/newsfirstlive-kannada/media/post_attachments/wp-content/uploads/2025/06/rakshak10.jpg)
ದಿನೇ ದಿನೇ ರಕ್ಷಕ್​ ಬುಲೆಟ್​ ಸಖತ್​ ಆಗಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಬಿಗ್​ಬಾಸ್​ ಸೀಸನ್ 10 ಮೂಲಕ ಫೇಮಸ್​ ಆಗಿದ್ದ ರಕ್ಷಕ್​ ಬುಲೆಟ್​ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಅದರಲ್ಲೂ ರಕ್ಷಕ್ ಬುಲೆಟ್​ಗೆ ರಮೋಲ ಜೋಡಿಯಾಗಿ ಸಿಕ್ಕಿದ್ದು ವೀಕ್ಷಕರಿಗೆ ಒಳ್ಳೆ ಮಜಾ ಕೊಡುವಂತಿದೆ.
ಇದನ್ನೂ ಓದಿ:ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್​ ಪ್ರಕರಣಕ್ಕೆ ಟ್ವಿಸ್ಟ್.. ಮಾಜಿ ಸ್ನೇಹಿತನ ಮೇಲೆ ಗುಮಾನಿ..
ಹೌದು, ರಮೋಲ ಹಾಗೂ ರಕ್ಷಕ್​ ಬುಲೆಟ್​​ ಜೋಡಿ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಮೋಡಿ ಮಾಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಮೆಂಟರ್ಸ್​ಗಳು ಬ್ಯಾಚುಲರ್ಸ್​ಗಳನ್ನು ತಮ್ಮ ತಮ್ಮ ಮನೆಗೆ ಕರೆದುಕೊಂಡು ಹೋಗಿ ಸರ್​ಪ್ರೈಸ್​ ನೀಡಿದ್ದರು.
ಅದೇ ರೀತಿ ರಮೋಲ ರಕ್ಷಕ್​ ಬುಲೆಟ್​ ಅನ್ನು ಅವರ ಅಜ್ಜಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಾಗರ ತಾಳಗುಪ್ಪದಲ್ಲಿರೋ ಮನೆಗೆ ರಕ್ಷಕ್​ ಬುಲೆಟ್​​ ಅವರನ್ನು ಗ್ರ್ಯಾಂಡ್​ ಆಗಿ ಬರಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಇಡೀ ದಿನ ರಮೋಲ ಅವರ ಇಡೀ ಕುಟುಂಬಸ್ಥರ ಜೊತೆಗೆ ಊಟ ಮಾಡಿ, ಮಸ್ತ್​ ಮಜಾ ಮಾಡಿದ್ದರು ರಕ್ಷಕ್​.
View this post on Instagram
ಇನ್ನೂ, ರಮೋಲಾ ಹುಟ್ಟೂರಾದ ಸಾಗರಕ್ಕೆ ತೆರಳಿ ವಾಪಸ್​ ಸೆಟ್​​ಗೆ ಮರಳಿದ ರಕ್ಷಕ್ ಬಗ್ಗೆ ​ರವಿಚಂದ್ರನ್ ಮಾತಾಡಿಸಿದ್ದಾರೆ. ರಕ್ಷಕ್​ಗೆ​ ಅವರ ಮನೆ ಒಳಗೆ ಹೋಗುವಾಗ ಅಳಿಯ ಎಂಬ ಭಾವನೆ ಬಂದುಬಿಟ್ಟಿದೆ. ಇಲ್ಲ ಎಂದು ಹೇಳಲಿ ಸೀಟ್ ಬಿಟ್ಟು ಹೋಗಿ ಬಿಡ್ತೀನಿ ಎಂದು ರವಿಚಂದ್ರನ್ ಹೇಳಿದರು. ಆಗ ಹೌದು ಎಂದರು ರಕ್ಷಕ್ ಬುಲೆಟ್ ವೇದಿಕೆ ಮೇಲೆ ನಾಚಿ ನೀರಾಗಿದ್ದಾನೆ. ಇದನ್ನೇ ನೋಡಿದ ರಮೋಲಾ ಫುಲ್​ ಶಾಕ್ ಆಗಿದ್ದಾರೆ. ಇತ್ತ ಈ ಜೋಡಿಯನ್ನಿ ನೋಡಿದ ಅಭಿಮಾನಿಗಳು ಕೂಡ ಪಕ್ಕಾ ನಮ್ಮ ಹುಡುಗ ರಕ್ಷಕ್​ಗೆ ಲವ್​ ಆಗೋದಿದೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ