/newsfirstlive-kannada/media/post_attachments/wp-content/uploads/2025/02/SHIVANNA-7.jpg)
ನಿರ್ದೇಶಕರು ಚಿತ್ರಗಳಿಗೆ ತಂತ್ರಜ್ಞಾನದ ಟಚ್ ಕೊಟ್ಟು, ಸಿನಿಮಾವನ್ನು ನೆಕ್ಸ್ಟ್ ಲೇವಲ್ಗೆ ಕೊಂಡೊಯ್ಯಲು ಬಯಸುತ್ತಾರೆ. ಆದರೆ, ಇಲ್ಲಿ ಎಲ್ಲವೂ ಉಲ್ಟಾಪಲ್ಟಾ! ಹೌದು, ರಾಮ್ ಚರಣ್ (Ram Charan) ಚಿತ್ರಕ್ಕಾಗಿ ನಿರ್ದೇಶಕ ಬುಚಿ ಬಾಬು (Buchi Babu Sana) 20 ವರ್ಷಗಳ ಹಿಂದಕ್ಕೆ ಹೋಗುತ್ತಿದ್ದಾರೆ.
ರಾಮ್ ಚರಣ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ RC16 ಚಿತ್ರಕ್ಕೆ ಅವರು ಹಿಂದಿನ ಕಾಲದ ತಂತ್ರಜ್ಞಾನವನ್ನು ಮತ್ತೆ ಕ್ಯಾಮೆರಾಗೆ ತರುತ್ತಿದ್ದಾರೆ. ಬುಚಿ ಬಾಬು ಈ ಚಿತ್ರದಲ್ಲಿ ಹಳೆಯ ತಂತ್ರಜ್ಞಾನವನ್ನು ಹೊಸ ರೀತಿಯಲ್ಲಿ ಬಳಸಲಿದ್ದಾರೆ. ಅದೇ ವಿಚಾರ ಇದೀಗ ಭಾರೀ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ ಛಾಯಾಗ್ರಾಹಕ ರತ್ನವೇಲು ಕೆಲವು ದೃಶ್ಯಗಳಿಗಾಗಿ ನೆಗೆಟಿವ್ ರೀಲ್ ಬಳಸಲಿದ್ದಾರೆ ಎಂದು ವರದಿಯಾಗಿದೆ. RC16 ಒಂದು ಪಿರಿಯಾಡಿಕ್ (Periodic) ಸಿನಿಮಾ. ಹಾಗಾಗಿ ಕೆಲವು ದೃಶ್ಯಗಳನ್ನು ರೀಲ್‌ನಲ್ಲಿ ಚಿತ್ರೀಕರಿಸುವುದು ಉತ್ತಮ ಎಂದು ಭಾವಿಸಿದ್ದಾರಂತೆ.
ಇದನ್ನೂ ಓದಿ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?
ಕ್ರಿಸ್ಟೋಫರ್ ನೋಲೆನ್ ಹಾಲಿವುಡ್‌ನಲ್ಲಿ ‘ಓಪನ್ ಹೌಸ್’ ಚಿತ್ರವನ್ನು ಈ ರೀತಿ ಚಿತ್ರೀಕರಿಸಿ ರೀಲ್‌ಗಳನ್ನು ಸಂರಕ್ಷಿಸಿದ್ದರು. RC16ನ ಕೆಲವು ದೃಶ್ಯಗಳಿಗೆ ಅದೇ ರೀತಿ ಮಾಡಲು ಚಿತ್ರತಂಡ ನೋಡುತ್ತಿದೆ. ಇದು ವರ್ಕೌಟ್ ಆದಲ್ಲಿ, ಟಾಲಿವುಡ್‌ನಲ್ಲಿ ಮತ್ತೆ ನೆಗೆಟಿವ್ ರೀಲ್ ಮೇಕಿಂಗ್‌ಗೆ ಉತ್ತೇಜನ ಸಿಗುತ್ತದೆಯೇ ಎಂಬ ಪ್ರಶ್ನೆ ಶುರುವಾಗಿದೆ. ಅಂದ್ಹಾಗೆ ಈ ಚಿತ್ರದಲ್ಲಿ ನಮ್ಮ ಶಿವಣ್ಣ ಕೂಡ ಇದ್ದಾರೆ. ಜಾಹ್ನವಿ ಕಪೂರ್, ವಿಜಯ್ ಸೇತುಪತಿ ಕೂಡ ಇದ್ದಾರೆ. ಅಲ್ಲದೇ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಸಂಗೀತ ಇದೆ.
ಇದನ್ನೂ ಓದಿ: ಪ್ರತಿಷ್ಠಿತ ವೇದಿಕೆಗೆ ನಗ್ನವಾಗಿ ಎಂಟ್ರಿ ಕೊಟ್ಟ ಮಾಡೆಲ್.. ‘ಗ್ರ್ಯಾಮಿ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಸಂಚಲನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ