Advertisment

ಇನ್​ಸ್ಟಾಗ್ರಾಂನಲ್ಲಿ ಕಣ್ಣೀರಿಟ್ಟ ರಕ್ಷಕ್ ಬುಲೆಟ್! ಅಷ್ಟಕ್ಕೂ ಆಗಿರೋ ಬೇಸರವೇನು?

author-image
AS Harshith
Updated On
ಇನ್​ಸ್ಟಾಗ್ರಾಂನಲ್ಲಿ ಕಣ್ಣೀರಿಟ್ಟ ರಕ್ಷಕ್ ಬುಲೆಟ್! ಅಷ್ಟಕ್ಕೂ ಆಗಿರೋ ಬೇಸರವೇನು?
Advertisment
  • ಕಣ್ಣೀರು ಹಾಕಿದ ವಿಡಿಯೋ ಹಂಚಿಕೊಂಡ ರಕ್ಷಕ್​
  • ಒಂದು ಘಟನೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂದ ನಟ
  • ಕ್ಯಾಪ್ಶನ್​ ಬರೆಯುವಾಗಲು ನನ್ನ ಮನಸ್ಸಿಗೆ ತುಂಬಾ ನೋವಾಯ್ತು ಎಂದ ರಕ್ಷಕ್

ಸ್ಯಾಂಡಲ್​ವುಡ್​ ನಟ ದಿವಂಗತ ಬುಲೆಟ್​ ಪ್ರಕಾಶ್​ರವರ ಮಗ ರಕ್ಷಕ್​ ಬುಲೆಟ್​ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಕಣ್ಣೀರಿಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಒಂದು ಘಟನೆಯನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದು ಹೇಳಿದ್ದಾರೆ.

Advertisment

‘ಮಿಸ್​ ಯು ಅಪ್ಪಾ’ .

ರಕ್ಷಕ್​ ಬುಲೆಟ್​ ವಿಡಿಯೋದಲ್ಲಿ ತನ್ನ ತಂದೆಯ ನೆನಪಾಯ್ತು ಎಂದು ಹೇಳಿದ್ದಾರೆ. ನಾನು ತುಂಬಾ ಸ್ಟ್ರಾಂಗ್​ ಆದರೆ ತಂದೆಯ ನೆನಪಾದಾಗ ಕಣ್ಣಿನಲ್ಲಿ ನೀರು ಬರುತ್ತದೆ. 6.30 ಅಥವಾ 7 ಗಂಟೆಗೆ ಫೋಟೋ ಪೋಸ್ಟ್ ಮಾಡುತ್ತೇನೆ. ಆ ಬಟ್ಟೆ ಮೇಲೆ ನನ್ನ ತಂದೆಯ ಫೋಟೋ ಇರುತ್ತೆ. ಅದರ ಕ್ಯಾಪ್ಶನ್​ ಬರೆಯುವಾಗಲು ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಯಾಕೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.

publive-image

ನೀವೆಲ್ಲಾ ನನ್ನ ಇಷ್ಟ ಪಟ್ಟಿರಬಹುದು, ಪ್ಲಸ್​​ ಅಥವಾ ಮೈನಸ್​. ಎಲ್ಲವನ್ನು ನೋಡೋಕೆ ತಂದೆ ತಾಯಿ ಇರಬೇಕು ಲೈಫಲ್ಲಿ. ಇಲ್ಲ ಅಂತ ಹೇಳಿದಾಗ ನಾವು ಏನೇ ಮಾಡಿದ್ರು ಝಿರೋ ಆಗಿ ಬಿಡುತ್ತೇವೆ. ನೀವು ಏನೆಲ್ಲಾ ಸಕ್ಸಸ್​ ಮಾಡಬೇಕು ಅಂದುಕೊಂಡಿದ್ದೀರಾ ನಿಮ್ಮ ತಾಯಿ ತಂದೆ ಇದ್ದಾಗ ಸಕ್ಸಸ್​ ಮಾಡಿ ದಯವಿಟ್ಟು ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ‘ಮಿಸ್​​ ಯು ಅಪ್ಪಾ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಶ್ವಾನದ ಮರಿಗಳ ಮೇಲೆ ಕಾರು ಚಲಾಯಿಸಿ ಅಟ್ಟಹಾಸ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

Advertisment

ರಕ್ಷಕ್​ ಬುಲೆಟ್​ ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿರುವ ಶೋವೊಂದರಲ್ಲಿ ಭಾಗಿಯಾಗುತ್ತಿದ್ದು, ಅದರಲ್ಲಿ ತಂದೆ ಬುಲೆಟ್ ಪ್ರಕಾಶ್ ಫೋಟೋ ಇರುವ​​ ಕಪ್ಪು ಕೋಟ್​ ಧರಿಸಿದ್ದಾರೆ. ಇದನ್ನೂ ಸಹ ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment