/newsfirstlive-kannada/media/post_attachments/wp-content/uploads/2025/01/RAM_CHARAN.jpg)
ಭಾರತದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್.ಎಸ್ ರಾಜಮೌಳಿ ಅವರ ಮೂವಿಗಳಿಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚು. ಸ್ಟಾರ್ ಡೈರೆಕ್ಟರ್ ಯಾವ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರೋ ಅದಕ್ಕೆ 100ಕ್ಕೆ ನೂರರಷ್ಟು ಶ್ರಮ ವಹಿಸುತ್ತಾರೆ. ಅಲ್ಲದೇ ಶೂಟಿಂಗ್ ಸಮಯದಲ್ಲಿ ಒಂದು ಸೆಕೆಂಡ್ ವಿಡಿಯೋ ಕೂಡ ಲೀಕ್ ಆಗದಂತೆ ಜಾಗ್ರತೆ ವಹಿಸುತ್ತಾರೆ. ಸದ್ಯ ಇದೀಗ ಇದೇ ಹಾದಿಯಲ್ಲಿ ಯಂಗ್ ಮೆಗಾ ಸ್ಟಾರ್ ರಾಮ್ ಚರಣ್ ಸಾಗಿದ್ದಾರೆ.
ರಾಮ್ ಚರಣ್ ಅವರು ಅಭಿನಯದ ಗೇಮ್ ಚೈಂಜರ್ ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆಗಿತ್ತು. ಇದರ ಬೆನ್ನಲ್ಲೇ ನಟ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಉಪ್ಪೇನಾ ಮೂವಿಯಲ್ಲಿ ಯಶಸ್ಸು ಕಂಡ ನಿರ್ದೇಶಕ ಬುಚ್ಚಿ ಬಾಬು ಇದೀಗ ರಾಮ್ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೆಸರಿಡದ ಮೂವಿಯ ಶೂಟಿಂಗ್ ನಡೆಯುತ್ತಿದ್ದು ಸಿನಿಮಾಕ್ಕಾಗಿ ರಾಮ್ಚರಣ್, ರಾಜಮೌಳಿಯಂತೆ ಕಠಿಣ ನಿಯಮ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ.. ಲಿಂಕ್ ಇಲ್ಲಿದೆ!
ನಿರ್ದೇಶಕ ಬುಚ್ಚಿ ಬಾಬು ಹಾಗೂ ರಾಮ್ಚರಣ್ ಹೊಸದೊಂದು ಸಿನಿಮಾ ಮಾಡುತ್ತಿದ್ದು ಆರ್ಸಿ16 ಎಂದು ಸದ್ಯಕ್ಕೆ ಕರೆಯಲಾಗುತ್ತಿದೆ. ಇನ್ನು ಇದಕ್ಕೆ ಹೆಸರು ಇಟ್ಟಿಲ್ಲ. ಸದ್ಯದಲ್ಲೇ ಟೈಟಲ್ ಘೋಷಣೆ ಮಾಡಲಾಗುತ್ತದೆ. ಆದರೆ ಈ ಸಿನಿಮಾದ ಯಾವೊಂದು ವಿಡಿಯೋ ಕೂಡ ಲೀಕ್ ಆಗಬಾರದು ಎಂದು ರಾಮ್ ಚರಣ್ ತಮ್ಮ ಸಿನಿಮಾ ತಂಡಕ್ಕೆ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ. ಸೆಟ್ ಒಳಗೆ ಯಾರು ಕೂಡ ಮೊಬೈಲ್ ಬಳಸಬಾರದು. ಫೋಟೋ ಕ್ಲಿಕ್ ಮಾಡಬಾರದು. ಸಿನಿಮಾ ಕಂಟೆಂಟ್ ಎಲ್ಲಿಯೂ ಲೀಕ್ ಆಗಲೇಬಾರದು ವಾರ್ನಿಂಗ್ ಮಾಡಿದ್ದಾರೆ.
ಇನ್ನು ಗೇಮ್ ಚೈಂಜರ್ ಸಿನಿಮಾದಲ್ಲಿ ನಿರ್ದೇಶಕ ಆರ್.ಶಂಕರ್ ಜೊತೆ ರಾಮ್ ಚರಣ್ ಅವರು ಕೆಲಸ ಮಾಡಿದ್ದರು. ರಾಜಮೌಳಿ ಅವರ ಸಿನಿಮಾಗಳಲ್ಲೂ ಚರಣ್ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ಡೈರೆಕ್ಟರ್ ಜೊತೆ ಮೂವಿ ಮಾಡಿದ್ದ ರಾಮ್ಚರಣ್ ಇದೀಗ ಬುಚ್ಚಿಬಾಬುಗೆ ಕಾಲ್ಶೀಟ್ ಕೊಟ್ಟಿದ್ದು ಸಿನಿಮಾದ ಕೆಲಸ ಭರದಿಂದ ಸಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ