ಕೊನೆಗೂ ಹಿಂದೂ ಸಂಘಟನೆ ಒತ್ತಾಯಕ್ಕೆ ಮಣಿದ ರಕ್ಷಕ್ ಬುಲೆಟ್‌.. ಹೊಸ ಪೋಸ್ಟ್‌ನಲ್ಲಿ ಹೇಳಿದ್ದೇನು?

author-image
admin
Updated On
ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿಯ ಯಡವಟ್ಟು.. ಇಂದು ರಕ್ಷಕ್ ಬುಲೆಟ್‌ ವಿರುದ್ಧ ದೂರು ದಾಖಲು; ಆಗಿದ್ದೇನು?
Advertisment
  • ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್‌ ಬುಲೆಟ್ ಯಡವಟ್ಟು!
  • ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಡೈಲಾಗ್ ಹೇಳಿದ್ದರು
  • ರಕ್ಷಕ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳ ಪಟ್ಟು

ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್‌ ಅವರು ಹಿಂದೂ ಸಂಘಟನೆಗಳ ಒತ್ತಾಯಕ್ಕೆ ಮಣಿದು ಕೊನೆಗೂ ಕ್ಷಮೆಯಾಚಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್‌ ಆಡಿರೋ ಒಂದು ಡೈಲಾಗ್‌ ಆಕ್ರೋಶಕ್ಕೆ ಗುರಿಯಾಗಿತ್ತು. ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ರಕ್ಷಕ್ ಬುಲೆಟ್ ಅವರು ನಾಡದೇವಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರು ಸಹ ದಾಖಲಾಗಿತ್ತು.

ಭರ್ಜರಿ ಬ್ಯಾಚುಲರ್ಸ್ ಸ್ಟೇಜ್‌ ಮೇಲೆ ರಕ್ಷಕ್ ಬುಲೆಟ್ ಅವರು ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾಳೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದರು. ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಡೈಲಾಗ್ ಅನ್ನು ರಕ್ಷಕ್ ಬುಲೆಟ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

publive-image

ಇದನ್ನೂ ಓದಿ: ಹಿಂದೂ ಸಂಘಟನೆ ಕೆಂಗಣ್ಣಿಗೆ ಗುರಿಯಾದ ರಕ್ಷಕ್ ಬುಲೆಟ್‌.. ಹುಡುಗಿ ಹೊಗಳುವ ಭರದಲ್ಲಿ ಮೈಮರೆತ್ರಾ? 

ರಕ್ಷಕ್ ಬುಲೆಟ್ ಅವರ ಡೈಲಾಗ್‌ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಮತ್ತು ಹಿಂದೂ ಪವಿತ್ರ ದೇವತೆಯಾದ ಚಾಮುಂಡೇಶ್ವರಿ ತಾಯಿಯ ಅವಹೇಳನದ ಕುರಿತು ರಕ್ಷಕ್ ಬುಲೆಟ್ ಹಾಗೂ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು.

ಹಿಂದೂ ಸಂಘಟನೆಗಳ ಕಿಡಿ ಮತ್ತು ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ನಟ ರಕ್ಷಕ್ ಬುಲೆಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಕ್ಷಮೆಯಾಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment