ರಮ್ಯಾಗೆ ಸಹೋದರನ ಮದುವೆ ಆಮಂತ್ರಣ ಕೊಟ್ರಾ.. ಈ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?

author-image
Bheemappa
Updated On
ರಮ್ಯಾಗೆ ಸಹೋದರನ ಮದುವೆ ಆಮಂತ್ರಣ ಕೊಟ್ರಾ.. ಈ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?
Advertisment
  • ರಾಣಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಏನು?
  • ರಕ್ಷಿತಾ ಪ್ರೇಮ್ ನಿವಾಸದಲ್ಲಿ ಮದುವೆ ಸಂಭ್ರಮ, ಸಡಗರ
  • ಮದುವೆ ಇನ್ವಿಟೇಷನ್ ಅನ್ನು ಸ್ನೇಹಿತೆ ರಮ್ಯಾಗೆ ಕೊಟ್ರಾ?

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿ ರಕ್ಷಿತಾ ಪ್ರೇಮ್‌ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಹೋದರ ಏಕ್ ಲವ್ ಯಾ ಮೂವಿ ಖ್ಯಾತಿಯ ನಟ ರಾಣಾ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಹೀಗಾಗಿ ಮದುವೆ ಆಮಂತ್ರಣವನ್ನು ಬಂಧುಗಳಿಗೆ, ಸ್ನೇಹಿತರಿಗೆ, ಗಣ್ಯರಿಗೆ ಕೊಡುತ್ತಿದ್ದಾರೆ. ಇದರ ಜೊತೆಗೆ ಸ್ಯಾಂಡಲ್‌ವುಡ್‌ನ ಪದ್ಮಾವತಿ, ನಟಿ ರಮ್ಯಾ ಅವರಿಗೆ ಮದುವೆ ಆಮಂತ್ರಣ ನೀಡಿದರ ಬಗ್ಗೆ ರಕ್ಷಿತಾ ಮಾತನಾಡಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ನಟಿ ರಕ್ಷಿತಾ ಪ್ರೇಮ್‌ ಅವರು, ಸಹೋದರ ರಾಣಾ ಮದುವೆ ಆಗುತ್ತಿರುವ ಹುಡುಗಿ ಹೆಸರು ಕೂಡ ರಕ್ಷಿತಾ ಆಗಿದೆ. ರಕ್ಷಿತಾ ಹೆಸರು ಇದ್ದಿದ್ದಕ್ಕೆ ತಮ್ಮ ಇಷ್ಟ ಪಟ್ಟಿಲ್ಲ. ಅದೊಂದು ಹೆಸರು ಕೋ ಇನ್ಸಿಡೆಂಟ್ ಆಗಿದೆ. ತುಂಬಾ ಸ್ವೀಟ್ ಗರ್ಲ್​, ಎಲ್ಲರೂ ಲೈಕ್ ಮಾಡುತ್ತಾರೆ. ಅವರಿಬ್ಬರು ಚೆನ್ನಾಗಿರಬೇಕು. ಇಬ್ಬರ ಬಾಂಡಿಂಗ್ ಬೆಸ್ಟ್ ಇದೆ. ಕುಟುಂಬದ ಜೊತೆ ಚೆನ್ನಾಗಿದ್ದರೇ ಸಾಕು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್​ನಿಂದ ಬಂದ ದಾಖಲೆಗಳು ಯಾವ್ಯಾವು ಗೊತ್ತಾ?

ಮದುವೆ ಆಮಂತ್ರಣ ಎಲ್ಲರಿಗೂ ಕೊಡಲಾಗಿದೆ. ರಮ್ಯಾ ಅವರಿಗೂ ಇನ್ವಿಟೇಷನ್ ಕೊಡಲಾಗಿದೆ. ಆದರೆ ಸದ್ಯಕ್ಕೆ ರಮ್ಯಾ ಸಿಟಿಯಲ್ಲಿ ಇಲ್ಲ. ಆದರೂ ನಾನು ಇನ್​​ಫಾರ್ಮ್ ಮಾಡಿದ್ದೇನೆ. ಇದಕ್ಕೆ ಮಿಸ್ ಮಾಡಲ್ಲ, ನಾನು ಬರುತ್ತೇನೆಂದು ರಮ್ಯಾ ಅವರು ಹೇಳಿದರು ಅಂತ ರಕ್ಷಿತಾ ಹೇಳಿದ್ದಾರೆ.

ಮದುವೆಯಲ್ಲಿ ಏನೆಲ್ಲಾ ಇದೆ ಎಂದು ಗೊತ್ತಿಲ್ಲ. ಆದರೆ ಹಳದಿ ಶಾಸ್ತ್ರ, ಮದುವೆ, ರಿಷಪ್ಷನ್ ಹಾಗೂ ಬಾಂಬೆಯಿಂದ, ಮಂಗಳೂರಿನಿಂದ ಬರುವ ಫ್ರೆಂಡ್ಸ್​ಗೆ ಕಾಕ್​ಟೈಲ್ ಇದೆ. ಇದಕ್ಕಿಂತ ಮೇಲೆ ಏನೇನಿದೆ ಎಂದು ಗೊತ್ತಿಲ್ಲ. ಸಿನಿಮಾ ಕೆಲಸ, ಮನೆಯ ಕಾರ್ಯಕ್ರಮಗಳು ಅಂತ ಪ್ರೇಮ್ ಸಖತ್ ಬ್ಯುಸಿ ಇದ್ದಾರೆ. ಈ ಹಿಂದೆ ಪ್ರೇಮ್​ ಸಹೋದರನ ಮದುವೆ ಆಗಿದ್ದಗಲೂ ಹೀಗೆ ಇದ್ದೇವು. ಈಗ ನನ್ನ ತಮ್ಮನ ಮದುವೆ ಕೂಡ ಸೇಮ್ ಆಗುತ್ತಿದೆ. ಪ್ರತಿ ಸಾರಿ ಫುಲ್ ಬ್ಯುಸಿ ಇರುತ್ತಿದ್ರು ಆದರೆ ಈ ಸಲ ಆಮಂತ್ರಣ ಕೊಡಲು ಪ್ರೇಮ್ ಜೊತೆಗೆ ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment