ಜೈಲಲ್ಲಿರೋ ದರ್ಶನ್​​ ಬಗ್ಗೆ ಸೆಲೆಬ್ರಿಟಿಗಳ ಡಿಫರೆಂಟ್​​ ಡಿಫರೆಂಟ್​ ಮಾತುಗಳು! ಒಬ್ಬೊಬ್ರು ಏನಂತಾರೆ? ಇಲ್ಲಿದೆ ನೋಡಿ

author-image
AS Harshith
Updated On
ಜೈಲಲ್ಲಿರೋ ದರ್ಶನ್​​ ಬಗ್ಗೆ ಸೆಲೆಬ್ರಿಟಿಗಳ ಡಿಫರೆಂಟ್​​ ಡಿಫರೆಂಟ್​ ಮಾತುಗಳು! ಒಬ್ಬೊಬ್ರು ಏನಂತಾರೆ? ಇಲ್ಲಿದೆ ನೋಡಿ
Advertisment
  • ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್
  • ನಟ ದರ್ಶನ್ ಭೇಟಿಯಾದ ರಕ್ಷಿತಾ- ಪ್ರೇಮ್​​ ದಂಪತಿ ಏನಂದ್ರು?
  • ವಿಜಯಲಕ್ಷ್ಮೀ ಬಗ್ಗೆ ಸ್ನೇಹಿತೆ ಶಮಿತಾ ಮಲ್ನಾಡ್ ಬಿಚ್ಚಿಟ್ರು ಸೀಕ್ರೆಟ್​

ತೆರೆಯ ಮೇಲೆ ಅಬ್ಬರಿಸಬೇಕಿದ್ದ ನಟ ದರ್ಶನ್​, ಜೈಲಿನಲ್ಲಿ ಕಂಬಿ ಎಣಿಸ್ತಿದ್ದಾರೆ. ಸಣ್ಣ ಕೋಣೆಯಲ್ಲಿರೋ ದರ್ಶನ್​ಗೆ ಮೌನವೇ ಮಾತಾಗಿದೆ. ಆಪ್ತರು ಭೇಟಿ ಕೊಟ್ಟು ಸಮಾಧಾನ ಹೇಳ್ತಿದ್ರೂ ಬೇಸರ ಕಡಿಮೆಯಾಗ್ತಿಲ್ಲ. ಅತ್ತ ಪತ್ನಿ ವಿಜಯಲಕ್ಷ್ಮೀ ಧೈರ್ಯದಿಂದ ಪತಿಗಾಗಿ ಹೋರಾಟದ ಹೆಜ್ಜೆ ಇಟ್ಟಿದ್ದಾರೆ.

ಪಟ್ಟಣಗೆರೆ ಶೆಡ್​​​ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಮಾಡಿ ಕೊಂದ ಡಿ ಗ್ಯಾಂಗ್​ ಈಗ ಕಂಬಿ ಎಣಿಸ್ತಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​​ ಈಗಾಗಲೇ ಜೈಲಿನಲ್ಲಿ 8 ದಿನಗಳನ್ನ ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ನಟ ದರ್ಶನ್ ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಸ್ಟೇಷನ್​​ನಲ್ಲಿ ಓಡಾಡಿಕೊಂಡಿದ್ದ ದರ್ಶನ್ ಮೌನಕ್ಕೆ ಜಾರಿದ್ದಾರೆ. ಯಾರೊಂದಿಗೂ ಮಾತನಾಡದೇ ಮೌನಂ ಶರಣಂ ಗಚ್ಛಾಮಿ ಮಂತ್ರ ಜಪಿಸ್ತಿದ್ದಾರೆ. ದರ್ಶನ್​ರನ್ನ ನೋಡೋಕೆ ಬಂದವರ ಮುಂದೆಯೂ ಹೆಚ್ಚೇನೂ ಮಾತನಾಡ್ತಿಲ್ವಂತೆ. ಮೌನವಾಗಿಯೇ ಕಾಲ ದೂಡ್ತಿದ್ದಾರೆ.

ಜೈಲಲ್ಲಿ ನಟ ದರ್ಶನ್ ಭೇಟಿಯಾದ ರಕ್ಷಿತಾ ದಂಪತಿ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರೋ ದರ್ಶನ್ ನೋಡೋದಕ್ಕೆ ನಟಿ ರಕ್ಷಿತಾ ಹಾಗೂ ಪ್ರೇಮ್ ದಂಪತಿ ಆಗಮಿಸಿದ್ರು. ಕಾರಿನಲ್ಲಿಯೇ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟ ಇವರಿಬ್ಬರು ಕೆಲ ಹೊತ್ತು ದರ್ಶನ್​ ಜೊತೆಗೆ ಮಾತುಕತೆ ನಡೆಸಿದ್ರು.

ಇದನ್ನೂ ಓದಿ: ತರುಣ್​ ಸುಧೀರ್​​ ಜೊತೆ ಸೋನಾಲ್​ ಮದುವೆ ಎಷ್ಟು ನಿಜ? ಈ ಬಗ್ಗೆ ನಟಿ ಏನಂದ್ರು?

ಜೈಲಿನಲ್ಲಿ ದರ್ಶನ್ ಭೇಟಿಯಾದ ನಟಿ ರಕ್ಷಿತಾ ಹಾಗೂ ಪ್ರೇಮ್ ದಂಪತಿ, ಬಳಿಕ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ್ರು. ಹದಿನೈದು ಇಪ್ಪತ್ತು ದಿನದಿಂದ ಹೀಗಾಗ್ತಿರೋದು ದುರದುಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಅಂತ ಹೇಳಿದ್ರು. ಅತ್ತ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದ ಪ್ರೇಮ್, ಕೋರ್ಟ್​ನಲ್ಲಿ ಪ್ರಕರಣ ನಡೀತಿರೋದ್ರಿಂದ ಜಾಸ್ತಿ ಮಾತಾಡಲ್ಲ ಅಂತಾ ಹೇಳಿದ್ರು.

ಇದನ್ನೂ ಓದಿ: ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ.. ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೊಹ್ಲಿ ಭಾವುಕ ಮಾತುಗಳು..!

ಇನ್ನೊಂದೆಡೆ, ದರ್ಶನ್ ಪ್ರಕರಣದ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ಮಾತನಾಡಿದ್ದಾರೆ. ದರ್ಶನ್ - ವಿಜಯಲಕ್ಷ್ಮಿ ಲವ್, ಲೈಫ್ ಸ್ಟೋರಿ ಬಗ್ಗೆ ಒಂದಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಜೊತೆಗೆ ಶಮಿತಾ ಮಾತುಕತೆ ನಡೆಸಿದ್ದು, ಅವರು ಧೈರ್ಯವಾಗಿದ್ದಾರೆ ಅಂತಾ ತಿಳಿಸಿದ್ದಾರೆ. ಇಂಥಾ ಸಮಯದಲ್ಲಿ ಸ್ಟ್ರಾಂಗ್ ಆಗಿ ನಿಂತಿರೋ ದರ್ಶನ್ ಪತ್ನಿಯನ್ನ ಗಟ್ಟಿಗಿತ್ತಿ ಅಂತಾ ಶಮಿತಾ ಕರೆದಿದ್ದಾರೆ.

ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಟಿ.. ರಶ್ಮಿ ಆರೋಗ್ಯಕ್ಕೆ ಏನಾಯ್ತು?

ಒಟ್ಟಿನಲ್ಲಿ ದರ್ಶನ್​ ಈ ಪ್ರಕರಣದಿಂದ ಮುಕ್ತರಾಗಿ ಹೊರಬರ್ತಾರೆ ಅನ್ನೋ ನಂಬಿಕೆ ವಿಜಯಲಕ್ಷ್ಮೀಗೆ ಇದೆ ಅಂತಾ ಗಾಯಕಿ ಶಮಿತಾ ಮಲ್ನಾಡ್ ತಿಳಿಸಿದ್ದಾರೆ. ಅತ್ತ ಜೈಲಿನಲ್ಲಿರೋ ದರ್ಶನ್ ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment