/newsfirstlive-kannada/media/post_attachments/wp-content/uploads/2024/08/RAKSHABANDHAN.jpg)
ಇಂದು ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುತ್ತಿದೆ. ರಕ್ಷಾಬಂಧನ ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಜೊತೆಗೆ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ಹಬ್ಬ ಹಿನ್ನೆಲೆಯಲ್ಲಿ ಸಹೋದರಿಯರು ರಾಖಿ ಖರೀದಿಸಲು ಅಂಗಡಿಗೆ ನುಗ್ಗುತ್ತಿದ್ದಾರೆ. ನೀವು ರಾಶಿ ಫಲಾಫಲಗಳ ಮೇಲೆ ನಂಬಿಕೆ ಇಟ್ಟವರಾಗಿದ್ದರೆ, ರಾಖಿ ಖರೀದಿಗೂ ಮುನ್ನ ಒಮ್ಮೆ ಯೋಚಿಸಿ. ಯಾವುದೋ ಬಣ್ಣದ ರಾಖಿ ಕಟ್ಟುವುದರ ಬದಲಾಗಿ, ನಿಮ್ಮ ಸಹೋದರನಿಗೆ ಅದೃಷ್ಟ ತರುವ ಬಣ್ಣದ ರಾಖಿ ಕಟ್ಟಿದರೆ ಒಳ್ಳೆಯದು. ಅವರಿಗೆ ಅದೃಷ್ಟ ತಂದುಕೊಡುವ ರಾಖಿಯನ್ನು ಕಟ್ಟಿದರೆ ಇನ್ನಷ್ಟು ಒಳಿತಾಗಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ನೀವು ಇನ್ನೂ ರಾಖಿ ಖರೀದಿಸಿಲ್ಲ ಅಂದರೆ ಈ ಕೆಳಗೆ ಇರುವ ಟಿಪ್ಸ್ ಫಾಲೋ ಮಾಡಿ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ಯಾವ ರಾಶಿಗೆ ಯಾವ ಬಣ್ಣದ ರಾಖಿ..?
- ಮೇಷ: ನಿಮ್ಮ ಸಹೋದರ ಮೇಷ ರಾಶಿ ಹೊಂದಿದ್ದರೆ ಕೆಂಪು ಬಣ್ಣದ ರಾಖಿ ಕಟ್ಟಿ.. ಸಹೋದರನ ಅದೃಷ್ಟ ಬೆಳಗುತ್ತದೆ.
- ವೃಷಭ: ಈ ರಾಶಿಯನ್ನು ಶುಕ್ರನ ರಾಶಿಚಕ್ರದ ಚಿಹ್ನೆ ಎಂದು ಪರಿಗಣನೆ ಮಾಡಲಾಗುತ್ತದೆ. ಬಿಳಿ ಅಥವಾ ಬೆಳ್ಳಿ ಬಣ್ಣದ ರಾಖಿಯನ್ನು ಕಟ್ಟಿ.
- ಮಿಥುನ ರಾಶಿ: ಹಸಿರು ಬಣ್ಣದ ರಾಖಿ ಕಟ್ಟಬೇಕು
- ಕರ್ಕಾಟಕ -ಬಿಳಿ ಬಣ್ಣದ ರಾಶಿ ಕಟ್ಟಿದರೆ ನಿಮ್ಮ ಸಹೋದರನಿಗೆ ಮಂಗಳಕರ ಆಗಲಿದೆ
- ಸಿಂಹ ರಾಶಿ: ಕೆಂಪು ಅಥವಾ ಮರೂನ್ ಎರಡೂ ಬಣ್ಣಗಳು ಅದೃಷ್ಟವನ್ನು ಬದಲಾಯಿಸುತ್ತದೆ
- ಕನ್ಯಾ ರಾಶಿ: ಈ ರಾಶಿಯ ಸಹೋದರನಿಗೆ ಹಸಿರು ರಾಶಿ ಕಟ್ಟಿ
- ತುಲಾ: ಬಿಳಿ ಅಥವಾ ಬೆಳ್ಳಿ ಬಣ್ಣದ ರಾಖಿ ಜೊತೆಗೆ ಕೆನೆ ಬಣ್ಣದ ರಾಖಿ ಕಟ್ಟಿ
- ವೃಶ್ಚಿಕ ರಾಶಿ: ಕೆಂಪು ಬಣ್ಣದ ರಾಖಿ ಕಟ್ಟಬೇಕು
- ಧನುಷ್: ಹಳದಿ ಬಣ್ಣದ
- ಮಕರ: ಆಕಾಶ ನೀಲಿ
- ಕುಂಭ: ನೀಲಿ
- ಮೀನ: ಹಳದಿ
ಇದನ್ನೂ ಓದಿ:ಇಲ್ಲಿ ಸಹೋದರನಿಗೆ ರಾಖಿ ಕಟ್ಟಲ್ಲ, ಬದಲಾಗಿ ಮರಗಳಿಗೆ ಕಟ್ಟುತ್ತಾರೆ.. ಯಾಕೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ