/newsfirstlive-kannada/media/post_attachments/wp-content/uploads/2025/04/Rakshitha-Bhaskar.jpg)
ಈಕೆ ಕನ್ನಡ ಕಿರುತೆರೆಯ ಕ್ಯೂಟ್ ನಟಿ ಅಂದರೆ ತಪ್ಪಾಗೋದಿಲ್ಲ. ಏಕೆಂದರೆ ನೋಡಲು ಅಷ್ಟೇ ಅಲ್ಲದೇ, ಇವರು ಆಡುವ ಮಾತು, ಹಾಡುಗಳು ಕೂಡ ಅಷ್ಟೇ ಕ್ಯೂಟ್ ಆಗಿದೆ. ಇವರು ಬೇರೆ ಯಾರು ಅಲ್ಲ ಕನ್ನಡ ಕಿರುತೆರೆ ನಟಿ ರಕ್ಷಿತಾ ಭಾಸ್ಕರ್.
ಇದನ್ನೂ ಓದಿ: ಗಿಲ್ಲಿ ಇಲ್ಲದ ಗಗನಾ ಎಲ್ಲಿ ಕಾಂತ.. ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಧೂಳೆಬ್ಬಿಸಿದ ನಟ; VIDEO
ಸತ್ಯ ಸೀರಿಯಲ್ನಲ್ಲಿ ರೀತು ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದಾರೆ ನಟಿ ರಕ್ಷಿತಾ ಭಾಸ್ಕರ್. ಈ ರೀತು ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು ರಕ್ಷಿತಾ ಭಾಸ್ಕರ್. ಅಷ್ಟೇ ಅಲ್ಲದೇ ನಟಿ ರಕ್ಷಿತಾ ಭಾಸ್ಕರ್ ಅವರು ಅಭಿನಯದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರೋ ರಕ್ಷಿತಾ ಅವರು ಅದ್ಭುತ ಹಾಡುಗಾರ್ತಿ ಹೌದು. ಸಂಗೀತ ದಿಗ್ಗಜ, ಗಾನ ಕೋಗಿಲೆ ಎಸ್.ಪಿ ಬಾಲಸುಬ್ರಮಣ್ಯಂ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮವಾದ ಎದೆ ತುಂಬಿ ಹಾಡುವೆನು 2006ರ ವಿನ್ನರ್ ಕೂಡ ಆಗಿದ್ದವರು.
ಇದನ್ನೂ ಓದಿ:ಬಹುದಿನಗಳ ಕನಸು ನನಸು ಮಾಡಿಕೊಂಡ ‘ಎದೆ ತುಂಬಿ ಹಾಡುವೆನು’ ವಿನ್ನರ್ ರಕ್ಷಿತಾ ಭಾಸ್ಕರ್; ಏನದು?
View this post on Instagram
ಬಾಲ ಕಲಾವಿದೆ ಆಗಿ ರಂಜಿಸಿದ್ದ ಇವರು ಗಾಯಕ ವಾಸುಕಿ ವೈಭವ್ ಅವರ ಪತ್ನಿ ಬೃಂದಾ ಅವರ ತಂಡದಲ್ಲಿ ಸರಿಗಮಪ ಶೋನ ವಿನ್ನರ್ ದರ್ಶನ್ ನಾರಾಯಣ ಜೊತೆ ರಂಗಭೂಮಿಯಲ್ಲೂ ರಕ್ಷಿತಾ ಸಕ್ರಿಯರಾಗಿದ್ರು. ಅಭಿನಯದ ಜೊತೆಗೆ ರಕ್ಷಿತಾ ಹಾಡಿನ ಮಾಧುರ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿವೆ. ಸಾಕಷ್ಟು ಪ್ರತಿಭೆಯನ್ನು ಹೊಂದಿರೋ ರಕ್ಷಿತಾ ಸಂಗೀತಕ್ಕೆ ಮಾರು ಹೋಗಿದ್ದಾರೆ.
ಇನ್ನೂ ನಟಿ ರಕ್ಷಿತಾ ಭಾಸ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಕೂಡ ಆಗಿದ್ದಾರೆ. ಭಿನ್ನ ವಿಭಿನ್ನವಾಗಿ ಫೋಟೋಶೂಟ್ ಮಾಡಿಕೊಂಡು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಮರುಭೂಮಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋ ಶೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ