/newsfirstlive-kannada/media/post_attachments/wp-content/uploads/2025/07/ramya.jpg)
ಬೆಂಗಳೂರು:ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ ಅಂತ ನಟಿ ರಮ್ಯಾ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಆ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದಾರೆ.
ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!
ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಬಗ್ಗೆ ಖುದ್ದು ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದರು. ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕಾನೂನಾತ್ಮಕವಾಗಿ ಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಅಶ್ಲೀಲವಾಗಿ ನಿಂದಿಸುತ್ತಿರೋರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಲು ನಟಿ ನಿರ್ಧರಿಸಿದ್ದಾರೆ.
ಈ ಮಧ್ಯೆ ಮತ್ತೊಂದು ಬೆಳವಣಿಗೆ ಆಗಿದೆ. ಒಂದು ಕಡೆ ರಮ್ಯಾ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರೋಕೆ ಮುಂದಾಗಿದ್ದಾರೆ. ಮತ್ತೊಂದು ಕಡೆ ನಟಿ ರಕ್ಷಿತಾ ಪ್ರೇಮ್ ಅವರು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಕ್ಷಿತಾ ಪೋಸ್ಟ್ನಲ್ಲಿ ಏನಿದೆ..?
ನಟಿ ರಕ್ಷಿತಾ ಶೇರ್ ಮಾಡಿಕೊಂಡ ಒಂದು ಪೋಸ್ಟ್ನಲ್ಲಿ ನೀವು ಜನರ ಮಾನಸಿಕ ಆರೋಗ್ಯವನ್ನು ನೋಡಲು ಸಾಧ್ಯವಿಲ್ಲ. ದಯವಿಟ್ಟು ಯಾವಾಗಲೂ ದಯೆಯಿಂದಿರಿ ಅಂತ ಬರೆದಿದ್ದನ್ನು ಹಂಚಿಕೊಂಡಿದ್ದಾರೆ. ಹಾಗೇ ಮತ್ತೊಂದು ಪೋಸ್ಟ್ನಲ್ಲಿ ನಿಜವಾಗಿಯೂ ಏನು ವೈರಲ್ ಆಗುತ್ತಿರೋದನ್ನು ನೋಡಲು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವ ಸಭ್ಯತೆ ಎಂದು ಬರೆದಿರೋ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಮ್ಯಾಗೆ ಡಿಚ್ಚಿ ಕೊಟ್ರಾ ರಕ್ಷಿತಾ..?
ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ವಾರ್ ಸುದ್ದಿ ಚರ್ಚೆ ಆಗ್ತಿರುವ ಹೊತ್ತಿನಲ್ಲೇ, ರಕ್ಷಿತಾ ಪ್ರೇಮ್ ಪೋಸ್ಟ್ ಇಂಥದೊಂದು ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಮತ್ತು ದರ್ಶನ್ ಉತ್ತಮ ಸ್ನೇಹಿತರು. ಹೀಗಾಗಿ ದರ್ಶನ್ಗೆ ಬೆಂಬಲ ನೀಡಿ ರಕ್ಷಿತಾ ಪೋಸ್ಟ್ ಮಾಡಿದ್ರಾ ಎಂಬ ಚರ್ಚೆ ಶುರುವಾಗಿದೆ. ಆದರೆ, ರಕ್ಷಿತಾ ಅವರು ತಮ್ಮ ಪೋಸ್ಟ್ನಲ್ಲಿ ಯಾರ ಬಗ್ಗೆಯೂ ಮೆನ್ಷನ್ ಮಾಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ