/newsfirstlive-kannada/media/post_attachments/wp-content/uploads/2025/05/Rakshitha-Anushri-Anchor-on-rakesh-poojari.jpg)
ಉಡುಪಿ: ಕಾಮಿಡಿ ಕಿಲಾಡಿ ಕಲಾವಿದ ರಾಕೇಶ್ ಪೂಜಾರಿ ಅಕಾಲಿಕ ನಿಧನಕ್ಕೆ ಕಿರುತೆರೆಯ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ರಾಕೇಶ್ ಪೂಜಾರಿ ತನ್ನ ತಂದೆ ಸಾವಿನ ನಂತರ ತುಂಬಾ ನೊಂದಿದ್ದ. ಆದರೆ ತಂಗಿ ಮದುವೆನೇ ಅವನ ದೊಡ್ಡ ಕನಸಾಗಿತ್ತು ಎಂದು ರಾಕಿಯನ್ನ ತುಂಬಾ ಹತ್ತಿರದಿಂದ ನೋಡಿದ ಪ್ರತಿಯೊಬ್ಬರು ಹೇಳಿದ್ದಾರೆ.
ರಾಕೇಶ್ ಪೂಜಾರಿ ಅಪಾರ ಪ್ರತಿಭಾವಂತ ನಟ. ಕಾಂತಾರ 1 ಸಿನಿಮಾಗಾಗಿ ಎಲ್ಲಾ ಅವಕಾಶ ದೂರ ಇಟ್ಟಿದ್ದ. ಇತ್ತೀಚೆಗೆ ಎಲ್ಲೂ ಜಾಸ್ತಿ ಕಾಣಿಸಿಕೊಳ್ತಿರಲಿಲ್ಲ. ಕಾಮಿಡಿ ಕಿಲಾಡಿಯಿಂದ ಬಂದ ದುಡ್ಡನ್ನೆಲ್ಲಾ ತನ್ನ ತಂಗಿ ಮದುವೆಗೆ ಎತ್ತಿಟ್ಟಿದ್ದ.
ರಾಕೇಶ್ ಪೂಜಾರಿ ನಿಧನದ ಸುದ್ದಿ ಇಂದು ಕನ್ನಡ ಕಿರುತೆರೆ ಲೋಕಕ್ಕೆ ದೊಡ್ಡ ಅಘಾತವಾಗಿತ್ತು. ರಾಕೇಶ್ ಪೂಜಾರಿಯ ಅಂತಿಮ ದರ್ಶನಕ್ಕೆ ಹಲವಾರು ನಟ, ನಟಿಯರು, ಕಲಾವಿದರು ಉಡುಪಿಗೆ ಆಗಮಿಸಿದ್ದರು.
/newsfirstlive-kannada/media/post_attachments/wp-content/uploads/2025/05/Rakesh-Poojary17.jpg)
ನಟಿ ರಕ್ಷಿತಾ ಅವರು ರಾಕೇಶ್ ಪೂಜಾರಿ ಅವರನ್ನ ತಮ್ಮನಂತೆ ಪ್ರೀತಿಸಿದ್ದರು. ಅಂತಿಮ ದರ್ಶನದ ಬಳಿಕ ಮಾತನಾಡಿದ ರಕ್ಷಿತಾ ಅವರು ರಾಕೇಶ್ ನನ್ನ ಜೊತೆ ಬಹಳ ಅನ್ಯೋನ್ಯವಾಗಿದ್ದ. ಅದ್ಭುತವಾದ ಪ್ರತಿಭೆ, ವೇದಿಕೆ ಹೊರತುಪಡಿಸಿಯೂ ಉತ್ತಮ ವ್ಯಕ್ತಿ. ಅವರ ಅಮ್ಮ ಮತ್ತು ತಂಗಿಯನ್ನು ನೋಡಿದಾಗ ಬಹಳ ಬೇಸರವಾಗುತ್ತಿದೆ. ಆರು ತಿಂಗಳ ಹಿಂದೆ ಅಪಘಾತವಾದಾಗ ಬೈದು ಬುದ್ಧಿ ಹೇಳಿದ್ದೆ. ನಮ್ಮಿಬ್ಬರ ಫೋಟೋವನ್ನು ಆತ ಬಹಳ ಕಾಲ ಡಿಪಿ ಮಾಡಿಕೊಂಡಿದ್ದ. ನಾವಿಬ್ಬರು ಅಕ್ಕ ತಮ್ಮನ ರೀತಿ ಇದ್ದೆವು ಎಂದಿದ್ದಾರೆ.
/newsfirstlive-kannada/media/post_attachments/wp-content/uploads/2025/05/Rakesh-Poojary3.jpg)
ನಿರೂಪಕಿ ಅನುಶ್ರೀ ಅವರು ಮಾತನಾಡಿ, ನಮ್ಮ ಕರಾವಳಿಯ ಅಪ್ಪಟ ಪ್ರತಿಭೆ ರಾಕೇಶ್. ಅಕ್ಕ, ಅಕ್ಕ ಎಂದು ಬಾಯಿ ತುಂಬಾ ಮನಸಾರೆ ಕರೆಯುತ್ತಿದ್ದ. ನಾನು ನನ್ನ ತಮ್ಮನನ್ನು ಕಳೆದುಕೊಂಡಿದ್ದೇನೆ. ತಮಾಷೆಗೂ ಯಾರ ಮನಸ್ಸನ್ನು ರಾಕೇಶ್ ನೋಯಿಸಿಲ್ಲ. ಕನ್ನಡದ ಶೈಲಿಯನ್ನು ಬದಲಾಯಿಸದೆ ಉಳಿಸಿಕೊಂಡಿದ್ದ. ದೇವರು ಒಳ್ಳೆಯವರನ್ನು ಬೇಗ ಕರೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ನಿರ್ದೇಶಕ ಯೋಗರಾಜ ಭಟ್ ಅವರು ಈ ಅಕಾಲಿಕ ಸಾವು ನೋವು ತಂದಿದೆ. ನಮ್ಮ ತಂಡದ ಮುದ್ದಿನ ನಟ. ಪ್ರಕೃತಿ ಎಲ್ಲರನ್ನು ಕರೆಸಿಕೊಳ್ಳುತ್ತದೆ ಆದರೆ ಇಷ್ಟು ಬೇಗ ಕರೆಸಿಕೊಳ್ಳುತ್ತೆ ಅಂದುಕೊಂಡಿರಲಿಲ್ಲ. ಕರಾವಳಿ ಭಾಗದಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಪ್ರತಿಭಾನ್ವಿತ ನಟ. ಜೀವಂತಿಕೆ ಇರುವ ಅಪರೂಪದ ನಟ ರಾಕೇಶ್ ಪೂಜಾರಿ ಎಂದರು.
ಇದನ್ನೂ ಓದಿ: VIDEO: ತಂಗಿ ಮದುವೆಯೇ ರಾಕೇಶ್ ದೊಡ್ಡ ಚಿಂತೆ.. ಶಿವರಾಜ್ ಕೆ.ಆರ್ ಪೇಟೆ, ನಟಿ ನಯನಾ ಕಣ್ಣೀರು
ಆ ನಗುವಿನ ಹಿಂದೆ ಏನು ನೋವಿತ್ತು ಗೊತ್ತಿಲ್ಲ. ಯಾವುದೇ ನೋವು ತೋರಿಸಿಕೊಳ್ಳದೆ ಎಲ್ಲರನ್ನು ನಗಿಸುತ್ತಿದ್ದ. ತಂಗಿಯ ಮದುವೆ ಕನಸು ಹೊತ್ತಿದ್ದ. ಅವನ ಕನಸುಗಳ ಬಗ್ಗೆ ಸ್ನೇಹಿತರಿಗೆ ಚೆನ್ನಾಗಿ ಗೊತ್ತು. ಮಗು, ಮನಸ್ಸಿನ ನಟ. ಕೆಲವೊಮ್ಮೆ ತೀರಾ ಒಳ್ಳೆತನ ಇದ್ದರೂ ಈ ರೀತಿ ಆಗುತ್ತದೆ ಏನೋ ಎಂದು ಯೋಗರಾಜ ಭಟ್ ಬೇಸರ ವ್ಯಕ್ತಪಡಿಸಿದರು.
/newsfirstlive-kannada/media/post_attachments/wp-content/uploads/2025/05/Yogaraj-Bhatt-On-Rakesh-Poojary.jpg)
ನಾವು ನೀವೆಲ್ಲ ಸೇರಿ ರಾಕೇಶ್ ಕನಸು ನನಸು ಮಾಡಬೇಕು. ಸದಾ ನವಲವಿಕೆಯಿಂದ ಇದ್ದು ಅಗಾಧವಾಗಿ ನಗಿಸುತ್ತಿದ್ದ. ಕರಾವಳಿ ಭಾಷೆ ಎನ್ನು ಇಟ್ಟುಕೊಂಡು ನಗಿಸಿ ಸಹೃದಯರ ಮನ ಗೆದ್ದಿದ್ದ. ನನ್ನ ನಿರ್ದೇಶನದ ಮನದ ಕಡಲಿನಲ್ಲೂ ಅಭಿನಯಿಸಬೇಕಿತ್ತು. ಜೀವನದಲ್ಲಿ ತುಂಬಾ ನೋವಿದ್ದವರಿಗೆ ಮಾತ್ರ ನಗಿಸೋಕೆ ಸಾಧ್ಯ. ಆತ ಏಕ ಸಂಧಿಗ್ರಹಿ ಒಂದು ಬಾರಿ ಕಲಿತದ್ದನ್ನು, ಹಾಗೆ ಅಭಿನಯಿಸುತ್ತಿದ್ದ. ಆತನ ಹೃದಯದಲ್ಲಿ ಏನನ್ನು ಬಿಟ್ಟು ಹೋಗುತ್ತಿಲ್ಲ ಈಗ ಆನಂದವಾಗಿ ಮಲಗಿದ್ದಾನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us