ರಕುಲ್​ ಪ್ರೀತ್​​ ಸಿಂಗ್​ ವೆಡ್ಡಿಂಗ್​​ ಕಾರ್ಡ್ ವೈರಲ್​​​! ಮೋದಿ ಹೇಳಿದಂತೆ ಈ ಜೋಡಿ ಮದುವೆ ಆಗ್ತಿರೋದು ಎಲ್ಲಿ ಗೊತ್ತಾ?

author-image
AS Harshith
Updated On
ರಕುಲ್​ ಪ್ರೀತ್​​ ಸಿಂಗ್​ ವೆಡ್ಡಿಂಗ್​​ ಕಾರ್ಡ್ ವೈರಲ್​​​! ಮೋದಿ ಹೇಳಿದಂತೆ ಈ ಜೋಡಿ ಮದುವೆ ಆಗ್ತಿರೋದು ಎಲ್ಲಿ ಗೊತ್ತಾ?
Advertisment
  • ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ವಿವಾಹ
  • ಜಾಕಿ ಭಗ್ನಾನಿ ಜೊತೆಗೆ ಸಪ್ತಪದಿ ತುಳಿಯಲು ರೆಡಿಯಾದ ನಟಿ
  • ವಿದೇಶದಲ್ಲಿ ಮದುವೆ ಆಗಲು ನಿರ್ಧರಿಸಿದ ಜೋಡಿ ಕ್ಯಾನ್ಸಲ್​ ಮಾಡಿದ್ಯಾಕೆ?

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಮದುವೆ ನಿಶ್ಚಯವಾಗಿದ್ದು ಇವರ ವೆಡ್ಡಿಂಗ್ ಕಾರ್ಡ್ ಜಾಲತಾಣದಲ್ಲಿ​ ವೈರಲ್ ಆಗಿದೆ. ಎರಡು ಪುಟದ ವೆಡ್ಡಿಂಗ್ ಕಾರ್ಡ್ ಇದಾಗಿದ್ದು ಬಿಳಿ ಹಾಗೂ ಹಸಿರು ಥೀಮ್ ಹೊಂದಿದೆ.

ಮೊದಲ ಪುಟದಲ್ಲಿ ಸುಂದರವಾದ ಸಮುದ್ರ ತೀರವಿದೆ. ಇನ್ನು 2ನೇ ಪುಟದಲ್ಲಿ ಫೆಬ್ರವರಿ 21 ಎಂದು ಮದುವೆ ದಿನಾಂಕ ಪ್ರಕಟಿಸಲಾಗಿದೆ. ಗೋವಾದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ.

ಆರಂಭದಲ್ಲಿ ವಿದೇಶದಲ್ಲಿ ಮದುವೆಯಾಗಲು ಈ ಜೋಡಿ ನಿರ್ಧರಿಸಿತ್ತು. ಆದ್ರೆ ಪ್ರಧಾನಿ ಮೋದಿ, ವಿಶೇಷ ಸಂದರ್ಭಗಳನ್ನು ದೇಶದೊಳಗೆ ಆಚರಿಸಲು ಕರೆ ನೀಡಿದ ಬೆನ್ನಲ್ಲೇ ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

publive-image

ರಕುಲ್​ ಪ್ರೀತ್​ ಗೆಳೆಯ ಜಾಕಿ ‘ಬಡೇ ಮಿಯಾನ್​ ಚೋಟೆ ಮಿಯಾನ್’​ ಎಂಬ ಅಪ್​ಕಮ್ಮಿಂಗ್​ ಆ್ಯಕ್ಷನ್​ ಸಿನಿಮಾದ ಪ್ರೊಡಕ್ಷನ್​ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ಶ್ರಾಫ್​ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ರಕುಲ್​ ಪ್ರೀತ್​ ಕೈಯಲ್ಲಿ ಹಲವು ಪ್ರಾಜೆಕ್ಟ್ಸ್​​​ಗಳಿವೆ. ಪ್ಯಾರ್ ದೆ ಸೀಕ್ವೆಲ್​​ ವಿತ್​​ ಅಜಯ್​ ದೇವಗನ್​, ಬಿ-ಲಿಂಗ್ವಲ್​ ಇಂಡಿಯನ್​ 2 ಮತ್ತು ಭೂಮಿ ಪಡ್ನೇಕರ್​ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment