ದರ್ಶನ್​ಗೆ ಸ್ಪೆಷಲ್ ವಿಶಸ್ ತಿಳಿಸಿದ ರಕ್ಷಿತಾ ಪ್ರೇಮ್.. ಡೈರೆಕ್ಟರ್​ ಹೇಳಿದ ಬಿಗ್ ಅನೌನ್ಸ್​ಮೆಂಟ್ ಏನು?

author-image
Bheemappa
Updated On
ದರ್ಶನ್​ಗೆ ಸ್ಪೆಷಲ್ ವಿಶಸ್ ತಿಳಿಸಿದ ರಕ್ಷಿತಾ ಪ್ರೇಮ್.. ಡೈರೆಕ್ಟರ್​ ಹೇಳಿದ ಬಿಗ್ ಅನೌನ್ಸ್​ಮೆಂಟ್ ಏನು?
Advertisment
  • ಹೊಸ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡಲು ದರ್ಶನ್ ರೆಡಿಯಾದ್ರಾ?
  • ಪ್ರೀತಿಯ ಸ್ನೇಹಿತನಿಗೆ ರಕ್ಷಿತಾ ಪ್ರೇಮ್ ಅವರು ಹೇಳಿದ್ದು ಇಲ್ಲಿದೆ
  • ದರ್ಶನ್-ಪ್ರೇಮ್ ಮಾಡುವ ಸಿನಿಮಾ ಬಗ್ಗೆ ಅನೌನ್ಸ್ ಇದೆಯಾ?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಸಾಕಷ್ಟು ಶುಭಾಶಯಗಳು ಹರಿದು ಬರುತ್ತಿವೆ. ನಿನ್ನೆ ಯುವ ನಟ ಧನ್ವೀರ್ ಅವರು ಡಿಪಿ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ಇದರಿಂದ ಡಿಬಾಸ್ ಅಭಿಮಾನಿಗಳು ಸಖತ್ ಸಂತಸ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಅವರಿಗೆ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾ ಪ್ರೇಮ್ ಅವರು ಸ್ಪೆಷಲ್ ವಿಶಸ್ ತಿಳಿಸಿದ್ದಾರೆ.

ಇವತ್ತು ತುಂಬಾ ಸ್ಪೆಷಲ್ ದಿನವಾಗಿದೆ. ಎಕೆಂದರೆ ನನ್ನ ಪ್ರಾಣ ಸ್ನೇಹಿತ ದರ್ಶನ್ ಅವರ ಹುಟ್ಟುಹಬ್ಬವಾಗಿದೆ. ಹೀಗಾಗಿಯೇ ಈ ದಿನ ತುಂಬಾ ವಿಶೇಷವಾದ ದಿನ. ನನಗೆ ಕಷ್ಟವಾದ ದಿನಗಳನ್ನು ಸುಲಭಗೊಳಿಸಿದ್ದಾರೆ. ಜೀವನದ ಸುತ್ತ ದರ್ಶನ್ ಅವರು ಇರುವಾಗ ಬದುಕು ಚೆನ್ನಾಗಿ ನಡೆಯುತ್ತಿರುತ್ತದೆ. ನಿಮ್ಮ ಮುಂದೆ ಅದ್ಭುತವಾದ ವರ್ಷಗಳು ಇದ್ದು ಎಲ್ಲದರಲ್ಲೂ ಯಶಸ್ಸು ಕಾಣಬೇಕು ಎಂದು ಹಾರೈಸಿದ್ದಾರೆ.

ನಿಮ್ಮ ಪ್ರತಿ ಒಂದು ಹೆಜ್ಜೆಗೂ ಶುಭವಾಗಲಿ ಎಂದು ನಾನು ಹಾರೈಸುತ್ತಿದ್ದೇನೆ. ಮತ್ತೊಮ್ಮೆ ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಶುಭಾಶಯಗಳು. ನೀವು ಯಾವಾಗಲೂ ನನಗೆ ಸ್ಪೆಷಲ್. ತುಂಬಾ.. ತುಂಬಾ ಧನ್ಯವಾದಗಳು ಎಂದು ರಕ್ಷಿತಾ ಪ್ರೇಮ್ ಅವರು ದರ್ಶನ್ ಅವರಿಗೆ ವಿಶ್ ಮಾಡಿದ್ದಾರೆ.

ಇದನ್ನೂ ಓದಿ:ದೇವ್ರಾಣೆಗೂ ಅಪ್ಪ ಡಾಲಿ ಮದುವೆಗೆ ಬಂದಿದ್ದು ಗೊತ್ತಿಲ್ಲ- ಸಚಿವ ಜಮೀರ್ ಅವರ ಮಗ ಹೇಳಿದ್ದೇನು?

publive-image

ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಅಭಿನಯ ಮಾಡಿದ ಸಿನಿಮಾಗಳು ಸೂಪರ್ ಹಿಟ್​. ಇವರ ಅಭಿನಯಕ್ಕೆ ಕರುನಾಡೇ ಫಿದಾ ಆಗಿತ್ತು. ಸದ್ಯ ರಕ್ಷಿತಾ ಪ್ರೇಮ್ ಅವರು ಮದುವೆಯಾದ ಮೇಲೆ ಕುಟುಂಬದ ಕೆಲಸಗಳಲ್ಲಿ ಬ್ಯುಸಿಯಾದರು. ಇತ್ತ ದರ್ಶನ್ ಅವರು ಹೊಸ ಮೂವಿಗಳಲ್ಲಿ ತಮ್ಮ ಅಭಿನಯ ಮುಂದುವರೆಸಿದ್ದಾರೆ.

ನಟಿ ರಕ್ಷಿತಾ ಅವರ ಪತಿ ನಿರ್ದೇಶಕ ಪ್ರೇಮ್ ಅವರೂ ದರ್ಶನ್​ಗೆ ವಿಶ್ ಮಾಡಿದ್ದು, ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಯಾವಾಗಲೂ ಸಂತಸದಿಂದ ಇರು. Coming back to rule again ಎಂದು ಹೇಳಿದ್ದಾರೆ. ಇದರ ಜೊತೆಗೆ ಇಂದು ಮಧ್ಯಾಹ್ನ 12 ಗಂಟೆಗೆ ಬಹು ನಿರೀಕ್ಷಿತದ ಬಿಗ್ ಅನೌನ್ಸ್​ಮೆಂಟ್ ಇದೆ ಎಂದು ಹೇಳಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಕೆವಿಎನ್ ಪ್ರೋಡಕ್ಷನ್​ನಲ್ಲಿ ಬರ್ತ್​​ಡೇ ಬಾಯ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಪ್ರೇಮ್ ಅವರು ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಪ್ರೇಮ್ ಅವರೇ 12 ಗಂಟೆ ವಿಶೇಷ ಘೋಷಣೆ ಇದೆ ಎಂದು ಹೇಳಿರುವುದು ಹೊಸ ಸಿನಿಮಾದ ಟೈಟಲ್ ಏನಾದರೂ ರಿಲೀಸ್ ಮಾಡ್ತಾರಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment