/newsfirstlive-kannada/media/post_attachments/wp-content/uploads/2025/05/rakshak-bullet1.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಮೂಲಕ ಸಖತ್ ಫೇಮಸ್ ಆಗಿದ್ದರು ರಕ್ಷಕ್ ಬುಲೆಟ್. ಸದ್ಯ ಭರ್ಜರಿ ಬ್ಯಾಚುಲರ್ಸ್ ವೇದಿಕೆ ರಕ್ಷಕ್ ಬುಲೆಟ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?
ಹೌದು, ಬಿಗ್ಬಾಸ್ನಿಂದ ಆಚೆ ಬಂದಿದ್ದ ರಕ್ಷಕ್ ಬುಲೆಟ್ ಅವರು ಸುವರ್ಣ ಸೆಲೆಬ್ರಿಟಿ ಲೀಗ್ನಲ್ಲಿ ಭಾಗಿಯಾಗಿದ್ದರು. ಇದಾದ ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದಾರೆ. ರಕ್ಷಕ್ ಬುಲೆಟ್ಗೆ ಕನ್ನಡತಿ ಸೀರಿಯಲ್ ಖ್ಯಾತಿಯ ರೋಮಲ ಅವರು ಜೋಡಿಯಾಗಿದ್ದಾರೆ.
ಇನ್ನೂ, ಕನ್ನಡಿಗರ ಪ್ರೀತಿಯ ಅಪ್ಪು, ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಹಾದಿಯನ್ನೇ ಇದೀಗ ರಕ್ಷಕ್ ಬುಲೆಟ್ ಹಿಡಿದಿದ್ದಾರೆ. ಅಪ್ಪು ನಮ್ಮಿಂದ ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರ ನೆನಪು ಸದಾ ಹಸಿರು. ತಮ್ಮ ನೇತ್ರದಾನದ ಮೂಲಕ ಅಂಧರ ಬಾಳು ಬೆಳಗಿದ ಅಪ್ಪು, ಅಂಗಾಂಗ ದಾನದ ಅರಿವು ಮೂಡಿಸಿದ್ದರು.
ಇದನ್ನೂ ಓದಿ: ಇದು ಸಿನಿಮಾ ಅಲ್ಲ, ಸತ್ಯ.. ವಿಶ್ವದ ದೈತ್ಯ ಯಕುಮಾಮಾ ಅನಕೊಂಡ
ಇದೀಗ ಪುನೀತ್ ರಾಜ್‌ಕುಮಾರ್, ಲೋಕೇಶ್, ರಾಜ್‌ಕುಮಾರ್, ಸಂಚಾರಿ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಅಂಗಾಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದರು. ಅಂತೆಯೇ ಅವರು ಸತ್ತ ಬಳಿಕ ಅದನ್ನು ದಾನ ಮಾಡಲಾಯಿತು. ಇವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಅಂಗಾಗ ದಾನ ಮಾಡಲು ಮುಂದೆ ಬಂದ ಉದಾಹರಣೆ ಕೂಡ ಇದೆ.
ಇದೇ ಸಾಲಿನಲ್ಲಿ ರಕ್ಷಕ್ ಬುಲೆಟ್ ಕೂಡ ತಮ್ಮ ಲಿವರ್ನ ಬೇರೆಯವರಿಗೆ ಕೊಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ನಟಿ ರಮೋಲಾ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ ತಂದೆಗೆ ಲಿವರ್ ಟ್ರಾನ್ಸ್ಫಾರ್ಮೇನ್ ಮಾಡಬೇಕಿತ್ತು. ಕೆಲವರು ಬಡವರಿಗೆ ಇದು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ನಾನು ಲಿವರನ್ ದಾನ ಮಾಡ್ತೀನಿ. ಇದು ನನ್ನ ಪ್ರಾಮಿಸ್ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿದ ಬಳಿಕ ರಕ್ಷಕ್ ಜೊತೆ ನಾನು ಕೂಡ ಲಿವರ್ ದಾನ ಮಾಡುತ್ತೇನೆ ಅಂತ ರಮೋಲಾ ಹೇಳಿದ್ದಾರೆ. ಈ ವೇಳೆ ರಚಿತಾ ಅವರು ನಿಮಗೆ ಒಳ್ಳೆಯ ಹೃದಯ ಇದೆ ಎಂದು ಮೆಚ್ಚುಗೆಯ ಮಾತ್ನಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ