮುಂದೆ ಆ್ಯಕ್ಸಿಡೆಂಟ್ ಆದ್ರೆ ಹೆದರೋ ಅಗತ್ಯ ಇಲ್ಲ..!
  • ​​​​​ವಾಹನ ಸವಾರರು ಓದಬೇಕಾದ ಪ್ರಮುಖ ಸ್ಟೋರಿ ಇದು

ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಆ್ಯಕ್ಸಿಡೆಂಟ್ ಪ್ರಕರಣ ಏರಿಕೆಯಾಗ್ತಿದೆ. ಜನ ಅಪಘಾತಕ್ಕೆ ಒಳಗಾಗಿ ಒದ್ದಾಡುವಾಗ ನೆರವಿಗೆ ಯಾರು ಬರದ ಕಾರಣ ಪ್ರಾಣ ಕಳೆದು ಕೊಳ್ತಿರುವವರ ಸಂಖ್ಯೆ ಅಧಿಕವಾಗ್ತಿದೆ. ಈ ಸಮಸ್ಯೆಗೆ ಮುಕ್ತಿಯಾಡಲು ಹೈವೇ ಡಿಲೈಟ್ ನಿರ್ಧರಿಸಿದ್ದು, ಆ್ಯಪ್ ಮೂಲಕ ಜನರ ರಕ್ಷಣೆಗೆ ಮುಂದಾಗಿದೆ‌.

Advertisment

ಸದ್ಯ ನಾವೀಗ ಡಿಜಿಟಲ್ ಜಮಾನದಲ್ಲಿ ಬದುಕ್ತಾ ಇದ್ದೀವಿ. ಅಂತರಿಕ್ಷದಿಂದ ಹಿಡಿದು ಅಡುಗೆ ಮನೆ ತನಕ ಕೂಡ ತಂತ್ರಜ್ಞಾನ ಅತ್ಯಂತ ಕ್ಷಿಪ್ರ ಗತಿಯಲ್ಲಿ ವಿಕಸನಗೊಂಡಿದೆ. ಈ ನಡುವೆ ದೇಶದಲ್ಲಿ ಹೆಚ್ಚುತ್ತಿರುವ ಆ್ಯಕ್ಸಿಡೆಂಟ್ ಸಾವು ಪ್ರಕರಣಕ್ಕೆ ಬ್ರೇಕ್ ಹಾಕಲು ಹೈವೇ ಡಿಲೈಟ್ ಸಂಸ್ಥೆ ಇದೇ ಡಿಜಿಟಲ್ ಮೂಲಕ ಮುಂದಾಗಿದ್ದು, ಕ್ಯೂ ಆರ್ ಕೋಡ್ ಮೂಲಕ ಜನರ ರಕ್ಷಣೆಗೆ ಧಾವಿಸಿದೆ.

ಏನಿದು ರಕ್ಷಾ ಕ್ಯೂ ಆರ್ ಕೋಡ್?

ರಕ್ಷಾ ಕ್ಯೂ ಆರ್ ಕೂಡ್ ಅನ್ನ ಎಲ್ಲಾ ರೀತಿಯ ವಾಹನದಲ್ಲಿ ಬಳಸಬಹುದು. ಅಪಘಾತಕ್ಕೊಳಗಾದ ವಾಹನದಲ್ಲಿರುವ ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಸಾಕು. ಆ ವ್ಯಕ್ತಿಯ ವಿವರ, ರಕ್ತದ ಗುಂಪು, ಆರೋಗ್ಯ ವಿಮೆ, ವಾಹನದ ವಿಮೆ ಬಗ್ಗೆ ಗೊತ್ತಾಗಲಿದೆ. ಕುಟುಂಬಸ್ಥರ ವಿವರ ಕೂಡ ಸಿಗಲಿದೆ. ಇದರಿಂದ ತುರ್ತು ಸಮಯದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಸಹಾಯಕ್ಕೆ ಬರಲು ಸಾಧ್ಯ. ಅಷ್ಟಕ್ಕೂ ಈ ಆ್ಯಪ್ ಹೇಗೆ ವರ್ಕ್ ಆಗುತ್ತೆ? ಯಾವ್ ರೀತಿಯಲ್ಲಿ ಯೂಸ್ ಆಗುತ್ತೆ ಅನ್ನೋದನ್ನ ರಕ್ಷಾ ರಕ್ಷಾ ಕ್ಯೂ ಆರ್ ಪ್ರೊಡಕ್ಷನ್‌ ಹೆಡ್ ಅಭಿಲಾಷ ಎಕ್ಸ್ ಪ್ಲೈನ್ ಮಾಡ್ತಾರೆ ನೋಡಿ.

ಹೇಗೆ ವರ್ಕ್​ ಆಗಲಿದೆ ಈ ರಕ್ಷಾ ಕ್ಯೂ ಆರ್ ಕೋಡ್?

ರಕ್ಷಾ ಕ್ಯೂ ಆರ್​ ಕೋಡ್​ನಿಂದ ಅಪಘಾತವಾದ ಸ್ಥಳದ ಮಾಹಿತಿ ಕೂಡ ಡಿಲೈಟ್ ಸಂಸ್ಥೆಗೆ ಸಿಗಲಿದ್ದು, ಮುಂದೆ ಸ್ಥಳೀಯ ಆಸ್ಪತ್ರೆ & ಪೊಲೀಸ್‌ ಠಾಣೆಗೆ ಮಾಹಿತಿ ರವಾನಿಸಲಾಗುತ್ತದೆ. ಈ ರೀತಿ ಮಾಡೋದ್ರಿಂದ ಅಪಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಲು ಸಹಕಾರಿಯಾಗಲಿದೆ.

Advertisment

ಒಟ್ಟಿನಲ್ಲಿ ರಕ್ಷಾ ಕ್ಯೂ ಆರ್ ಕೂಡ ಸದ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಅದ್ಹೇನೇ ಹೇಳಿ, ನಾವು ಡಿಜಿಟಲ್ ಆಗಿ ಎಷ್ಟೇ ಮುಂದುವರೆದ್ರೂ ಕೂಡ, ತುರ್ತು ಸಮಯದಲ್ಲಿ ಮಾನವೀಯತೆಯನ್ನ ಮಾತ್ರ ಮರಿಬಾರದು ಅಲ್ವಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment